ಸಾರಾಂಶ
ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ । ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಸಂಭ್ರಮಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಪಟ್ಟಣದ ವಿವಿಧ ದೇವಾಲಯಗಲ್ಲಿ ಅಯೋಧ್ಯೆ ಶ್ರೀ ರಾಮಲಲ್ಲಾರ ಪ್ರಾಣ ಪ್ರತಿಷ್ಠಾಪನೆ ಪೂಜಾ ಮಹೋತ್ಸವ ಜರಗುತ್ತಿರುವ ಹಿನ್ನಲೆಯಲ್ಲಿ ಹೋಮ ಹವನಾಧಿಗಳು, ವಿಶೇಷ ಪೂಜಾ ಮಹೋತ್ಸವದ ಸಂಭ್ರಮಾರಣೆಯ ಜತೆಗೆ ಅಯೋಧ್ಯೆ ಶ್ರೀ ರಾಮಲಲ್ಲಾರ ಪ್ರಾಣ ಪ್ರತಿಷ್ಠಾಪನೆ ಮಹೋತ್ಸವದ ಐತಿಹಾಸಿಕ ಸಂಭ್ರಮಾಚರಣೆಯ ಸಂದರ್ಭದಲ್ಲಿ ಜೈ ಶ್ರೀರಾಮ್ ಜಯಘೋಷ ಮುಗಿಲು ಮುಟ್ಟಿತು.ಪಟ್ಟಣದ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯ, ಕುರುಹಿನಶೆಟ್ಟಿ ರಾಮಮಂದಿರ, ದೇವಾಂಗ ರಾಮಮಂದಿರ, ಕನ್ನಿಕಾ ಪರಮೇಶ್ವರಿ, ಶ್ರೀ ಮೈಲಾರಲಿಂಗೇಶ್ವರ, ಶ್ರೀ ವೀರಭದ್ರೇಶ್ವರ, ಶ್ರೀ ಚಾವಡಿ ಗಣಪತಿ, ಶ್ರೀ ಶಂಕರಮಠ, ಶ್ರೀ ಚರ್ತುಭುಜ ಪಟ್ಟಾಭಿರಾಮ, ಶ್ರೀ ಕಾಳಿಕಾಂಬ, ಹುಣಸೇಮರ ಶ್ರೀ ವೀರಾಂಜನೇಯ ದೇವಾಲಯ, ಇತರೆ ದೇವಾಲಯಗಳಲ್ಲಿ ಶ್ರೀಸ್ವಾಮಿಯ ಮೂರ್ತಿಗಳಿಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ವಿನಿಯೋಗ ಮಾಡಲಾಗಿದೆ. ಪಟ್ಟಣದ ಕುರುಹಿನಶೆಟ್ಟಿ ರಾಮಮಂದಿರ, ದೇವಾಂಗ ರಾಮಮಂದಿರ ಕನ್ನಿಕಾ ಪರಮೇಶ್ವರಿ ಹಾಗೂ ಶ್ರೀ ಚರ್ತುಭುಜ ಪಟ್ಟಾಭಿರಾಮ ದೇವಾಲಯಗಳಲ್ಲಿ ಬೋಜನದ ವ್ಯವಸ್ಥೆ ಮಾಡಲಾಗಿತ್ತು.
ಪಟ್ಟಣದ ಟಿ.ನಂಜಪ್ಪ ಕಾಂಪ್ಲೆಕ್ಸ್, ವಾಸುದೇವ ಕಾಂಪ್ಲೆಕ್ಸ್, ಶಿ ಬಸವನಗುಡಿ, ದೇವಾಂಗ ರಾಮಮಂದಿರ, ಕನ್ನಿಕಾ ಪರಮೇಶ್ವರಿ ದೇವಾಲಯ, ಹುಣಸೇಮರ ಶ್ರೀ ವೀರಾಂಜನೇಯ ದೇವಾಲಯ, ಕೋಟೆ ಶ್ರೀ ಮಾರಮ್ಮನ ಗುಡಿವೃತ್ತ, ಸುಭಾಷ್ ವೃತ್ತ, ಕೋಳಿ ಅಂಗಡಿಗಳ ವಾಣಿಜ್ಯ ಸಂಕೀರ್ಣ, ಚೆನ್ನಾಂಬಿಕ ವೃತ್ತ ಹಾಗೂ ಇತರೆಡೆ ಶ್ರೀರಾಮನ ಭಕ್ತರು ಲಘು ಉಪಹಾರ, ಪಾನಕ, ಕೋಸಂಬರಿ ವ್ಯವಸ್ಥೆ ಮಾಡುವ ಮೂಲಕ ಐತಿಹಾಸಿಕ ಸಂಭ್ರಮಾರಣೆಯಲ್ಲಿ ಸಂಭ್ರಮಿಸಿದರು.ಪಟ್ಟಣದ ಸುಭಾಷ್ ವೃತ್ತದಲ್ಲಿ ಶ್ರೀ ರಾಮಲಲ್ಲಾ ಹಾಗೂ ಶ್ರೀ ಆಂಜನೇಯಸ್ವಾಮಿಯ ೫೦ ಅಡಿಗಳ ಪ್ಲೆಕ್ಸ್ ಹಾಗೂ ಮಹಾತ್ಮಗಾಂಧಿ ವೃತ್ತ, ಸುಭಾಷ್ ವೃತ್ತ, ಕೋಟೆ ಮಾರಮ್ಮಗುಡಿ ವೃತ್ತ, ಪೇಟೆ ಮುಖ್ಯ ರಸ್ತೆ, ಹೌಸಿಂಗ್ ಬೋರ್ಡ್ ವೃತ್ತ, ಚೆನ್ನಾಂಬಿಕ ವೃತ್ತ ಹಾಗೂ ಇತರೆ ಬಡಾವಣೆಗಳಲ್ಲಿ ಶ್ರೀರಾಮನ ದೊಡ ದೊಡ್ಡ ಫ್ಲೆಕ್ಸ್‌ಗಳು, ಕೇಸರಿ ಬಾವುಟಗಳು ಹಾಗೂ ಕೇಸರಿ ಬಂಟಿಂಗ್ಸ್‌ಗಳಿಂದ ಶೃಂಗರಿಸಿರುವ ಜತೆಗೆ ಹಿಂದೆಂದು ಕಂಡಿರದ ರೀತಿಯಲ್ಲಿ ಪಟ್ಟಣವು ಕೇಸರಿಮಯವಾಗಿದ್ದು, ಸಂಭ್ರಮಾಚರಣೆಗೆ ಕಳೆಕಟ್ಟಿತು. ಸುಮಂಗಲಿಯರು ಮನೆಯ ಮುಂಭಾಗದಲ್ಲಿ ದೀಪಾವಳಿಯ ರೀತಿಯಲ್ಲಿ ದೀಪ ಬೆಳಗಿಸಿ, ಶ್ರೀರಾಮಲಲ್ಲಾರ ಪ್ರಾಣಪ್ರತಿಷ್ಠಾಪನೆ ಮಹೋತ್ಸವವನ್ನು ಸಂಭ್ರಮಿಸಿ, ಐತಿಹಾಸಿಕ ಸಂಭ್ರಮಾಚರಣೆಗೆ ಸಾಕ್ಷಿಯಾದರು.
ಹೊಳೆನರಸೀಪುರ ಪಟ್ಟಣದ ಟಿ.ನಂಜಪ್ಪ ಕಾಂಪ್ಲೆಕ್ಸ್‌ನ ವರ್ತಕರು ಕಳೆದ ೩೮ ವರ್ಷಗಳಿಂದ ಧನುರ್ಮಾಸದ ಶ್ರೀ ರಾಮನ ಭಜನೆ ಮಹೋತ್ಸವದಲ್ಲಿ ಇಳಿವಯಸ್ಸಿನಲ್ಲೂ ಭಾಗವಸಿಸುತ್ತಿರುವ ೮೭ ವರ್ಷದ ಎಚ್.ಎನ್.ವೆಂಕಟರಮಣಯ್ಯ ಅವರನ್ನು ಸನ್ಮಾನಿಸಿದರು.