ಜಮೀರ್ ರಾಜ್ಯದ ಜನರ ಕ್ಷಮೆ ಕೇಳಬೇಕು: ತುಮಕೂರು ಹಾಲು ಒಕ್ಕೂಟದ ಎಸ್.ಆರ್.ಗೌಡ

| Published : Nov 15 2024, 12:34 AM IST

ಜಮೀರ್ ರಾಜ್ಯದ ಜನರ ಕ್ಷಮೆ ಕೇಳಬೇಕು: ತುಮಕೂರು ಹಾಲು ಒಕ್ಕೂಟದ ಎಸ್.ಆರ್.ಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ವರ್ಣಭೇದ ಮಾಡಿ ಮಾತನಾಡಿರುವ ವಸತಿ ಸಚಿವ ಜಮೀರ್ ಅಹಮದ್ ಕೂಡಲೇ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ರಾಜ್ಯ ರೇಷ್ಮೆ ನಿಗಮದ ಮಾಜಿ ಅಧ್ಯಕ್ಷ ಹಾಗೂ ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ ಒತ್ತಾಯಿಸಿದರು. ಶಿರಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಶಿರಾ ರಾಜ್ಯದಲ್ಲಿ ರೈತರ ಪರವಾಗಿ ಹೋರಾಟ ಮಾಡಿ ಮಣ್ಣಿನ ಮಗನಾಗಿರುವ ಕೇಂದ್ರ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ವರ್ಣಭೇದ ಮಾಡಿ ಮಾತನಾಡಿರುವ ವಸತಿ ಸಚಿವ ಜಮೀರ್ ಅಹಮದ್ ಕೂಡಲೇ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ರಾಜ್ಯ ರೇಷ್ಮೆ ನಿಗಮದ ಮಾಜಿ ಅಧ್ಯಕ್ಷ ಹಾಗೂ ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ ಒತ್ತಾಯಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಏರ್ಪಡಿಸಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಬಿಸಿಲಲ್ಲಿ ಕೆಲಸ ಮಾಡುವ ರೈತರು ಕಪ್ಪಾಗಿರುತ್ತಾರೆ. ಅಂತಹ ಕಪ್ಪು ಬಣ್ಣವನ್ನು ಅವಹೇಳನಕಾರಿಯಾಗಿ, ಕೀಳಾಗಿ ಜಮೀರ್ ಅಹಮದ್ ಅವರು ಮಾತನಾಡಿದ್ದಾರೆ. ಸಿದ್ದರಾಮಯ್ಯ ಅವರನ್ನು, ಕಾಂಗ್ರೆಸ್ ಪಕ್ಷದವರನ್ನು ಓಲೈಸಲು ಹೀಗೆ ಮಾಡುತ್ತಿದ್ದಾರೆ. ಈ ದೇಶದ ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇಗೌಡರಿಗೆ ಇಡೀ ದೇಶದ ಜನರು ಅವರನ್ನು ಪೂಜಿಸುತ್ತಿದ್ದಾರೆ. ಅಂತಹ ದೇವೇಗೌಡರ ಪುತ್ರರಾದ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಅವರ ಬಣ್ಣದ ಬಗ್ಗೆ ಕೀಳಾಗಿ ಮಾತನಾಡಿರುವುದು ಖಂಡನೀಯ. ಕೂಡಲೇ ಎಚ್.ಡಿ.ಕುಮಾರಸ್ವಾಮಿ ಅವರಲ್ಲಿ ಹಾಗೂ ಈ ದೇಶದ ಜನರಲ್ಲಿ ಬಹಿರಂಗ ಕ್ಷಮೆ ಕೇಳಲೇಬೇಕು ಎಂದು ಆಗ್ರಹಿಸಿದರು. ತಾಲೂಕು ಜೆಡಿಎಸ್ ಅಧ್ಯಕ್ಷ ಸತ್ಯಪ್ರಕಾಶ್ ಮಾತನಾಡಿ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಇಡೀ ರಾಷ್ಟ್ರವೇ ಮೆಚ್ಚಿದೆ. ಅಂತಹ ಕುಮಾರಸ್ವಾಮಿ ಅವರ ಬಗ್ಗೆ ಕೀಳಾಗಿ ಮಾತನಾಡಿರುವ ಜಮೀರ್ ಅಹಮದ್ ಯುವಪೀಳಿಗೆಗೆ ಅಪಾಯಕಾರಿ. ಕುಮಾರಸ್ವಾಮಿ ಅವರು ಕೂಡಲೇ ಜಮೀರ್ ವಿರುದ್ಧ ಕ್ರಮ ಕೈಗೊಳ್ಳಬೇಕು. ಜಮೀರ್ ಅವರಿಗೆ ಸಂಸ್ಕಾರ ಇಲ್ಲ. ಅವರು ಕ್ಷಮೆ ಕೇಳದಿದ್ದರೆ ಅವರ ವಿರುದ್ಧ ಕಪ್ಪು ಬಾವುಟ ಪ್ರದರ್ಶನ ಮಾಡುತ್ತೇವೆ. ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ ಎಂದರು. ರಾಜ್ಯ ಜೆಡಿಎಸ್ ಪರಿಷತ್ ಸದಸ್ಯ ಆರ್.ಉಗ್ರೇಶ್ ಮಾತನಾಡಿ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಮೇಲೆ ಬಣ್ಣದ ಆಧಾರದ ಮೇಲೆ ಜಮೀರ್ ಅವರು ನಿಂದನೆ ಮಾಡಿರುವುದು ಖಂಡನೀಯ. ಇದೇ ಜಮೀರ್ ಅಹಮದ್ ಅವರು ಬೆಳೆದು ಬಂದ ರೀತಿಯನ್ನು ಒಮ್ಮೆ ನೆನಪಿಸಿಕೊಳ್ಳಲಿ. ಎಚ್.ಡಿ.ದೇವೇಗೌಡರಿಂದ ಜಮೀರ್ ಅವರು ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಯಿತು. ಕಪ್ಪು ಬಣ್ಣವನ್ನು ಕೀಳಾಗಿ ಮಾತನಾಡಿರುವ ಜಮೀರ್ ಅಹಮದ್ ಅವರು ರೈತರಿಗೂ ಅವಮಾನ ಮಾಡಿದ್ದಾರೆ. ರಾಜ್ಯದಲ್ಲಿ ಹಿಂದೂ ಮುಸ್ಲಿಂ ಸಮುದಾಯಗಳ ಮಧ್ಯೆ ಜಗಳ ತಂದಿಡುತ್ತಿದ್ದಾರೆ. ಕೂಡಲೇ ರಾಜ್ಯದ ಜನತೆ ಹಾಗೂ ರೈತಾಪಿ ವರ್ಗದ ಕ್ಷಮೆ ಕೇಳಬೇಕು ಎಂದರು.ಜೆಡಿಎಸ್ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ರೆಹಮತ್ ಮಾತನಾಡಿ, ಜಮೀರ್ ಅವರು ಕರಿಯ ಎಂದು ಎಚ್.ಡಿ.ಕುಮಾರಸ್ವಾಮಿ ಅವರನ್ನು ಕರೆದಿರುವುದು ಮನಸ್ಸಿಗೆ ನೋವಾಗಿದೆ. ಕೂಡಲೇ ಮಾತನ್ನು ವಾಪಸ್ಸು ಪಡೆಯಬೇಕು. ಮುಸ್ಲಿಂ ಸಮುದಾಯಕ್ಕೆ ೪ರಷ್ಟು ಮೀಸಲಾತಿ ಕೊಡಿಸಿದವರು ಎಚ್.ಡಿ.ದೇವೇಗೌಡರು. ರಾಜ್ಯದ ಹಿಂದೂಗಳು ಜಮೀರ್ ಅವರ ಮಾತಿಗೆ ಕಿವಿಗೋಡಬೇಡಿ. ಜಮೀರ್ ಅವರಬ್ಬರೇ ಮುಸ್ಲಿಂ ಅಲ್ಲ. ರಾಜ್ಯದಲ್ಲಿ ಶಾಂತಿ ಭಂಗ ಮಾಡಬಾರದು ಎಂದರು. ಮಾಜಿ ಜಿಪಂ ಉಪಾಧ್ಯಕ್ಷ ಮುದಿಮಡು ರಂಗಶಾಮಯ್ಯ, ಮಾಜಿ ನಗರಸಭಾ ಅಧ್ಯಕ್ಷ ಬಿ.ಅಂಜಿನಪ್ಪ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಟಿ.ಡಿ.ಮಲ್ಲೇಶ್, ನಗರ ಜೆಡಿಎಸ್ ಅಧ್ಯಕ್ಷ ಶ್ರೀರಂಗ, ಮಹಿಳಾ ಘಟಕದ ಅಧ್ಯಕ್ಷೆ ರೇಣುಕಮ್ಮ, ಮಾಜಿ ತಾಪಂ ಉಪಾಧ್ಯಕ್ಷ ರಂಗನಾಥ್ ಗೌಡ, ಕಾಡುಗೊಲ್ಲ ಸಂಘದ ಅಧ್ಯಕ್ಷ, ಚಂದ್ರಪ್ಪ, ಮುಖಂಡರಾದ ಸುನಿಲ್ ಕುಮಾರ್ ಗೌಡ, ಕೊಟ್ಟ ರಾಜಣ್ಣ, ಭುವನಹಳ್ಳಿ ನಟರಾಜ್, ಬಿ ಆರ್ ನಾಗಭೂಷಣ್, ಎಲ್.ಕೆ.ದಯಾನಂದ್, ಹಂದುಕುಂಟೆ ಚಂದ್ರಣ್ಣ, ಜಯಮ್ಮ, ಹಲವರು ಹಾಜರಿದ್ದರು.