ಅಲ್ಪಸಂಖ್ಯಾತ ಮುಖಂಡರ ಸಭೆ ನಡೆಸಿದ ಜಮೀರ್

| Published : Nov 11 2024, 12:48 AM IST

ಸಾರಾಂಶ

ಚನ್ನಪಟ್ಟಣ: ಉಪ ಚುನಾವಣೆಯಲ್ಲಿ ಮುಸ್ಲಿಂ ಮತ ಒಗ್ಗೂಡಿಸಲು ಕಾಂಗ್ರೆಸ್ ಹೈಕಮಾಂಡ್ ನೀಡಿರುವ ಸೂಚನೆ ಹಿನ್ನೆಲೆಯಲ್ಲಿ ಸಚಿವ ಜಮೀರ್ ಅಹಮದ್ ಖಾನ್ ಸತತ ಎರಡನೇ ದಿನವೂ ಕ್ಷೇತ್ರದಲ್ಲಿ ಬೀಡುಬಿಟ್ಟು ಮುಖಂಡರನ್ನು ಸೆಳೆಯುವ ಕಾರ್ಯ ಮುಂದುವರಿಸಿದರು.

ಚನ್ನಪಟ್ಟಣ: ಉಪ ಚುನಾವಣೆಯಲ್ಲಿ ಮುಸ್ಲಿಂ ಮತ ಒಗ್ಗೂಡಿಸಲು ಕಾಂಗ್ರೆಸ್ ಹೈಕಮಾಂಡ್ ನೀಡಿರುವ ಸೂಚನೆ ಹಿನ್ನೆಲೆಯಲ್ಲಿ ಸಚಿವ ಜಮೀರ್ ಅಹಮದ್ ಖಾನ್ ಸತತ ಎರಡನೇ ದಿನವೂ ಕ್ಷೇತ್ರದಲ್ಲಿ ಬೀಡುಬಿಟ್ಟು ಮುಖಂಡರನ್ನು ಸೆಳೆಯುವ ಕಾರ್ಯ ಮುಂದುವರಿಸಿದರು.

ಭಾನುವಾರ ಬೆಳಗ್ಗೆ ಖಾಸಗಿ ರೆಸಾರ್ಟ್ ನಲ್ಲಿ ಮಾಜಿ ಸಂಸದ ಡಿಕೆ ಸುರೇಶ್, ಶಾಸಕರಾದ ಇಕ್ಬಾಲ್ ಹುಸೇನ್, ಎನ್.ಎ. ಹ್ಯಾರಿಸ್ ಅವರೊಂದಿಗೆ ಸಭೆ ನಡೆಸಿದ ಜಮೀರ್ ಅಹಮದ್ ಖಾನ್, ಅಲ್ಪಸಂಖ್ಯಾತ ಮುಖಂಡರಾದ ತೌಸೀಫ್, ಜಖಿ ಅಹಮದ್ ಖಾನ್, ಎಸ್.ಕೆ. ಬೀಡಿ ಸಂಸ್ಥೆ ಮಾಲೀಕ ಸಾದತ್, ಹಮೀದ್ ಮುನಾವರ್, ಜಬಿವುಲ್ಲಾ, ಫರೀದ್ ಅವರ ನಿವಾಸಕ್ಕೆ ಭೇಟಿ ನೀಡಿ ಜೆಡಿಎಸ್‌ನ ಹಲ ಮುಖಂಡರನ್ನು ಕರೆಸಿಕೊಂಡು ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಂಡರು. ಇತ್ತೀಚೆಗೆ ಜೆಡಿಎಸ್ ಸೇರಿದ್ದ ನಾಯಕರ ಮನವೊಲಿಸಿ ಕಾಂಗ್ರೆಸ್ ಪರ ಕೆಲಸ ಮಾಡಲು ಒಪ್ಪಿಸಿದರು.

ಕೆಎಂಡಿಸಿ ಅಧ್ಯಕ್ಷ ಬಿ.ಕೆ. ಅಲ್ತಾಫ್ ಖಾನ್, ಹಿರಿಯ ಮುಖಂಡ ವಾಸಿಲ್ ಅವರೊಂದಿಗೆ ಇಡೀ ದಿನ ಮುಸ್ಲಿಂ ಮುಖಂಡರ ಪ್ರತ್ಯೇಕ ಸಭೆ ನಡೆಸಿ ಕಾರ್ಯತಂತ್ರ ರೂಪಿಸಿದರು.

ಪೊಟೋ೧೦ಸಿಪಿಟಿ6: ಚನ್ನಪಟ್ಟಣದಲ್ಲಿ ಅಲ್ಪಸಂಖ್ಯಾತರ ವಾರ್ಡ್‌ನಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಸಭೆ ನಡೆಸಿದರು.