ಸಾರಾಂಶ
ಸಂಸ್ಕೃತ ಕವಿ ರಾಮಾಯಣ ಮಹಾ ಕಾವ್ಯದ ಕರ್ತೃ ಮೊದಲ ಮಹಾಕಾವ್ಯ ರಚಿಸಿದ ಕಾರಣ ವಾಲ್ಮೀಕಿ ಅವರನ್ನು ಆದಿಕವಿ ಎಂದು ಕರೆಯಲಾಗಿದೆ.
ಗದಗ: ರಾಮಾಯಣ ಬರೆಯುವುದು ಒಂದು ಭಾಗ ಅಷ್ಟೇ, ಆದರೆ ತಂದೆಯಾಗಿ ಸೀತೆಗೆ ಆಶ್ರಯ ಕೊಟ್ಟು ಲವ-ಕುಶರನ್ನು ಸಾಕುವುದಿದೆಯಲ್ಲ ಅದು ವಾಲ್ಮೀಕಿಯ ಹೆಗ್ಗಳಿಕೆ ಎಂದು ಕನ್ನಡ ಪ್ರಾಧ್ಯಾಪಕಿ ಶ್ರುತಿ ಮ್ಯಾಗೇರಿ ಹೇಳಿದರು.
ನಗರದ ಕೆ.ಎಲ್.ಇ ಸಂಸ್ಥೆಯ ಜ. ತೋಂಟದಾರ್ಯ ಮಹಾವಿದ್ಯಾಲಯದಲ್ಲಿ ನಡೆದ ಶ್ರೀಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.ಇಂದಿಗೂ ಭಾರತದ್ಯಂತ ಹಲವಾರು ವಾಲ್ಮೀಕಿ ಮಹರ್ಷಿಯ ದೇವಾಲಯ ಕಾಣುತ್ತೇವೆ. ಅದರಲ್ಲಿ ಪುರಾತನವಾದ ಚೆನ್ನೈ ಸಮೀಪದ ತಿರುವಣ್ಣೆಯೂರಿನಲ್ಲಿ ಇರುವ 13 ನೂರು ವರ್ಷಗಳ ಹಿಂದೆ ನಿರ್ಮಿಸಿದ ವಾಲ್ಮೀಕಿ ದೇವಾಲಯ ಇದೆ ಎಂಬುದು ತಿಳಿದು ಬರುತ್ತದೆ. ವಾಲ್ಮೀಕಿ ಒಬ್ಬ ಋಷಿ ಹಾಗೂ ಸಂಸ್ಕೃತ ಕವಿ ರಾಮಾಯಣ ಮಹಾ ಕಾವ್ಯದ ಕರ್ತೃ ಮೊದಲ ಮಹಾಕಾವ್ಯ ರಚಿಸಿದ ಕಾರಣ ವಾಲ್ಮೀಕಿ ಅವರನ್ನು ಆದಿಕವಿ ಎಂದು ಕರೆಯಲಾಗಿದೆ ಎಂದು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾ. ಪಿ.ಜಿ. ಪಾಟೀಲ ಮಾತನಾಡಿ, ಮಕ್ಕಳಿಗೆ ಪುರಾಣ, ಹಿಂದಿನ ಕಾಲದ ಭಕ್ತಿಯ ಬಗ್ಗೆ ಅರಿವು ಮೂಡಿಸಬೇಕು ಎಂದರು.ಪಪೂ ಪ್ರಾ. ಪ್ರೊ. ಎಸ್.ಬಿ. ಹಾವೇರಿ ಸೇರಿದಂತೆ ಪ್ರಮುಖರು ಇದ್ದರು. ಪ್ರೊ. ಸೌಭಾಗ್ಯ ಹಿರೇಮಠ ಪ್ರಾರ್ಥಿಸಿದರು. ಪ್ರೊ. ರೀಮಾ ಬಾಕಳೆ ನಿರೂಪಿಸಿದರು. ಪ್ರೊ. ಜಿ.ವಿಶ್ವನಾಥ ಸ್ವಾಗತಿಸಿದರು. ಪ್ರೊ. ನಾಗರಾಜ ವಂದಿಸಿದರು.