ಕೇಂದ್ರ ಹಾಗೂ ರಾಜ್ಯ ಸರ್ಕಾರ ಗ್ರಾಮೀಣ ಭಾಗದಲ್ಲಿ ಪ್ರತಿಯೊಂದು ಮನೆ ಮನೆಗೂ ಕೂಡ ನಲ್ಲಿ ಸಂಪರ್ಕವನ್ನು ಮಾಡಿ ರೈತರಿಗೆ ಮಹಿಳೆಯರಿಗೆ ನೀರನ್ನು ಪೂರೈಸಲಾಗುತ್ತಿದೆ ಎಂದು ಹೊಸಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರೇಣುಕಾ ತಿಳಿಸಿದರು.
ಕನ್ನಡಪ್ರಭ ವಾರ್ತೆ ಗುಬ್ಬಿ
ಕೇಂದ್ರ ಹಾಗೂ ರಾಜ್ಯ ಸರ್ಕಾರ ಗ್ರಾಮೀಣ ಭಾಗದಲ್ಲಿ ಪ್ರತಿಯೊಂದು ಮನೆ ಮನೆಗೂ ಕೂಡ ನಲ್ಲಿ ಸಂಪರ್ಕವನ್ನು ಮಾಡಿ ರೈತರಿಗೆ ಮಹಿಳೆಯರಿಗೆ ನೀರನ್ನು ಪೂರೈಸಲಾಗುತ್ತಿದೆ ಎಂದು ಹೊಸಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರೇಣುಕಾ ತಿಳಿಸಿದರು.ಗುಬ್ಬಿ ತಾಲೂಕಿನ ತಿಮ್ಮಲಾಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜಲ ಜೀವನ್ ಯೋಜನೆ ನಲ್ಲಿ ಸಂಪರ್ಕ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡದ ಅವರು, ಗ್ರಾಮೀಣ ಭಾಗದ ಮಹಿಳೆಯರಿಗೆ ಈ ಯೋಜನೆ ವರದಾನವಾಗಿದೆ. ಪ್ರತಿಯೊಂದು ಮನೆಗಳಿಗೆ ನಲ್ಲಿ ಸಂಪರ್ಕ ಮಾಡಿ ಸಾಕಷ್ವು ಮಹಿಳೆಯರು ಶುದ್ಧ ನೀರನ್ನು ಕುಡಿಯುತ್ತಿದ್ದಾರೆ. ಹಿಂದಿನ ಕಾಲದಲ್ಲಿ ನೀರನ್ನು ಬಾವಿಗಳಲ್ಲಿ ಕೆರೆಗಳಿಗೆ ಹೋಗಿ ನೀರು ತರಬೇಕಿತ್ತು. ಸರ್ಕಾರ ಪ್ರತಿಯೊಬ್ಬರಿಗೂ ಕುಡಿಯುವ ನೀರು ಸಿಗಬೇಕೆಂದು ಜಲ ಜೀವನ್ ಮೀಷನ್ ಯೋಜನೆಯನ್ನು ತಂದು ಎಲ್ಲ ಮಹಿಳೆಯರಿಗೆ ಅನುಕೂಲವನ್ನು ಮಾಡಿದೆ ಎಂದರು. ಈ ವೇಳೆ ಗ್ರಾಮ ಪಂಚಾಯಿತಿ ಸದಸ್ಯರಾದ ಮಹಾರುದ್ರಸ್ವಾಮಿ , ಸರ್ವ ಮಂಗಳಮ್ಮ, ಪಿಡಿಒ ರಾಜೇಂದ್ರ ಪ್ರಸಾದ್ , ಇಂಜಿನಿಯರ್ ದಿವ್ಯ, ಸಂಪನ್ಮೂಲ ವ್ಯಕ್ತಿ ಕಿರಣ್ , ಗುತ್ತಿಗೆದಾರರಾದ ರವಿ , ರೇಣುಕಾ ಪ್ರಸಾದ್ , ಲಿಂಗರಾಜು ಮುಖಂಡರಾದ ಲೋಕನಾಥ್ ಗಂಗಾಧರ್ಯ ಲೋಕೇಶ್ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.