ಮುಖಂಡ ಕರಬಸಪ್ಪ ಹಂಚಿನಾಳ ಮಾತನಾಡಿ, ಬಚ್ಚೇರಿಯವರನ್ನು ಇಲಾಖೆ ಯಾವುದೇ ಪ್ರಕರಣ ಪತ್ತೆ ಹಚ್ಚಲು ನೇಮಿಸಿದರೂ ಅವುಗಳಲ್ಲಿ ಸದಾ ಯಶಸ್ವಿಯಾಗುತ್ತಾ ಬಂದಿದ್ದಾರೆ. ಅವರು ನಮ್ಮ ತಾಲೂಕಿನ ಹೆಮ್ಮೆ ಎಂದರು.
ಮುಂಡರಗಿ: ನಾನು ಕಡುಬಡತನದಲ್ಲಿ ಬೆಳೆದ ವ್ಯಕ್ತಿ. ಎಲ್ಲರೂ ಸಹಾಯ ಮಾಡಿದ್ದರ ಫಲವಾಗಿ ಈ ಸಾಧನೆ ಸಾಧ್ಯವಾಗಿದೆ. ಕಳೆದ ವರ್ಷ ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಪ್ರಶಂಸನಾ ಪದಕ, ಪ್ರಸ್ತುತ ವರ್ಷ ಮುಖ್ಯಮಂತ್ರಿಗಳ ಪದಕಕ್ಕೆ ಆಯ್ಕೆಯಾಗಿದ್ದು, ಇದಕ್ಕೆ ಇಲಾಖೆ ಪ್ರೋತ್ಸಾಹ ಹಾಗೂ ಸಾರ್ವಜನಿಕರ ಸಹಕಾರ ಕಾರಣ ಎಂದು ಮುಂಡರಗಿ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಹೆಡ್ ಕಾನ್ಸಟೇಬಲ್ ಜಾಫರ್ ಬಚ್ಚೇರಿ ತಿಳಿಸಿದರು.
ಇತ್ತೀಚೆಗೆ ಬೆಂಗಳೂರಿನಲ್ಲಿ ಕರ್ನಾಟಕ ಸರ್ಕಾರ ರಾಜ್ಯ ಪೊಲೀಸ್ ಇಲಾಖೆಗೆ ಕೊಡಮಾಡುವ 2025ನೇ ಸಾಲಿನ ಮುಖ್ಯಮಂತ್ರಿಗಳ ಪದಕ ಸ್ವೀಕರಿಸಿದ ಹಿನ್ನೆಲೆ ಮಂಗಳವಾರ ಪಟ್ಟಣದ ಬಸವಾ ಏಜೆನ್ಸಿಯಲ್ಲಿ ಗೆಳೆಯರ ಬಳಗದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಯಾವುದೇ ಪ್ರಕರಣ ಬೆನ್ನತ್ತಿ ಹೋದಾಗಲೂ ಇಲಾಖೆ ಪ್ರೋತ್ಸಾಹ ಹಾಗೂ ಎಲ್ಲರ ಆಶೀರ್ವಾದ ಸಿಕ್ಕಿದೆ. ಕಳ್ಳತನವಾದ ದಿನವೇ ಅನೇಕ ಪ್ರಕರಣಗಳನ್ನು ಇಲಾಖೆ ಸಹಕಾರದಿಂದ ಪತ್ತೆ ಹಚ್ಚಿದ್ದೇವೆ ಎಂದರು.ಮುಖಂಡ ಕರಬಸಪ್ಪ ಹಂಚಿನಾಳ ಮಾತನಾಡಿ, ಬಚ್ಚೇರಿಯವರನ್ನು ಇಲಾಖೆ ಯಾವುದೇ ಪ್ರಕರಣ ಪತ್ತೆ ಹಚ್ಚಲು ನೇಮಿಸಿದರೂ ಅವುಗಳಲ್ಲಿ ಸದಾ ಯಶಸ್ವಿಯಾಗುತ್ತಾ ಬಂದಿದ್ದಾರೆ. ಅವರು ನಮ್ಮ ತಾಲೂಕಿನ ಹೆಮ್ಮೆ ಎಂದರು.ಕೊಟ್ರೇಶ ಅಂಗಡಿ, ಎಸ್.ವಿ. ಪಾಟೀಲ ಮಾತನಾಡಿ, ಬಚ್ಚೇರಿಯವರು ಅನೇಕ ಪ್ರಕರಣಗಳನ್ನು ಪತ್ತೆ ಹಚ್ವುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಇಂತಹ ಅಧಿಕಾರಿಗೆ ಮುಖ್ಯಮಂತ್ರಿ ಪದಕ ದೊರೆತಿರುವುದು ಹೆಮ್ಮೆ ತಂದಿದೆ ಎಂದರು.
ರಜನಿಕಾಂತ ದೇಸಾಯಿ ಮಾತನಾಡಿ, ಬಚ್ಚೇರಿಯವರು ನಾನು ಬಾಲ್ಯದ ಸ್ನೇಹಿತರು. ಬಾಲ್ಯದಲ್ಲಿ ಸಾಕಷ್ಟು ಪರಿಶ್ರಮ ಪಟ್ಟು ದುಡಿದಿದ್ದರ ಫಲವಾಗಿ ಸರ್ಕಾರಿ ಸೇವೆ ದೊರೆತಿದೆ ಎಂದರು.ಈ ಸಂದರ್ಭದಲ್ಲಿ ರಜನೀಕಾಂತ ದೇಸಾಯಿ ಸೇರಿದಂತೆ ಎಲ್ಲ ಗೆಳೆಯರ ಬಳಗದಿಂದ ಸನ್ಮಾನಿಸಲಾಯಿತು. ಎಸ್.ಡಿ. ಚವಡಿ, ಶಂಭುಲಿಂಗನಗೌಡ ಹಕ್ಕಂಡಿ, ಚಿನ್ನಪ್ಪ ವಡ್ಡಟ್ಟಿ, ಸಿದ್ದು ದೇಸಾಯಿ, ಸೋಮಶೇಖರ ಹಕ್ಕಂಡಿ, ವೆಂಕಟೇಶ ದೇಸಾಯಿ, ವೀರೇಶ ಹಡಗಲಿ, ಪ್ರಕಾಶ ದೇಸಾಯಿ, ಮುತ್ತು ಅಳವಂಡಿ, ಮಹೇಶ ಜಂತ್ಲಿ, ನಾಗೇಶ ಹುಬ್ಬಳ್ಳಿ, ಮೋಹನ್ ದೇಸಾಯಿ, ಪರಸಪ್ಪ ಕುಂಬಾರ, ತಿಪ್ಪಣ್ಣ ಕಟ್ಟಿಮನಿ, ಗ್ಯಾನಪ್ಪ ಶೀರಿ, ಶಿವಾನಂದ ಕಮತರ, ರಮೇಶಗೌಡ ಪಾಟೀಲ ಇತರರು ಉಪಸ್ಥಿತರಿದ್ದರು.