ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ತಾಲೂಕಿನ ಮಣ್ಣೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗೂರ, ಮಣ್ಣೂರ ಹಾಗೂ ಹಂಗರಗಿ ಗ್ರಾಮಗಳಿಗೆ ಜಿಪಂ ಸಿಇಒ ರಿಷಿ ಆನಂದ ಸೋಮವಾರ ಭೇಟಿ ನೀಡಿ ಜಲ ಜೀವನ ಮಿಷನ್ ಯೋಜನೆಯ ಕಾಮಗಾರಿಗಳನ್ನು ಪರಿಶೀಲಿಸಿದರು. ಮಣ್ಣೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಗೂರ ಗ್ರಾಮದ 422 ಎಫ್‌ಎಚ್‌ಟಿಸಿಗಳನ್ನು ಒದಗಿಸುವ ಕಾಮಗಾರಿ ವೀಕ್ಷಿಸಿ, ನೀರಿನ ಗುಣಮಟ್ಟ ಪರಿಶೀಲಿಸಿದರು.
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ತಾಲೂಕಿನ ಮಣ್ಣೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗೂರ, ಮಣ್ಣೂರ ಹಾಗೂ ಹಂಗರಗಿ ಗ್ರಾಮಗಳಿಗೆ ಜಿಪಂ ಸಿಇಒ ರಿಷಿ ಆನಂದ ಸೋಮವಾರ ಭೇಟಿ ನೀಡಿ ಜಲ ಜೀವನ ಮಿಷನ್ ಯೋಜನೆಯ ಕಾಮಗಾರಿಗಳನ್ನು ಪರಿಶೀಲಿಸಿದರು. ಮಣ್ಣೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಗೂರ ಗ್ರಾಮದ 422 ಎಫ್‌ಎಚ್‌ಟಿಸಿಗಳನ್ನು ಒದಗಿಸುವ ಕಾಮಗಾರಿ ವೀಕ್ಷಿಸಿ, ನೀರಿನ ಗುಣಮಟ್ಟ ಪರಿಶೀಲಿಸಿದರು.ಮಣ್ಣೂರ ಗ್ರಾಮದಲ್ಲಿ 430 ಎಫ್.ಎಚ್.ಟಿ.ಸಿಗಳನ್ನು ಒದಗಿಸುವ ಗುರಿ ಹೊಂದಿದೆ. ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಬೇಕೆಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು. ನಂತರ ಜೆಜೆಮ್ ಕಾಮಗಾರಿಯನ್ನು ಪರಿಶೀಲನೆ ಮಾಡಿದರು. ಹಂಗರಗಿ ಗ್ರಾಮದಲ್ಲಿ 498 ಎಫ್.ಎಚ್.ಟಿ.ಸಿ ಗುರಿ ಹೊಂದಿರುವ ಒಟ್ಟು ಅಳವಡಿಕೆಯಾಗಿರುವ ಕುರಿತು ಮಾಹಿತಿ ಪಡೆದರು, ಗ್ರಾಮದ ಮನೆಗಳಿಗೆ ತೆರಳಿ ನಿತ್ಯ ನೀರು ಬರುವದರ ಕುರಿತು ವಿಚಾರಿಸಿದರು.
ನೀರು ಎಲ್ಲೂ ಪೋಲಾಗದಂತೆ ನೋಡಿಕೊಳ್ಳಬೇಕು. ಪೋಲಾಗುತ್ತಿರುವ ನಲ್ಲಿಗಳಿಗೆ ತುರ್ತಾಗಿ ನಲ್ಲಿಗಳ ಜೋಡಣೆ ಮಾಡಿ ಎಂದು ಸೆಕ್ಷನ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲೀಕರಣ ಜಿಪಂ ಅಭಿಯಂತರ ಬಸವರಾಜ ಕುಂಬಾರ, ತಾಪಂ ಇಒ ಪ್ರಕಾಶ ದೇಸಾಯಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿ.ಬಿ.ಗೊಂಗಡೆ, ಜಿಲ್ಲಾ ಕಾರ್ಯಕ್ರಮ ಸಂಯೋಜಕ ಶ್ರೀನಿವಾಸ, ತಾಪಂ ಪಂಚಾಯತ ರಾಜ್ ಸಹಾಯಕ ನಿರ್ದೇಶಕ ರವಿ ಗುಂಡಳ್ಳಿ, ಮಣ್ಣೂರ ಪಿಡಿಒ ಎಸ್.ವೈ.ಕುಂಬಾರ, ಗ್ರಾಮೀಣ ಕುಡಿಯವ ನೀರು ಇಲಾಖೆಯ ಸಹಾಯಕ ಇಂಜಿನಿಯರ್ ಹಾಗೂ ಇಲಾಖೆ ಸಿಬ್ಬಂದಿ, ನಾಗೂರ, ಮಣ್ಣೂರ ಹಾಗೂ ಹಂಗರಗಿ ಗ್ರಾಮಸ್ಥರು ಇದ್ದರು.