ಜಗಜೀವನರಾಮ್‌ ಹಸಿರು ಕ್ರಾಂತಿ ಹರಿಕಾರ, ಅಂಬೇಡ್ಕರ್ ಭಾರತದ ಶಕ್ತಿ: ಶ್ರೀನಿವಾಸ

| Published : Apr 18 2025, 12:31 AM IST

ಜಗಜೀವನರಾಮ್‌ ಹಸಿರು ಕ್ರಾಂತಿ ಹರಿಕಾರ, ಅಂಬೇಡ್ಕರ್ ಭಾರತದ ಶಕ್ತಿ: ಶ್ರೀನಿವಾಸ
Share this Article
  • FB
  • TW
  • Linkdin
  • Email

ಸಾರಾಂಶ

ಡಾ.ಬಿ.ಆರ್. ಅಂಬೇಡ್ಕರ್ ಭಾರತದ ಶಕ್ತಿಯಾಗಿದ್ದಾರೆ. ಅವರು ನೀಡಿರುವ ಸಂವಿಧಾನ ದೇಶದ ಭದ್ರ ಬುನಾದಿಯಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಎಸ್.ಶ್ರೀನಿವಾಸ ಹೇಳಿದ್ದಾರೆ.

- ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಜಯಂತಿ

- - -

ಹೊನ್ನಾಳಿ: ಡಾ.ಬಿ.ಆರ್. ಅಂಬೇಡ್ಕರ್ ಭಾರತದ ಶಕ್ತಿಯಾಗಿದ್ದಾರೆ. ಅವರು ನೀಡಿರುವ ಸಂವಿಧಾನ ದೇಶದ ಭದ್ರ ಬುನಾದಿಯಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಎಸ್.ಶ್ರೀನಿವಾಸ ಹೇಳಿದರು.

ಪಟ್ಟಣದ ಟಿ.ಬಿ. ವೃತ್ತದ ಕನಕದಾಸರ ಕಂಚಿನ ಪ್ರತಿಮೆಗೆ ಹೂವಿನ ಮಾಲೆ ಹಾಕುವುದರ ಮೂಲಕ ಪ್ರವೀಣ್‌ ಶೆಟ್ಟಿ ಬಣದ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕ ಆಯೋಜಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್‌ 134ನೇ ಹಾಗೂ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಮ್‌ 118ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಹಾ ಮಾನವತಾವಾದಿ ಅಂಬೇಡ್ಕರ್ ಭಾರತಕ್ಕೆ ನೀಡಿರುವ ಸಂವಿಧಾನ ಕಾರಣ ದೇಶದ ಜನತೆ ಸಮಬಾಳ್ವೆ ನಡೆಸುವಂತಾಗಿದೆ ಎಂದರು.

ಅಂಬೇಡ್ಕರ್ ವಿಶ್ವಜ್ಞಾನಿ. ಅವರ ರಾಜನೀತಿ, ಕಾನೂನು, ಸಮಾಜಶಾಸ್ತ್ರ, ಮಾನವ ಶಾಸ್ತ್ರ, ಆರ್ಥಿಕ ನೀತಿ ಎಲ್ಲ ವಿಷಯಗಳಲ್ಲೂ ಪರಿಣತಿ ಹೊಂದಿದ್ದರು. ಸಮಸಮಾಜ ನಿರ್ಮಾಣಕ್ಕೆ ಅವಿರತವಾಗಿ ಶ್ರಮಿಸಿದರು. ಅಂದಿನ ದಿನಗಳಲ್ಲಿ ಜಾತಿ ವ್ಯವಸ್ಥೆ ಬಗ್ಗೆ ವಿರೋಧಿಸುತ್ತ, ಅಸ್ಪೃಶ್ಯತೆ ನಿವಾರಣೆ ಬಗ್ಗೆ ಹೋರಾಟ ಮಾಡಿದ ಧೀಮಂತ ನಾಯಕ ಎಂದರು.

ಕೃಷಿ ಸಚಿವ, ಉಪ ಪ್ರಧಾನಿಯಾಗಿ ದೇಶನ್ನು ಮುನ್ನಸೆಸಿದ ಮಹಾವ್ಯಕ್ತಿ ಡಾ.ಬಾಬು ಜಗನಜೀವನ ರಾಮ್‌. ಅವರು ಕೂಡ ಕೃಷಿ ಕ್ಷೇತ್ರದಲ್ಲಿ ಹಲವಾರು ಕ್ರಾಂತಿಕಾರಕ ಯೋಜನೆಗಳನ್ನು ಜಾರಿಗೆ ತಂದರು. ಆ ಮೂಲಕ ಹಸಿರು ಕ್ರಾಂತಿಯ ಹರಿಕಾರ ಎನಿಸಿದ್ದಾರೆ ಎಂದರು.

ಈ ಸಂದರ್ಭ ಅಂಬೇಡ್ಕರ್ ಹಾಗೂ ಬಾಬು ಜಗಜೀವನ ರಾಮ್‌ ಭಾವಚಿತ್ರಗಳಿಗೆ ಗಣ್ಯರು ಪುಷ್ಪನಮನ ಸಲ್ಲಿಸಿದರು. ಮುಖಂಡರಾದ ಹರೀಶ್ ಜನನಿ, ಚಂದ್ರಶೇಖರ, ಅಣ್ಣಪ್ಪ, ಶಿವು, ಕರಿಯಪ್ಪ, ಪ್ರವೀಣ್‌ ಗೊಲ್ಲರಹಳ್ಳಿ, ರುದ್ರೇಶ್, ರಂಗನಾಥ್, ಚಂದ್ರು, ಪ್ರತಾಪ, ಸಂದೀಪ, ಪ್ರಭು, ರವಿ, ದಿಡಗೂರು ಹನುಮಂತಪ್ಪ ಇತರರು ಇದ್ದರು.

- - - -16ಎಚ್.ಎಚ್.ಐ.1.ಜೆಪಿಜಿ:

ಡಾ.ಅಂಬೇಡ್ಕರ್‌, ಡಾ.ಬಾಬು ಜಗಜೀವನರಾಮ್‌ ಜಯಂತಿ ಕಾರ್ಯಕ್ರಮದಲ್ಲಿ ಕರವೇ ಅಧ್ಯಕ್ಷ ಎಸ್. ಶ್ರಿನಿವಾಸ್ ಮಾತನಾಡಿದರು.