ವಿಶ್ವಕರ್ಮ ಸಮಾಜವು ಒಂದು ಜಾತಿಯಲ್ಲ, ಸಂಸ್ಕೃತಿ. ವಿಶ್ವಕರ್ಮರ ಪಂಚ ಕಸುಬುಗಳು ಸಮಸ್ತ ನಾಗರಿಕರ ಬದುಕಿಗೆ ಹಾಗೂ ಇತಿಹಾಸಕ್ಕೆ ಆಧಾರಸ್ತಂಭ.
ಶಿರಹಟ್ಟಿ: ವಿಶ್ವಕರ್ಮ ಪಂಚ ಕಸುಬುಗಳು ನಾಗರಿಕರ ಬದುಕಿಗೆ ಆಧಾರಸ್ತಂಭವಾಗಿವೆ. ವಿಶ್ವಕರ್ಮರ ಕೊಡುಗೆಗಳು ಯಾವುದೇ ಒಂದು ಧರ್ಮ, ಜಾತಿ, ಕುಲಕ್ಕೆ ಸೀಮಿತವಾಗಿಲ್ಲ. ವಿಶ್ವಕರ್ಮ ಸಮಾಜವು ಪಂಚಕಸುಬುಗಳ ಮೂಖಾಂತರ ಸಾವಿರಾರು ವರ್ಷಗಳ ಇತಿಹಾಸಕ್ಕೆ ಸಾಕ್ಷಿಯಾಗಿದೆ ಎಂದು ತಹಸೀಲ್ದಾರ್ ಕೆ. ರಾಘವೇಂದ್ರ ರಾವ್ ತಿಳಿಸಿದರು.ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಪ್ರಯುಕ್ತ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ರಾಜ್ಯದಲ್ಲಿ ವಿಶ್ವಕರ್ಮ ಸಮಾಜದವರು ಚಿನ್ನ, ಬೆಳ್ಳಿ, ಕಬ್ಬಿಣ, ಮರಗೆಲಸ, ಶಿಲ್ಪಕಲಾ ಕೃತಿಗಳನ್ನು ಮಾಡುತ್ತಿದ್ದು, ಭಾಷೆಯಲ್ಲಿ ವಿವಿಧತೆ ಇದ್ದರೂ ಪಂಚ ವೃತ್ತಿಯಲ್ಲಿ ಸಮಾಜದವರು ಒಂದೇ ಆಗಿದ್ದಾರೆ ಎಂದರು.
ವಿಶ್ವಕರ್ಮ ಸಮಾಜವು ಒಂದು ಜಾತಿಯಲ್ಲ, ಸಂಸ್ಕೃತಿ. ವಿಶ್ವಕರ್ಮರ ಪಂಚ ಕಸುಬುಗಳು ಸಮಸ್ತ ನಾಗರಿಕರ ಬದುಕಿಗೆ ಹಾಗೂ ಇತಿಹಾಸಕ್ಕೆ ಆಧಾರಸ್ತಂಭ. ಪಂಚ ಕಸುಬುಗಳಲ್ಲಿ ವಿಶೇಷವಾಗಿ ಶಿಲ್ಪಕಲೆಯ ಮೂಲಕ ಇಡೀ ಜಗತ್ತೇ ಭಾರತದ ಕಡೆ ನೋಡುವಂತೆ ಮಾಡಿದೆ. ಈ ಶಿಲ್ಪಕಲಾ ಕೃತಿಗಳ ಅಧಿನಾಯಕ ಅಮರಶಿಲ್ಪಿ ಜಕಣಾಚಾರಿ ಸಾವಿರ ವರ್ಷಗಳ ಮುಂದೆ ನಡೆಯಬಹುದಾದ ನಾಗರಿಕತೆಯನ್ನು ಶಿಲ್ಪಕಲಾ ಕೃತಿಯಲ್ಲಿ ನಿರ್ಮಿಸಿದ ಮಹಾನ್ ಶಿಲ್ಪಿ ಜಕಣಾಚಾರಿ ಎಂದರು.ಭಾರತೀಯ ಸಂಸ್ಕೃತಿ, ಪರಂಪರೆ, ಇತಿಹಾಸ ಮತ್ತು ಮಹಾಕಾವ್ಯಗಳನ್ನು ಶಿಲ್ಪಕಲೆಯ ಮೂಲಕ ಜಗತ್ತಿಗೆ ಪರಿಚಯಿಸಿ ಹಾಸನ ಜಿಲ್ಲೆಗೆ ಶಿಲ್ಪಕಲೆಗಳ ತವರೂಗಾಗಿ ಕೀರ್ತಿ ತಂದ ಮಹಾನ್ ಶಿಲ್ಪಿ ಅಮರಶಿಲ್ಪಿ ಜಕಣಾಚಾರಿ. ಶಿಲ್ಪಕಲಾ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಅವರ ಕೊಡುಗೆ ಜನಸಾಮಾನ್ಯರ ಮನದಾಳದಲ್ಲಿ ಬೇರೂರಿದೆ. ದೇವಾಲಯಗಳ ಮೇಲೆ ವಾಸ್ತುಶಿಲ್ಪಗಳನ್ನು ರಚಿಸಿದ ಶಿಲ್ಪಿಗಳು ವಿಶ್ವಕರ್ಮ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಭಾರತೀಯ ಸಂಪ್ರದಾಯ ಅಳಿಯದೆ ಉಳಿಯುವಲ್ಲಿ ಮಹತ್ವವಾದ ಕೊಡುಗೆ ನೀಡಿದ್ದಾರೆ ಎಂದರು.ಶಿರಸ್ತೇದಾರ ಗಿರಿಜಾ ಪೂಜಾರ, ಎಚ್.ಜೆ. ಭಾವಿಕಟ್ಟಿ, ಸಂತೋಷ ಅಸ್ಕಿ, ವಿನೋದ ಪಾಟೀಲ, ನೋಂದಣಿ ಇಲಾಖೆಯ ಶರಣಪ್ಪ ಪವಾರ, ರಾಧಾ ದೇಸಾಯಪಟ್ಟಿ, ಬಿ.ಎಸ್. ಕುರಡಗಿ, ಶಿವರಾಜ ಜಾಧವ, ಮುಖಂಡರಾದ ಐ.ಜಿ. ಬಡಿಗೇರ, ಮುತ್ತಣ್ಣ ಬಡಿಗೇರ, ರವಿ ದೇವಪ್ಪ ಬಡಿಗೇರ, ಶಂಕ್ರಪ್ಪ ಕಮ್ಮಾರ, ವೀರಭದ್ರಪ್ಪ ಕಮ್ಮಾರ ಸೇರಿದಂತೆ ಅನೇಕರು ಇದ್ದರು.