ಸಾರಾಂಶ
ರೈತರು, ಹಿಂದುಗಳು, ಮಠ- ಮಂದಿರಗಳ ಆಸ್ತಿಯನ್ನು ವಕ್ಫ್ ಹೆಸರಿನಲ್ಲಿ ಕೊಳ್ಳೆ ಹೊಡೆಯಲು ಪ್ರಯತ್ನಿಸುತ್ತಿರುವ ಮತಾಂಧ ಜಮೀರ್ ಅಹಮ್ಮದ್‌ನನ್ನು ರಾಜ್ಯ ಸರ್ಕಾರ ಹದ್ದುಬಸ್ತಿನಲ್ಲಿ ಇಡಬೇಕು. ಇಲ್ಲದಿದ್ದರೆ ಆತ ಕಾಂಗ್ರೆಸ್ಸಿಗಷ್ಟೇ ಅಲ್ಲ, ಇಡೀ ದೇಶಕ್ಕೂ ಹಾನಿಕಾರಕ, ಅಪಾಯಕಾರಿ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಎಚ್ಚರಿಸಿದ್ದಾರೆ.
ಕನ್ನಡಪ್ರಭ ವಾರ್ತೆ, ದಾವಣಗೆರೆ
ರೈತರು, ಹಿಂದುಗಳು, ಮಠ- ಮಂದಿರಗಳ ಆಸ್ತಿಯನ್ನು ವಕ್ಫ್ ಹೆಸರಿನಲ್ಲಿ ಕೊಳ್ಳೆ ಹೊಡೆಯಲು ಪ್ರಯತ್ನಿಸುತ್ತಿರುವ ಮತಾಂಧ ಜಮೀರ್ ಅಹಮ್ಮದ್‌ನನ್ನು ರಾಜ್ಯ ಸರ್ಕಾರ ಹದ್ದುಬಸ್ತಿನಲ್ಲಿ ಇಡಬೇಕು. ಇಲ್ಲದಿದ್ದರೆ ಆತ ಕಾಂಗ್ರೆಸ್ಸಿಗಷ್ಟೇ ಅಲ್ಲ, ಇಡೀ ದೇಶಕ್ಕೂ ಹಾನಿಕಾರಕ, ಅಪಾಯಕಾರಿ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಎಚ್ಚರಿಸಿದರು.ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆಂದು ಹೇಳಿಕೊಂಡೇ ವಕ್ಫ್ ಹೆಸರಿನಲ್ಲಿ ಹಿಂದುಗಳ ಜಮೀನುಗಳನ್ನು ಕೊಳ್ಳೆ ಹೊಡೆಯಲು ಜಮೀರ್ ಅಹಮ್ಮದ್ ನೋಡುತ್ತಿದ್ದು, ಸಂಪುಟದಿಂದ ಜಮೀರ್ ಕಿತ್ತೆಸೆಯದಿದ್ದರೆ ಕಾಂಗ್ರೆಸ್ಸಿಗೂ ಭವಿಷ್ಯವಿಲ್ಲ ಎಂದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನೇ ಕೊಂಡುಕೊಳ್ಳುವುದಾಗಿ ದುರಂಹಕಾರದ ಮಾತು, ಕೇಂದ್ರ ಸಚಿವ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರನ್ನು ಕರಿಯ ಎಂಬುದಾಗಿ ಜಮೀರ್ ಅಣಕವಾಡಿದ್ದಾರೆ. ಮಾತೆತ್ತಿದರೆ ಸಾಕು ಮೆಜೆಸ್ಟಿಕ್ ಮತ್ತು ವಿಧಾನಸೌಧ ತಮ್ಮದೆನ್ನುತ್ತಾರೆ. ಅದೇನು ಅವನ ಅಪ್ಪನ ಆಸ್ತಿಯಲ್ಲ. ಕೇರಳದಲ್ಲಿ ಕ್ರೈಸ್ತರ ಆಸ್ತಿಯೂ ವಕ್ಫ್‌ಗೆ ಸೇರಿಸಿದ ಮಾಹಿತಿ ಇದೆ. ಇದಕ್ಕೆಲ್ಲಾ ರಾಹುಲ್ ಗಾಂಧಿಯೂ ಕಾರಣ ಎಂದ ಅವರು, ಸಿವಿಲ್ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ನೀಡುವಂತೆ ಮನವಿ ಮಾಡಿದ 24 ಗಂಟೆಯಲ್ಲೇ ಸಿಎಂ ಸಿದ್ದರಾಮಯ್ಯ ಮನವಿ ಪುರಸ್ಕರಿಸಿದ್ದಾರೆಂದರೆ ಏನರ್ಥ ಎಂದು ಅವರು ಪ್ರಶ್ನಿಸಿದರು.ಪಕ್ಷದ ಮುಖಂಡರಾದ ಲೋಕಿಕೆರೆ ನಾಗರಾಜ, ಮಾಡಾಳ್ ಮಲ್ಲಿಕಾರ್ಜುನ, ಪ್ರವೀಣ ಜಾಧವ್, ಮಂಜುನಾಥ್, ಧರ್ಮರಾಜ, ಸುಮಂತ್, ರಾಜು ವೀರಣ್ಣ ಇತರರು ಇದ್ದರು.
- - --13ಕೆಡಿವಿಜಿ20:
ದಾವಣಗೆರೆಯಲ್ಲಿ ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.