ಸಾರಾಂಶ
ಬಾಳೆಹಣ್ಣು ಸಮರ್ಪಿಸಿ ದೇವಸ್ಥಾನದಿಂದ ಪಾದಕಟ್ಟೆಯವರೆಗೆ ರಥೋತ್ಸವ ಎಳೆದು ಭಕ್ತಿ ಸೇವೆ ಸಲ್ಲಿಸಿದರು.
ಕುಷ್ಟಗಿ: ತಾಲೂಕಿನ ಜಾಲಿಹಾಳ ಗ್ರಾಮದ ಶಕ್ತಿದೇವತೆ ದುರ್ಗಾದೇವಿ ಜಾತ್ರಾಮಹೋತ್ಸವದ ಪ್ರಯುಕ್ತ ಪಲ್ಲಕ್ಕಿ ಉತ್ಸವ ಹಾಗೂ ಲಘು ರಥೋತ್ಸವ ಸಡಗರ ಸಂಭ್ರಮದಿಂದ ಜರುಗಿತು.
ಜಾತ್ರಾ ಅಂಗವಾಗಿ ಬೆಳಗ್ಗೆ ದೇವಸ್ಥಾನದಲ್ಲಿ ಧಾರ್ಮಿಕ ವಿವಿಧ ಪೂಜಾ ವಿಧಾನಗಳು, ಗಂಗೆಪೂಜೆ, ಅಗ್ನಿಕುಂಡ, ದೇವಿಯ ಮೂರ್ತಿಪೂಜೆ ಕಾರ್ಯಕ್ರಮಗಳು ನಡೆದವು.ಸಂಜೆ ಲಘು ರಥೋತ್ಸವ ನಡೆಯಿತು. ಭಕ್ತರು ಉತ್ತತ್ತಿ, ಬಾಳೆಹಣ್ಣು ಸಮರ್ಪಿಸಿ ದೇವಸ್ಥಾನದಿಂದ ಪಾದಕಟ್ಟೆಯವರೆಗೆ ರಥೋತ್ಸವ ಎಳೆದು ಭಕ್ತಿ ಸೇವೆ ಸಲ್ಲಿಸಿದರು. ಸಹಸ್ರಾರು ಭಕ್ತರು, ಜನಪ್ರತಿನಿಧಿಗಳು ದುರ್ಗಾದೇವಿಯ ದರ್ಶನ ಪಡೆದು ಪುನೀತರಾದರು.
ಈ ಸಂದರ್ಭದಲ್ಲಿ ದೋಟಿಹಾಳ, ಕೇಸೂರು, ರ್ಯಾವಣಕಿ, ಜಾಲಿಹಾಳ, ಮಾಟೂರು,ಶಿರಗುಂಪಿ, ಬಳೂಟಗಿ ಸೇರಿದಂತೆ ಸುತ್ತಲಿನ ಹತ್ತಾರು ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))