ದೇವರ ಮುಂದೆ ಕೈಮುಗಿದು ನಿಂತ ಜಾಂಬವಂತ!

| Published : Feb 09 2024, 01:47 AM IST / Updated: Feb 09 2024, 01:58 PM IST

ಸಾರಾಂಶ

ಕರಡಿಯೊಂದು ಪ್ರತಿ ದಿನ ರಾತ್ರಿ ದೇವಾಲಯಕ್ಕೆ ಬಂದು ಕೈ ಮುಗಿದು ಹೋಗುವ ಅಪರೂಪದ ಘಟನೆಯೊಂದು ತಾಲೂಕಿನ ತಿಮ್ಮಸಂದ್ರ ಗ್ರಾಮದಲ್ಲಿ ನಡೆಯುತ್ತಿದೆ.

ರಾಮನಗರ: ಕರಡಿಯೊಂದು ಪ್ರತಿ ದಿನ ರಾತ್ರಿ ದೇವಾಲಯಕ್ಕೆ ಬಂದು ಕೈ ಮುಗಿದು ಹೋಗುವ ಅಪರೂಪದ ಘಟನೆಯೊಂದು ತಾಲೂಕಿನ ತಿಮ್ಮಸಂದ್ರ ಗ್ರಾಮದಲ್ಲಿ ನಡೆಯುತ್ತಿದೆ.

ಗ್ರಾಮದ ಸಿದ್ದಪ್ಪಾಜಿ ದೇವಾಲಯದಲ್ಲಿ ನಿತ್ಯವೂ ರಾತ್ರಿ ಕರಡಿ ಕಾಣಿಸಿಕೊಳ್ಳುತ್ತಿದೆ. ದೇವಾಲಯದ ಬಾಗಿಲು ಮತ್ತು ಕಿಟಕಿಯನ್ನು ಬಡಿಯುತ್ತದೆ. ಆನಂತರ ಕಿಟಕಿ ತೆರೆದು ದೇವರ ದರ್ಶನ ಪಡೆಯುತ್ತದೆ.

ಪ್ರತಿ ನಿತ್ಯ ರಾತ್ರಿ ದೇವಾಲಯದ ಬಾಗಿಲು ಬಡಿಯುವ ಶಬ್ದ ಅಕ್ಕಪಕ್ಕದ ಮನೆಯವರಿಗೆ ಕೇಳಿಸುತ್ತಿತ್ತು. ಇದು ಕಳ್ಳರ ಕೆಲಸ ಇರಬೇಕೆಂದು ಗ್ರಾಮಸ್ಥರು ಭಾವಿಸಿದ್ದರು. ಬಾಗಿಲು ಬಡಿಯುವ ಶಬ್ದ ಬಂದಾಗ ಹೋಗಿ ನೋಡಿದರೆ ಯಾರೂ ಇರುತ್ತಿರಲಿಲ್ಲ.

ಕೊನೆಗೆ ಗ್ರಾಮಸ್ಥರು ದೇವಸ್ಥಾನದ ಸುತ್ತಲು ಸಿಸಿ ಕ್ಯಾಮೆರಾ ಅಳವಡಿಸಿದರು. ಆನಂತರ ಇದು ಕಳ್ಳರ ಕೆಲಸ ಅಲ್ಲ, ಕರಡಿ ಕೆಲಸ ಎಂಬುದು ಖಾತ್ರಿಯಾಯಿತು.

ಪ್ರತಿ ದಿನ ರಾತ್ರಿ ಕರಡಿಯೊಂದು ದೇವಸ್ಥಾನಕ್ಕೆ ಬಂದು ಬಾಗಿಲು ಮತ್ತು ಕಿಟಕಿ ಬಡಿದು ದೇವರ ದರ್ಶನ ಪಡೆದು ಹೋಗುವ ದಶ್ಯನೋಡಿದ ಗ್ರಾಮಸ್ಥರಿಗೆ ಒಂದೆಡೆ ಆಶ್ಚರ್ಯವಾದರೆ, ಮತ್ತೊಂದೆಡೆ ಆತಂಕ ಕಾಡುತ್ತಿದೆ. ಈ ಕರಡಿ ಕೆಲ ದಿನಗಳಿಂದ ಸುತ್ತಮುತ್ತಲ ಬೆಟ್ಟ ಗುಡ್ಡಗಳಲ್ಲಿ ಬೀಡುಬಿಟ್ಟಿದೆ.