ಸಾರಾಂಶ
ಜಗಳೂರು ತಾಲೂಕಿಗೆ ಸಮಗ್ರ ನೀರಾವರಿ ಯೋಜನೆ ಜಾರಿ ವಿಚಾರವಾಗಿ ಆಳ್ವಿಕೆ ಮಾಡಿದ ನಾಯಕರು ರೈತರ ಮೂಗಿಗೆ ತುಪ್ಪ ಸವರಿ ತಮ್ಮ ಬೇಳೆ ಬೇಯಿಸಿಕೊಂಡರು. ಈಗಲಾದರೂ ಭದ್ರಾ ಮೇಲ್ದಂಡೆ, 57 ಕೆರೆ ತುಂಬುವ ಸಮಗ್ರ ನೀರಾವರಿ ಯೋಜನೆ ಜಾರಿಗೆ ಒತ್ತಾಯಿಸಿ ಏ.13ರಂದು ಕರೆ ನೀಡಿರುವ ಸ್ವಯಂಪ್ರೇರಿತ, ಶಾಂತಿಯುತ ಬಂದ್‌ಗೆ ಕೈ ಜೋಡಿಸಿ ಎಂದು ಹೋರಾಟಗಾರ, ಸಾಹಿತಿ ಡಾ.ಯಾದವ ರೆಡ್ಡಿ ಜಗಳೂರಲ್ಲಿ ಮನವಿ ಮಾಡಿದ್ದಾರೆ.
ಕನ್ನಡ ಪ್ರಭವಾರ್ತೆ ಜಗಳೂರು
ತಾಲೂಕಿಗೆ ಸಮಗ್ರ ನೀರಾವರಿ ಯೋಜನೆ ಜಾರಿ ವಿಚಾರವಾಗಿ ಆಳ್ವಿಕೆ ಮಾಡಿದ ನಾಯಕರು ರೈತರ ಮೂಗಿಗೆ ತುಪ್ಪ ಸವರಿ ತಮ್ಮ ಬೇಳೆ ಬೇಯಿಸಿಕೊಂಡರು. ಈಗಲಾದರೂ ಭದ್ರಾ ಮೇಲ್ದಂಡೆ, 57 ಕೆರೆ ತುಂಬುವ ಸಮಗ್ರ ನೀರಾವರಿ ಯೋಜನೆ ಜಾರಿಗೆ ಒತ್ತಾಯಿಸಿ ಏ.13ರಂದು ಕರೆ ನೀಡಿರುವ ಸ್ವಯಂಪ್ರೇರಿತ, ಶಾಂತಿಯುತ ಬಂದ್‌ಗೆ ಕೈ ಜೋಡಿಸಿ ಎಂದು ಹೋರಾಟಗಾರ, ಸಾಹಿತಿ ಡಾ.ಯಾದವ ರೆಡ್ಡಿ ಮನವಿ ಮಾಡಿದರು.ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ''''''''ಸ್ವಯಂಪ್ರೇರಿತ ಬಂದ್'''''''' ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, 1967ರಿಂದಲೂ ಹೋರಾಟ ನಡೆಯುತ್ತಿದೆ. ಈಗಾಗಲೇ ಚಿತ್ರದುರ್ಗ. ಹೊಳಲ್ಕೆರೆ, ಹಿರಿಯೂರು, ನಾಯಕನಟ್ಟಿ ಸೇರಿದಂತೆ ಅನೇಕ ಕಡೆ ಸ್ವಯಂಪ್ರೇರಿತ ಬಂದ್ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದೇವೆ. ಈಗ ಜಗಳೂರು ಜನತೆ ಸ್ವಯಂಪ್ರೇರಿತ ಬಂದ್‌ಗೆ ಬೆಂಬಲ ಸೂಚಿಸಬೇಕು ಎಂದರು.
ಮುಂಚೂಣಿ ಹೋರಾಟಗಾರ, ಪತ್ರಕರ್ತ ದೊಣೆಹಳ್ಳಿ ಗುರುಮೂರ್ತಿ ಮಾತನಾಡಿ, ದಾಸೋಹ ಸಂಸ್ಕೃತಿ ಉತ್ಸವದಲ್ಲಿ ತೆಗೆದುಕೊಂಡ ನಿರ್ಣಯದಂತೆ ಬಂದ್‌ಗೆ ಕರೆ ನೀಡಿದ್ದೇವೆ. ಚಿತ್ರದುರ್ಗ, ಹೊಳಲ್ಕೆರೆ, ಕೂಡ್ಲಿಗಿ, ನಾಯಕನಹಟ್ಟಿ ಭಾಗಗಳಿಂದಲೂ ಹೋರಾಗಾರರು ಭಾಗವಹಿಸಲಿದ್ದಾರೆ ಎಂದರು.ಡಾ.ಸಂಗೇನಹಳ್ಳಿ ಅಶೋಕ್‌ಕುಮಾರ್, ಏ.12ರಂದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ಸಂಘಟನೆಗಳ ಮುಖಂಡರು ಪಥ ಸಂಚಲನ ಮಾಡುವ ಮೂಲಕ ಜಾಗೃತಿ ಮೂಡಿಸುತ್ತೇವೆ ಎಂದರು.
ಭದ್ರಾ ಯೋಜನೆ ತಾಲೂಕು ಕಾರ್ಯದರ್ಶಿ ಆರ್.ಓಬಳೇಶ್ ಮಾತನಾಡಿದರು. ಪಪಂ ಮಾಜಿ ಅಧ್ಯಕ್ಷ ಎನ್ಎ.ಸ್.ರಾಜು. ಪ್ರಾಂಶುಪಾಲ ಪ್ರೊ.ನಾಗಲಿಂಗಪ್ಪ, ಇಂದಿರಮ್ಮ ಬಡಪ್ಪ ಇತರರು ಇದ್ದರು.- - -
-11ಜೆಎಲ್ಆರ್1: