ಸಾರಾಂಶ
ಬಾಳೆಹೊನ್ನೂರು, ಲೋಕಸಭಾ ಚುನಾವಣೆಗೆ ಶುಕ್ರವಾರ ನಡೆದ ಮತದಾನ ಪ್ರಕ್ರಿಯೆಯಲ್ಲಿ ರಂಭಾಪುರಿ ಪೀಠದ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ರಂಭಾಪುರಿ ಪೀಠದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆಯಲ್ಲಿ ಮತದಾನ ಮಾಡಿದರು.
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಲೋಕಸಭಾ ಚುನಾವಣೆಗೆ ಶುಕ್ರವಾರ ನಡೆದ ಮತದಾನ ಪ್ರಕ್ರಿಯೆಯಲ್ಲಿ ರಂಭಾಪುರಿ ಪೀಠದ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ರಂಭಾಪುರಿ ಪೀಠದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆಯಲ್ಲಿ ಮತದಾನ ಮಾಡಿದರು.ರಂಭಾಪುರಿ ಪೀಠದ ಸರ್ಕಾರಿ ಶಾಲೆ ಮತಗಟ್ಟೆ ಸಂಖ್ಯೆ 209ಕ್ಕೆ ಬೆಳಿಗ್ಗೆ 7 ಕ್ಕೆ ಆಗಮಿಸಿದ ಜಗದ್ಗುರುಗಳು ಮತಗಟ್ಟೆಯಲ್ಲಿ ಮೊದಲಿಗರಾಗಿ ಮತ ಚಲಾವಣೆ ಮಾಡಿದರು. ಮತಪಟ್ಟಿಯಲ್ಲಿಯೂ ರಂಭಾಪುರಿ ಜಗದ್ಗುರುಗಳ ಕ್ರಮ ಸಂಖ್ಯೆ 1 ಆಗಿರುವುದು ವಿಶೇಷವಾಗಿದೆ. ಪ್ರತೀ ಚುನಾವಣೆಯಲ್ಲಿಯೂ ಸಹ ಜಗದ್ಗುರುಗಳು ಪ್ರಥಮವಾಗಿ ಮತ ಚಲಾವಣೆ ಮಾಡುವುದು ವಿಶೇಷ. ಶ್ರೀಗಳ ಮತ ಚಲಾವಣೆ ಬಳಿಕವೇ ಮತದಾರರು ತಮ್ಮ ಹಕ್ಕು ಚಲಾಯಿಸುವುದು ಇಲ್ಲಿನ ವೈಶಿಷ್ಟ್ಯ.ಮತ ಚಲಾವಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಂಭಾಪುರಿ ಜಗದ್ಗುರು ಪ್ರಜಾಪ್ರಭುತ್ವದ ಯಶಸ್ಸಿಗಾಗಿ ಪ್ರತಿಯೊಬ್ಬರೂ ಮತ ಚಲಾವಣೆ ಮಾಡಬೇಕಾಗಿರುವುದು ಅವಶ್ಯಕ. ಸಂವಿಧಾನ ಕೊಟ್ಟಂತಹ ಒಂದು ಉನ್ನತ ಹಕ್ಕು ಮತದಾನವಾಗಿದೆ ಎಂಬುದನ್ನು ಯಾರೂ ಮರೆಯಬಾರದು. ರಾಜ್ಯದಲ್ಲಿ ಎರಡು ಹಂತದ ಮತದಾನ ಪ್ರಕ್ರಿಯೆಗಳು ನಡೆಯುತ್ತಿದ್ದು, ಇಂದು ಮೊದಲ ಹಂತದ ಮತದಾನ ಪ್ರಕ್ರಿಯೆಯಲ್ಲಿ ರಂಭಾಪುರಿ ಜಗದ್ಗುರು ಮತದಾನ ಮಾಡಿ ನಾಡಿನ ಜನತೆಗೆ ಶುಭ ಹಾರೈಸುತ್ತಿದ್ದೇವೆ. ಸುಭದ್ರ ಮತ್ತು ಸದೃಢ ಸರ್ಕಾರ ನಿರ್ಮಾಣಕ್ಕೆ ಪ್ರತಿಯೊಬ್ಬರೂ ತಮ್ಮ ಹಕ್ಕನ್ನು ಚಲಾಯಿಸಬೇಕಿದೆ.ಚುನಾವಣೆ ಎಂಬುದು ಪ್ರಜಾಪ್ರಭುತ್ವದ ದೊಡ್ಡ ಹಬ್ಬ, ಮತದಾನದಲ್ಲಿ ಪ್ರತಿ ಮತದಾರರು ಅರ್ಹ ಅಭ್ಯರ್ಥಿಗೆ ಸ್ವಯಂ ಪ್ರೇರಿತವಾಗಿ ಮತ ಚಲಾಯಿಸಬೇಕು.ಇದರಿಂದ ಯಾರೂ ಕೂಡ ದೂರ ಉಳಿಯದೆ ಪ್ರಜಾಪ್ರಭುತ್ವ ಮೌಲ್ಯಗಳು ಹಾಗೂ ಸಾಮರಸ್ಯ ಬೆಳೆಯುವಂತೆ ಮಾಡಬೇಕಿದೆ ಎಂದರು.೨೬ಬಿಹೆಚ್‌ಆರ್ ೧:ಬಾಳೆಹೊನ್ನೂರು ರಂಭಾಪುರಿ ಪೀಠದ ಮತಗಟ್ಟೆಯಲ್ಲಿ ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಮತ ಚಲಾವಣೆ ಬಳಿಕ ಶಾಹಿ ಪ್ರದರ್ಶಿಸಿದರು.