ಸಾರಾಂಶ
ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿರುವ ಚಿಕ್ಕೋಡಿ ನಗರಕ್ಕೆ 45 ವರ್ಷಗಳ ಬಳಿಕ ಬಂದು ಮತ್ತೆ ಕಚೇರಿಗೆ ಭೇಟಿ ನೀಡುತ್ತಿರುವುದು ನನ್ನ ಸೌಭಾಗ್ಯ ಎಂದು ಭಾವಿಸಿದ್ದೇನೆ ಎಂದು ವಿದೇಶಾಂಗ ಸಚಿವ ಪದ್ಮಶ್ರೀ ಡಾ.ಎಸ್.ಜೈಶಂಕರ ಹೇಳಿದರು.
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿರುವ ಚಿಕ್ಕೋಡಿ ನಗರಕ್ಕೆ 45 ವರ್ಷಗಳ ಬಳಿಕ ಬಂದು ಮತ್ತೆ ಕಚೇರಿಗೆ ಭೇಟಿ ನೀಡುತ್ತಿರುವುದು ನನ್ನ ಸೌಭಾಗ್ಯ ಎಂದು ಭಾವಿಸಿದ್ದೇನೆ ಎಂದು ವಿದೇಶಾಂಗ ಸಚಿವ ಪದ್ಮಶ್ರೀ ಡಾ.ಎಸ್.ಜೈಶಂಕರ ಹೇಳಿದರು.ಅವರು ಚಿಕ್ಕೋಡಿ ಪಟ್ಟಣದ ಪುರಸಭೆ ಆವರಣದಲ್ಲಿದ್ದ ಹಳೆ ಎಸಿ ಕಚೇರಿಯಲ್ಲಿ 1977-78 ರಲ್ಲಿ ಚಿಕ್ಕೋಡಿ ಉಪವಿಭಾಗದ ಪ್ರೊಬೆಷನರಿ ಉಪವಿಭಾಗಾಧಿಕಾರಿಯಾಗಿ ಸೇವೆ ಸಲ್ಲಿಸಿದ ನಿಮಿತ್ತ ಭೇಟಿ ನೀಡಿ ಅವರು ಮಾತನಾಡಿದರು.
ತಾವು ಅಂದಿನ ದಿನಗಳಲ್ಲಿ ಚಿಕ್ಕೋಡಿ ಉಪವಿಭಾಗದ ವ್ಯಾಪ್ತಿಯಲ್ಲಿ ಕಂಡುಕೊಂಡಂತೆ ಅಭಿವೃದ್ಧಿ ಇರಲಿಲ್ಲ. ಆದರೆ ಇಂದು ಕಳೆದ 10 ವರ್ಷಗಳ ಅವಧಿಯಲ್ಲಿ ಮೋದಿಜೀ ಅವರ ಆಡಳಿತದಲ್ಲಿ ಚಿಕ್ಕೋಡಿ ನಗರ ಬೃಹತ್ ಪ್ರಮಾಣದಲ್ಲಿ ಬೆಳೆದು ನಿಂತಿರುವುದು ಸಂತೋಷ ತಂದಿದೆ ಎಂದರು.ಪುರಸಭೆಯ ವತಿಯಿಂದ ಪುರಸಭೆಯ ಎಲ್ಲಾ ಸದಸ್ಯರುಗಳ ಸಮ್ಮುಖದಲ್ಲಿ ಪೌರ ಸನ್ಮಾನ ಆಯೋಜಿಸಲಾಗಿತ್ತು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಡಾ.ಪ್ರಭಾಕರ ಕೋರೆ, ಮಹಾಂತೇಶ ಕವಟಗಿಮಠ, ಪುರಸಭೆಯ ಹಿರಿಯ ಸದಸ್ಯ ಜಗದೀಶ ಕವಟಗಿಮಠ,ಮಾಜಿ ಅಧ್ಯಕ್ಷ ಪ್ರವೀಣ ಕಾಂಬಳೆ ಸೇರಿದಂತೆ ಪುರಸಭೆಯ ಎಲ್ಲ ಸದಸ್ಯರು ಉಪಸ್ಥಿತರಿದ್ದರು.
---ಪೋಟೋ : 28ಸಿಕೆಡಿ1
ಚಿಕ್ಕೋಡಿ ಪುರಸಭೆ ಆವರಣದಲ್ಲಿ ಹಳೆ ಏಸಿ ಕಚೇರಿಗೆ ವಿದೇಶಾಂಗ ಸಚಿವ ಪದ್ಮಶ್ರೀ ಡಾ.ಎಸ್.ಜೈಶಂಕರ ಬೇಟಿ ನೀಡಿ ಅಂದಿನ ತಮ್ಮ ಅನುಭವನಗಳನ್ನು ಹಂಚಿಕೊಂಡರು. ಪ್ರಲ್ಹಾದ ಜೋಶಿ,ಡಾ.ಪ್ರಭಾಕರ ಕೋರೆ,ಮಹಾಂತೇಶ ಕವಟಗಿಮಠ,ಜಗದೀಶ ಕವಟಗಿಮಠ ಉಪಸ್ಥಿತರಿದ್ದರು.