ಸಾರಾಂಶ
ಪಟ್ಟಣದ ಜೈನ ದೇವಾಲಯದಲ್ಲಿ ನಡೆದ ಮಹಾವೀರ ಜಯಂತಿ
ಕನ್ನಡಪ್ರಭ ವಾರ್ತೆ, ಕಡೂರುಪಟ್ಟಣದಲ್ಲಿ ನೆಲೆಸಿರುವ ಜೈನ ಸಮುದಾಯ ಇತರರಿಗೆ ಸಹಾಯ ಹಸ್ತ ನೀಡುವ ಮೂಲಕ ಇತರೆ ಸಮುದಾಯಗಳೊಂದಿಗೆ ಪರಸ್ಪರ ಪ್ರೀತಿ, ವಿಶ್ವಾಸದೊಂದಿಗೆ ಬದುಕುತ್ತಿದ್ದಾರೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.ಗುರುವಾರ ಪಟ್ಟಣದ ಜೈನ್ ಟೆಂಪಲ್ ರಸ್ತೆಯ ಜೈನ ದೇವಾಲಯದಲ್ಲಿ ನಡೆದ ಮಹಾವೀರ ಜಯಂತಿಯಲ್ಲಿ ಮಾತನಾಡಿ, ಜೈನರ ಕೊನೆ ತೀರ್ಥಂಕರರ ಜನ್ನದಿನವನ್ನು ಮಹಾವೀರ ಜಯಂತಿಯನ್ನಾಗಿ ಆಚರಿಸಲಾಗುತ್ತಿದ್ದು ಜೈನ ಸಂಪ್ರದಾಯ ದಲ್ಲಿ ಅನೇಕ ಮುನಿಗಳು, ಸನ್ಯಾಸಿಗಳು ತ್ಯಾಗ ಮಾಡಿರುವುದನ್ನು ಇತಿಹಾಸದಲ್ಲಿ ಕಂಡಿದ್ದೇವೆ. ಭಗವಾನ್ ಮಹಾವೀರರು ಅಹಿಂಸಾ ಧರ್ಮ ಪಾಲಿಸಿ ಯಾವುದೇ ಜೀವಿಗೆ ಹಾನಿ ಮಾಡದಂತೆ, ಸಸ್ಯಹಾರಿ ಯಾಗಿ ಮಾನವ ಕುಲಕ್ಕೆ ಅಹಿಂಸಾ ತತ್ವ ಭೋಧಿಸಿದ ಆದರ್ಶ ಇಂದಿಗೂ ಎಂದಿಗೂ ಪ್ರಸ್ತುತ. ಪಟ್ಟಣದ ಜೈನ ಸಮುದಾಯ ಯಾವುದೇ ಸಹಕಾರವನ್ನು ನಮ್ಮಿಂದ ಕೇಳಿಲ್ಲ ಅವರು ಯಾವುದೇ ಬೇಡಿಕೆ ನೀಡಿದರೆ ತಾವು ಸಹಾಯ ಮಾಡುವುದಾಗಿ ಭರವಸೆ ನೀಡಿದರು. ಗುರುವಾರ ಬೆಳಗ್ಗೆ ಪಟ್ಟಣದ ಜೈನ್ ದೇವಾಲಯದಲ್ಲಿ ವಿಶೇಷ ಪೂಜೆ ಅಭಿಷೇಕ, ಪಂಚಕಲ್ಯಾಣ ಪೂಜೆ ನೆರವೇರಿಸಿದ ನಂತರ ಜೈನ ಸಮಾಜದ ಮುಖಂಡರು ಹಾಗೂ ನೂರಾರು ಮಹಿಳೆಯರು, ಮಕ್ಕಳು ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ನಡೆಸಿದರು. ಮಹಾವೀರರ ಭಾವಚಿತ್ರವನ್ನು ಅಲಂಕೃತ ವಾಹನದಲ್ಲಿ ಇರಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸ ಲಾಯಿತು. ಮಹಿಳೆಯರು ಭಗವಾನ್ ಮಹಾವೀರನ ಬಗ್ಗೆ ಹಾಡುಗಳನ್ನು ಹೇಳುತ್ತಾ ಸಾಗಿದರು. ಜೈನ್ ದೇವಾಲಯದ ಮೂರ್ತಿ ಪೂಜಾ ಸಮಿತಿ ಅಧ್ಯಕ್ಷ ಮಹಾವೀರ್ ಸುರಾನ, ಸಕಲ ಸಂಘದ ಅಧ್ಯಕ್ಷ ಅಮೃತ್‍ಲಾಲ್ ಮೆಹ್ತಾ, ಮೋಹಿತ್ ಡಾಗ, ಮಂಜು ಜೈನ್, ಶಿವರತನ್ ಸಂಚೇತಿ, ವಿನಯ್ ದಂಡಾವತಿ, ಮುರಳಿ ಕೊಠಾರಿ ಹಾಗೂ ಸಮಾಜದ ಯುವಕರು ಮುಂತಾದವರು ಭಾಗವಹಿಸಿದ್ದರು.10ಕೆಕೆಡಿಯು4. ಕಡೂರು ಪಟ್ಟಣದಲ್ಲಿ ಮಹಾವೀರ ಜಯಂತಿ ಅಂಗವಾಗಿ ಜೈನ ಸಮಾಜದವರು ಮೆರವಣಿಗೆ ನಡೆಸಿದರು. ಯುವಕರು, ಹಿರಿಯರು ಭಾಗವಹಿಸಿದ್ದರು.