ಸಾರಾಂಶ
ಹನೂರು : ಜಮೀರ್ ಅಹಮದ್ ದುರಹಂಕಾರದ ಮಾತುಗಳಿಗೆ ಜನತೆ ತಕ್ಕ ಪಾಠ ಕಲಿಸುತ್ತಾರೆ ಎಂದು ಚಾಮರಾಜನಗರ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ, ಮಾಜಿ ಶಾಸಕ ನಿರಂಜನ್ ಕುಮಾರ್ ತಿಳಿಸಿದರು.
ಹನೂರು ಪಟ್ಟಣದಲ್ಲಿ ಬಿಜೆಪಿ ಮಂಡಲದ ವತಿಯಿಂದ ಆಯೋಜಿಸಿದ್ದ ಬಿಜೆಪಿ ಪಕ್ಷದ ಸಂಘಟನಾ ಪರ್ವ ಸಭೆಯ ಬಳಿಕ ಮಾತನಾಡಿ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಕರಿಯ ಎಂಬ ಪದ ಬಳಕೆಯನ್ನು ಜಮೀರ್ ಅಹಮದ್ ಮಾಡಿರುವುದು ಸರಿಯಲ್ಲ. ಅಲ್ಲದೆ ದೇವೇಗೌಡರ ಕುಟುಂಬವನ್ನು ಇಡೀ ಮುಸ್ಲಿಮರು ಚಂದಾ ಹಾಕಿ ಖರೀದಿ ಮಾಡುತ್ತೇವೆ ಎಂದಿರುವುದು ಅವರ ದುರಹಂಕಾರವನ್ನು ಎತ್ತಿ ತೋರಿಸುತ್ತದೆ. ಇಂತಹ ಅಹಂಕಾರದ ಮಾತುಗಳನ್ನು ಕಾಂಗ್ರೆಸ್‌ನವರು ಪದೇ ಪದೇ ಅಲ್ಲಲ್ಲಿ ಮಾತನಾಡುತ್ತಿದ್ದಾರೆ. ಈ ಚುನಾವಣೆಯಲ್ಲಿ ಜನತೆ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಿಡಿಕಾರಿದ್ದಾರೆ.
ಅಲ್ಲದೆ ಜಮೀರ್ ಅಹ್ಮದ್ ವಕ್ಫ್ ವಿಚಾರದಲ್ಲೂ ಕೂಡ ಇದೇ ರೀತಿ ಅವಾಂತರ ಮಾಡಿದ್ದು ಇಡೀ ರಾಜ್ಯದ ನಾನಾ ಕಡೆ ವಕ್ಫ್‌ಗೆ ರೈತರು ಬೇಸಾಯ ಮಾಡುವಂತಹ ಜಮೀನುಗಳನ್ನು ಸೇರಿಸುವಂತಹ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಒಬಿಸಿ ಘಟಕದ ಅಧ್ಯಕ್ಷ ವೆಂಕಟೇಶ್ ಸೇರಿದಂತೆ ಮುಖಂಡರಾದ ನಿಶಾಂತ್, ಬಿಜೆಪಿ ಮಂಡಲ ಅಧ್ಯಕ್ಷ ಋಷಬೇಂದ್ರ, ಯುವ ಘಟಕದ ಅಧ್ಯಕ್ಷ ಮಹೇಶ್, ಮಹಿಳಾ ಘಟಕದ ಅದ್ಯಕ್ಷೆ ಮೀನಾ ಮುಖಂಡರಾದ ರಂಗಮಚಾರಿ, ಲೋಕೇಶ್ ಜತ್ತಿ ಸೇರಿದಂತೆ ಹಲವರು ಹಾಜರಿದ್ದರು.