ಸಾರಾಂಶ
ಮನೆ ಪಕ್ಕದ ಖಾಲಿ ಜಾಗದಲ್ಲಿ ಗಾಂಜಾ ಗಿಡ ಬೆಳೆದಿದ್ದ ಅಪರಾಧಿಗೆ 4 ತಿಂಗಳು 13 ದಿನಗಳ ಸಾದಾ ಕಾರಾಗೃಹ ಶಿಕ್ಷೆ ಹಾಗೂ ₹10 ಸಾವಿರ ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದೆ.
ದಾವಣಗೆರೆ: ಮನೆ ಪಕ್ಕದ ಖಾಲಿ ಜಾಗದಲ್ಲಿ ಗಾಂಜಾ ಗಿಡ ಬೆಳೆದಿದ್ದ ಅಪರಾಧಿಗೆ 4 ತಿಂಗಳು 13 ದಿನಗಳ ಸಾದಾ ಕಾರಾಗೃಹ ಶಿಕ್ಷೆ ಹಾಗೂ ₹10 ಸಾವಿರ ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದೆ.
ತಾಲೂಕಿನ ಜರೀಕಟ್ಟೆ ಗ್ರಾಮದ ಶ್ರೀ ರವೀಂದ್ರನಾಥ ಬಡವಾಣೆಯ ಶಿರಮನಹಳ್ಳಿ ಕೆಂಚಪ್ಪ (45) ಶಿಕ್ಷೆಗೆ ಗುರಿಯಾದ ಅಪರಾಧಿ. ತನ್ನ ಮನೆ ಪಕ್ಕದ ಖಾಲಿ ಜಾಗದಲ್ಲಿ 6 ಅಡಿ ಎತ್ತರದ ಗಾಂಜಾ ಗಿಡ ಬೆಳೆದಿದ್ದ. ಕೆಂಚಪ್ಪನ ಮನೆ ಬಳಿಗೆ 2020ರ ಸೆ.14ರಂದು ಭೇಟಿ ನೀಡಿದ್ದ ಆಗಿನ ಗ್ರಾಮಾಂತರ ವೃತ್ತ ನಿರೀಕ್ಷಕ ಬಿ.ಮಂಜುನಾಥ ಹಾಗೂ ಸಿಬ್ಬಂದಿ ಗಾಂಜಾ ಗಿಡ ಪತ್ತೆ ಮಾಡಿದ್ದರು. ಆರೋಪಿ ವಿರುದ್ಧ ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖಾಧಿಕಾರಿಯಾದ ಇನ್‌ಸ್ಪೆಕ್ಟರ್ ಪಿ.ಪ್ರಸಾದ್ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಅವರು ಸ್ಪೆಷಲ್ ಸಿಎನ್‌ಡಿಪಿಎಸ್ ನ:06/2021 ರಲ್ಲಿ ಪ್ರಕರಣದ ವಿಚಾರಣೆ ನಡೆಸಿ, ಶಿರಮನಹಳ್ಳಿ ಕೆಂಚಪ್ಪನ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ತೀರ್ಪು ಪ್ರಕಟಿಸಿದರು.
ಅಪರಾಧಿ ಶಿರಮನಹಳ್ಳಿ ಕೆಂಚಪ್ಪ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದು, ಬಂಧನದ ಅವಧಿ ಪರಿಗಣಿಸಿ, ಶಿಕ್ಷಾ ಅವಧಿಯನ್ನು ಸೆಟ್ ಅಪ್ ಮಾಡಲಾಗಿದೆ. ಪಿರ್ಯಾದಿ ಪರ ಸರ್ಕಾರಿ ವಕೀಲ ಬಿ.ಮಂಜುನಾಥ ವಾದ ಮಂಡಿಸಿದ್ದರು. ತನಿಖಾಧಿಕಾರಿ ಪಿ.ಪ್ರಸಾದ, ಸಿಬ್ಬಂದಿ ರಾಜು ಲಮಾಣಿ, ಹನುಮಂತಪ್ಪ, ಗ್ರಾಮಾಂತರ ವೃತ್ತ ಕಚೇರಿ ಸಿಬ್ಬಂದಿ ಶ್ರೀನಿವಾಸ, ನಾಗರಾಜ, ಅಶೋಕ ಅವರ ಕಾರ್ಯವನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿದರು.- - - (ಸಾಂದರ್ಭಿಕ ಚಿತ್ರ)