ಅಲ್ಲಾ ಎಂದರೆ ಏನು ಎಂಬುವುದು ಜಮೀರ ಅಹ್ಮದ್‌ಗೆ ಕೇಳಬೇಕು : ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು

| Published : Nov 12 2024, 12:45 AM IST / Updated: Nov 12 2024, 01:08 PM IST

ಅಲ್ಲಾ ಎಂದರೆ ಏನು ಎಂಬುವುದು ಜಮೀರ ಅಹ್ಮದ್‌ಗೆ ಕೇಳಬೇಕು : ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು
Share this Article
  • FB
  • TW
  • Linkdin
  • Email

ಸಾರಾಂಶ

 ಜಮೀರ ಅಹ್ಮದ್‌   ಜಮೀನುಗಳನ್ನು ಅಲ್ಲಾನ್ ಹೆಸರಲೇ ಮಾಡು ಎಂದು ಅಲ್ಲಾ ನನಗೆ ವಕ್ಫ್‌ ಬೋರ್ಡ್‌ಗೆ ವರ್ಗಾಯಿಸು ಎಂದು ಹೇಳಿದ್ದಾನೆ. ಅದಕ್ಕೆ ನಾನು ಈ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ್ದರು. ಅಲ್ಲಾ ಎಂದರೆ ಏನು ಎಂಬುವುದನ್ನು ಅವರಿಗೆ ಕೇಳಬೇಕು - ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು 

  ಸಿಂದಗಿ : ಕೆಲವು ದಿನಗಳ ಹಿಂದೆ ಸಚಿವ ಜಮೀರ ಅಹ್ಮದ್‌ ಖಾನ್‌ರು ಮಾಧ್ಯಮದಲ್ಲಿ ಹೇಳಿದ್ದನ್ನು ಕೇಳಿದ್ದೇವೆ. ಜಮೀನುಗಳನ್ನು ಅಲ್ಲಾನ್ ಹೆಸರಲೇ ಮಾಡು ಎಂದು ಅಲ್ಲಾ ನನಗೆ ವಕ್ಫ್‌ ಬೋರ್ಡ್‌ಗೆ ವರ್ಗಾಯಿಸು ಎಂದು ಹೇಳಿದ್ದಾನೆ. ಅದಕ್ಕೆ ನಾನು ಈ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ್ದರು. ಅಲ್ಲಾ ಎಂದರೆ ಏನು ಎಂಬುವುದನ್ನು ಅವರಿಗೆ ಕೇಳಬೇಕು. ಏಕೆಂದರೆ ಈ ಭೂಮಂಡಲದಲ್ಲಿ ಭಗವಂತ ಎಲ್ಲರಿಗೂ ಆಸರೆ ನೀಡಿದ್ದಾನೆ ಎಂದು ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ನುಡಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ವಿಶ್ವ ಹಿಂದೂ ಪರಿಷದ್‌, ಸಿಂದಗಿ ಬಜರಂಗದಳ ವತಿಯಿಂದ ಮಠಾಧೀಶರ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ರೈತರ, ಸಾರ್ವಜನಿಕರ ಜಮೀನು ಉಳಿವಿಗಾಗಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಏಕಾಏಕಿ ವಕ್ಫ್‌ ಬೋರ್ಡ್ ಹೆಸರಿನಲ್ಲಿ ೧೧ನೇ ಕಾಲಂನಲ್ಲಿ ಹೆಸರು ಸೇರ್ಪಡೆಯಾಗಿದ್ದನ್ನು ಖಂಡಿಸುತ್ತೇವೆ. ರೈತರ ಆಸ್ತಿಯನ್ನು ವಕ್ಫ್‌ ಬೋರ್ಡ್‌ಗೆ ತೆಗೆದುಕೊಳ್ಳುವಂತಹದ್ದು ಇದು ಭಗವಂತನ ಬೋರ್ಡ್‌, ರೈತರ ಜಮೀನುಗಳು ವಕ್ಫ್‌ ಬೋರ್ಡ್‌ಗೆ ತೆಗೆದುಕೊಳ್ಳುತ್ತಿರುವುದು ಸ್ಥಿತಿ ಶೋಚನಿಯ ಎಂದರು.

ಕನ್ನೋಳ್ಳಿಯ ಸಿದ್ದಲಿಂಗ ಶಿವಾಚಾರ್ಯರು ಮಾತನಾಡಿ, ಭಾರತದ ಸಂವಿಧಾನದ ಪ್ರಕಾರ ಕಾಯ್ದೆ ಜಾರಿಗೆ ಬರಬೇಕು. ಮುಸ್ಲಿಂರಿಗೊಂದು ಬೇರೆ ಕಾನೂನು ಇದು ಸಂವಿಧಾನ ಬಾಹಿರ. ರೈತರ, ಸಾರ್ವಜನಿಕರ ಮನೆ ಮಠದ ಆಸ್ತಿಗಳು ಯಾರದೋ ಪಾಲಾಗುವುದು ಬೇಡ. ಹಾಗೇನಾದರೂ ಆದರೆ ನಾವು ಮಠಾಧೀಶರು ಸುಮ್ಮನಿರುವುದಿಲ್ಲ. ನ್ಯಾಯ ದೊರಕುವವರೆಗೂ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. 

ಯಂಕಂಚಿ ಶ್ರೀಮಠದ ಅಭಿನವ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ಆಸ್ತಿ ಊರ ಮಗ್ಗಲಕ್ ಒಂದಚೂರ ಹೆಚ್ಚಿಗೆ ಇತ್ತು ಅಂದರೆ ಅದನ್ನು ವಕ್ಫ್ ಹೆಸರಿಗೆ ಮಾಡಿಕೊಳ್ಳುವ ಜತೆಗೆ ಮಠಮಾನ್ಯಗಳ ಆಸ್ತಿನೂ ತೆಗೆದುಕೊಳ್ಳುತ್ತಿದ್ದಾರೆ. ಇದೆಲ್ಲವನ್ನು ನೋಡಿದರೆ ನಾಳೆ ನಮ್ಮ ಧರ್ಮದ ಉಳಿವಿಗಾಗಿಯೂ ನಾವು ಹೋರಾಡುವ ಪರಿಸ್ಥಿತಿ ಬರುತ್ತದೆ ಎಂದು ತಿಳಿಸಿದರು.

ಈ ಮೊದಲು ವಿಶ್ವ ಹಿಂದೂ ಪರಿಷತ್, ಸಿಂದಗಿ ಭಜರಂಗದಳ, ಮಠಾಧೀಶರು ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಸಾರಂಗಮಠದಿಂದ ಸ್ವಾಮಿ ವಿವೇಕಾನಂದ ವೃತ್ತದ ಮಾರ್ಗವಾಗಿ ಬಸವೇಶ್ವರ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.

ಪ್ರತಿಭಟನೆಯಲ್ಲಿ ಆಲಮೇಲ ಶ್ರೀಗಳು, ಬೋರಗಿ ಶ್ರೀಗಳು, ಕುಮಸಗಿ ಶ್ರೀಗಳು, ವಿರಕ್ತಮಠದ ಶ್ರೀಗಳು, ಅಲ್ಲಾಪೂರ ಶ್ರೀಗಳು, ನಾಗಣಸೂರ ಶ್ರೀಗಳು, ಗೀತಾ ಅಂಗಡಿ, ಶೇಖಕರಗೌಡ ಹರನಾಳ, ಡಾ.ಶರಣಗೌಡ ಬಿರಾದಾರ, ಶ್ರೀಮಂತ ದುದ್ದಗಿ, ಅಶೋಕ ಅಲ್ಲಾಪುರ, ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ, ಮಲ್ಲು ಸಾವಳಸಂಗ, ಪೀರು ಕೆರೂರ, ಶ್ರೀಕಾಂತ ಬಿಜಾಪುರ, ಸಿದ್ದು ಪೂಜಾರಿ, ಯಲ್ಲು ಇಂಗಳಗಿ, ಶೈಲಜಾ ಸ್ಥಾವರಮಠ, ರಾಜಕುಮಾರ ಭಾಸಗಿ, ಕಾಜು ಬಂಕಲಗಿ, ಅಶೋಕ ನಾರಾಯಣಪುರ, ಸಾಹೇಬಗೌಡ ಅಡವಿ, ಶಿವರಾಜ ಗುತ್ತರಗಿ ಸೇರಿದಂತೆ ವಿವಿಧ ಸಂಘಟನೆಯ ಕಾರ್ಯಕರ್ತರು ಇದ್ದರು.