ತೆರಿಗೆ ಏರಿಕೆ ವಿರೋಧಿಸಿ 3ಕ್ಕೆ ಜಯಪುರ ಬಂದ್ ನಿರ್ಧಾರ

| Published : Jan 28 2024, 01:15 AM IST

ತೆರಿಗೆ ಏರಿಕೆ ವಿರೋಧಿಸಿ 3ಕ್ಕೆ ಜಯಪುರ ಬಂದ್ ನಿರ್ಧಾರ
Share this Article
  • FB
  • TW
  • Linkdin
  • Email

ಸಾರಾಂಶ

ತೆರಿಗೆ ಏರಿಕೆಯನ್ನು ಖಂಡಿಸಿ ಜಯಪುರ ಗ್ರಾಪಂ ವಿರುದ್ಧ ಫೆಬ್ರವರಿ 3ರ ಶನಿವಾರ ಜಯಪುರ ಬಂದ್ ಮತ್ತು ರಸ್ತೆ ತಡೆ ನಡೆಸಲು ವರ್ತಕರ ಸಂಘ ಹಾಗೂ ಸಾರ್ವಜನಿಕರು ಮುಂದಾಗಿದ್ದಾರೆ ಎಂದು ವರ್ತಕರ ಸಂಘದ ಎಚ್.ಎಂ. ಸತೀಶ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ಕೊಪ್ಪ

ತೆರಿಗೆ ಏರಿಕೆಯನ್ನು ಖಂಡಿಸಿ ಜಯಪುರ ಗ್ರಾಪಂ ವಿರುದ್ಧ ಫೆಬ್ರವರಿ 3ರ ಶನಿವಾರ ಜಯಪುರ ಬಂದ್ ಮತ್ತು ರಸ್ತೆ ತಡೆ ನಡೆಸಲು ವರ್ತಕರ ಸಂಘ ಹಾಗೂ ಸಾರ್ವಜನಿಕರು ಮುಂದಾಗಿದ್ದಾರೆ ಎಂದು ವರ್ತಕರ ಸಂಘದ ಎಚ್.ಎಂ. ಸತೀಶ್ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು ಜಯಪುರ ವರ್ತಕರ ಸಂಘ ಹಾಗೂ ಸಾರ್ವಜನಿಕರು, ಕಟ್ಟಡ ಮಾಲೀಕರು, ಬಾಡಿಗೆದಾರರು, ಖಾಲಿ ನಿವೇಶನದ ಮಾಲೀಕರು ಹಾಗೂ ಕೂಳೂರು ಗ್ರಾಮ, ಅಲಗೇಶ್ವರ, ಚೌಡಿಕಟ್ಟೆ, ಜಲದುರ್ಗ, ಗುಬ್ಬೀ ಬೈಲು, ಕಟ್ಟೇಮನೆ ಸೇರಿ ಹಾಲಿ ಇರುವ ಕಂದಾಯದ ದರ ಪರಿಷ್ಕರಣೆ ಬಗ್ಗೆ ಈಗಾಗಲೇ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಆಡಳಿತ ಮತ್ತು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಜೊತೆಗೆ ಸಭೆ ನಡೆಸಿ ತಾವು ನಿಗದಿಪಡಿಸಿದ ಕಂದಾಯ ಅತೀ ದುಬಾರಿಯಾಗಿದ್ದು ಒಂದಕ್ಕೆ ಏಳು ಪಟ್ಟು ಏರಿಸಿದ ಬಗ್ಗೆ ಚರ್ಚೆ ನಡೆಸಿ ಹಾಗೂ ಜಯಪುರದ ಪಟ್ಟಣ ಪ್ರದೇಶದ ರಸ್ತೆ ಅಗಲೀಕರಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಹೋಗಿರುವುದರಿಂದ ಹಾಗೂ ಕ್ಷೇತ್ರದಾದ್ಯಂತ ಬರ ಇರುವುದರಿಂದ ಮುಂದಿನ ಎರಡು ವರ್ಷಗಳ ಕಾಲ ಈ ಪ್ರಸ್ತಾವನೆ ಮುಂದೂಡುವಂತೆ ಹಾಗೂ ಗ್ರಾಪಂ ಹೊಸದಾಗಿ ನಿಗದಿಪಡಿಸಿದ ಕಂದಾಯವನ್ನು ಕಡಿಮೆ ಮಾಡಬೇಕೆಂದು ಬೇಡಿಕೆ ಇಟ್ಟಿದ್ದರು.

ಪಂಚಾಯ್ತಿ ಆಡಳಿತ ಮಂಡಳಿ ಹತ್ತು ಸಾವಿರ ರು. ನಿಗದಿ ಪಡಿಸಿದ್ದ ತೆರಿಗೆಯಲ್ಲಿ ಒಂದು ಸಾವಿರ ರು. ಮಾತ್ರ ಕಡಿಮೆ ಮಾಡುವು ದಾಗಿ ಹೇಳಿದ್ದು ಇದಕ್ಕೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದಾರೆ. ತಾಲೂಕಿನ 21 ಗ್ರಾಮ ಪಂಚಾಯ್ತಿಯಲ್ಲಿ ಎಲ್ಲೂ ಇಷ್ಟರ ಮಟ್ಟಿಗೆ ಹೆಚ್ಚಿಸಿಲ್ಲ. ಜನಸಾಮಾನ್ಯರಿಗೆ ಈ ಕಂದಾಯ ಭರಿಸಲು ಅಸಾಧ್ಯ ವಾಗಿರು ವುದರಿಂದ ಪಂಚಾಯ್ತಿ ಆಡಳಿತ ಮಂಡಳಿ ಸ್ಪಂದಿಸದೇ ಇರುವುದರಿಂದ ಜಯಪುರ ಗ್ರಾಪಂ ವ್ಯಾಪ್ತಿ ಎಲ್ಲಾ ಸಾರ್ವಜನಿಕರು ಜಯಪುರ ಪಟ್ಟಣವನ್ನು ಬಂದ್ ಮೂಲಕ ವಿರೋಧವ್ಯಕ್ತಪಡಿಸಲಿದ್ದು ಪ್ರತಿಭಟನೆ ಸ್ಥಳಕ್ಕೆ ಚಿಕ್ಕಮಗಳೂರು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಶಾಸಕರು ಬಂದು ಭರವಸೆ ನೀಡುವ ತನಕ ಜಯಪುರದ ಮುಖ್ಯರಸ್ತೆಯಲ್ಲಿ ರಸ್ತೆ ತಡೆ ಮಾಡಲಾಗುವುದು. ಈ ಎಲ್ಲಾ ಘಟನೆಗಳಿಗೆ ಅವಕಾಶ ಕೊಡದೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಬಂದು ಸಮಸ್ಯೆ ಬಗೆಹರಿಸಬೇಕೆಂದು ಗ್ರಾಮಸ್ಥರು ತಿಳಿಸಿದ್ದಾರೆ.