ಜೈನ್ ಮಿಲನ್ ಟ್ರಸ್ಟ್ ನಿಂದ ಯೋಗ ದಿನಾಚರಣೆ

| Published : Jun 28 2024, 12:52 AM IST

ಸಾರಾಂಶ

ಡಯಾಲಿಸಿಸ್‌ ರೋಗಿಗಳು ಹಾಗೂ ಅವರ ಜೊತೆ ಬರುವ ಕುಟುಂಬದವರಿಗೆ ಮಾನಸಿಕ ಸ್ಥೈರ್ಯ, ಆತ್ಮವಿಶ್ವಾಸ, ಏಕಾಗ್ರತೆಯನ್ನು ಮೈಗೂಡಿಸುವ ಉದ್ದೇಶ

ಕನ್ನಡಪ್ರಭ ವಾರ್ತೆ ಮೈಸೂರು

ಜೈನ್ ಮಿಲನ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಜೈನ್‌ ಮಿಲನ್‌ ಡಯಾಲಿಸಿಸ್ ಸೆಂಟರ್ ನಲ್ಲಿ ವಿಶ್ವಯೋಗ ದಿನ ಆಚರಿಸಲಾಯಿತು.

ಡಯಾಲಿಸಿಸ್‌ ರೋಗಿಗಳು ಹಾಗೂ ಅವರ ಜೊತೆ ಬರುವ ಕುಟುಂಬದವರಿಗೆ ಮಾನಸಿಕ ಸ್ಥೈರ್ಯ, ಆತ್ಮವಿಶ್ವಾಸ, ಏಕಾಗ್ರತೆಯನ್ನು ಮೈಗೂಡಿಸುವ ಉದ್ದೇಶದಿಂದ ಟ್ರಸ್ಟ್‌ ವತಿಯಿಂದ ಡಯಾಲಿಸಿಸ್ ಚಿಕಿತ್ಸೆಗೆ ಒಳಗಾಗುವ ರೋಗಿಗಳು ಮತ್ತು ಅವರ ಜತೆ ಬರುವ ಕುಟುಂಬ ವರ್ಗದವರಿಗೆ ವಿಶ್ವಯೋಗ ಕಾರ್ಯಕ್ರಮ ಅಂಗವಾಗಿ ಯೋಗ ಶಿಕ್ಷಕಿ ಖುಷಿ ನೇತೃತ್ವದಲ್ಲಿ ಯೋಗಾಸನ ನಡೆಸಲಾಯಿತು.

ಟ್ರಸ್ಟ್ ಛೇರ್ಮನ್ ವಿನೋದ್‌ಕುಮಾರ್ ಜೈನ್, ಅಧ್ಯಕ್ಷ ಮದನ್ ಲಾಲ್ ಮಾರು, ಕಾರ್ಯದರ್ಶಿ ಮಹಾವೀರ್ ಬನ್ಸಾಲಿ, ಅಶೋಕ್ ಕೊಠಾರಿ, ಸಿಇಒ ಡಾ.ಕೆ. ಶಂಕರೇಗೌಡ, ತಂತ್ರಜ್ಞ ರಮೇಶ್, ಹೊನ್ನೇಶ್, ಮಹಾವೀರ್ ಚಂದ್ ಜೈನ್, ಸೌಮ್ಯಾ, ಸರೋಜಾ, ಜಯಂತಿ ಇದ್ದರು.