ಮುಂದಿನ ಎರಡು ದಶಕ ಡಾಟಾ ಅನಾಲಿಟಿಕ್ಸ್‌ ಆಳುತ್ತದೆ: ಬಾಲಾಜಿ

| Published : Jun 04 2024, 12:31 AM IST / Updated: Jun 04 2024, 02:04 PM IST

ಮುಂದಿನ ಎರಡು ದಶಕ ಡಾಟಾ ಅನಾಲಿಟಿಕ್ಸ್‌ ಆಳುತ್ತದೆ: ಬಾಲಾಜಿ
Share this Article
  • FB
  • TW
  • Linkdin
  • Email

ಸಾರಾಂಶ

ತರಬೇತಿ ಹೊಂದಿದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶವಿದೆ. ಯುವಜನತೆ ಅವುಗಳಲ್ಲಿ ತರಬೇತಿ ಹೊಂದಿ ಉದ್ಯೋಗ ಪಡೆಯಬಹುದು

 ಮೈಸೂರು :- - ಮುಂದಿನ ಎರಡು ದಶಕದ ಉದ್ಯೋಗ ಕ್ಷೇತ್ರವನ್ನು ಡೇಟಾ ಅನಾಲಿಟಿಕ್ಸ್‌ ಆಳುತ್ತದೆ ಎಂದು ಜನ ಸ್ಮಾಲ್‌ ಬ್ಯಾಂಕ್‌ ನ ಉಪಾಧ್ಯಕ್ಷ ಬಾಲಾಜಿ ಹೇಳಿದರು.

ತಜ್ಞರ ಜತೆಗಿನ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕ್ಷೇತ್ರದಲ್ಲಿ ವಿಫುಲವಾದ ಉದ್ಯೋಗ ಅವಕಾಶಗಳಿದ್ದು, ಯುವ ಜನತೆ ಇದರ ಉಪಯೋಗ ಪಡೆಯಬೇಕು ಎಂದು ಸಲಹೆ ನೀಡಿದರು.

ವಿಪ್ರೋದ ಹಿರಿಯ ಯೋಜನ ಲೀಡ್ ಶಶಿಕಾಂತ್ ಮಾತನಾಡಿ, ಡೇಟಾ ಅನಾಲಿಟಿಕ್ಸ್ನ ಲ್ಲಿ ಮುಖ್ಯವಾಗಿ ಫೈತಾನ್, ಆರ್ಪ್ರೋಗ್ರಾಮಿಂಗ್, ಟಾಬ್ಲೂ, ಗೂಗಲ್ಸ್ಟೂಡಿಯೋ, ಪವರ್‌ಬಿಐನಲ್ಲಿ ತರಬೇತಿ ಹೊಂದಿದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶವಿದೆ. ಯುವಜನತೆ ಅವುಗಳಲ್ಲಿ ತರಬೇತಿ ಹೊಂದಿ ಉದ್ಯೋಗ ಪಡೆಯಬಹುದು ಎಂದರು.

ತಜ್ಞರ ಜತೆ ಸಂವಾದದಲ್ಲಿ ಸುಮಾರು 20 ಮಂದಿ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಅದರ ಪ್ರಯೋಜನ ಪಡೆದರು. ಶ್ರೀ ಗುರು ಸ್ಕೂಲ್ಆಫ್ ಡೇಟಾ ಅನಾಲಿಟಿಕ್ಸ್ನ್ ನಿರ್ದೇಶಕಿ ಅನಸೂಯ ಮಾತನಾಡಿ, ಯಾವುದೇ ಪದವಿ ಪಡೆದಿರುವ, ತಾಂತ್ರಿಕ ಮತ್ತು ತಾಂತ್ರಿಕೇತರ ವಿದ್ಯಾರ್ಥಿಗಳು ಆರು ತಿಂಗಳು ಈ ಶಿಕ್ಷಣ ಪಡೆದು ಡೇಟಾ ಅನಾಲಿಟಿಕ್ಸ್ ಕ್ಷೇತ್ರವನ್ನು ಸರೇಬಹುದು ಎಂದು ಅವರು ತಿಳಿಸಿದರು.

ಕೆರಿಯರ್ ಪ್ರೇಮ್ ಸಲೂಷನ್ನ ಎಂಡಿ ರಂಜಿನಿ, ಸಹಾಯಕ ಪ್ರಾಧ್ಯಾಪಕ ಡಾ. ಚೆನ್ನಯ್ಯ ಇದ್ದರು. ಶ್ರೀಗುರು ಸ್ಕೂಲ್ ಆಫ್ ಡೇಟಾ ಅನಾಲಿಟಿಕ್ಸ್ ನ ನಿರ್ದೇಶಕಿ ಅನಸೂಯ ಸ್ವಾಗತಿಸಿದರು. ಚೇತನ್ ಕುಮಾರ್ ವಂದಿಸಿದರು.