ಉಡುಪಿಯ ಕಾವಿ ಕಲಾವಿದ ಜನಾರ್ದನ ಹಾವಂಜೆಗೆ ರಾಷ್ಟ್ರೀಯ ಪುರಸ್ಕಾರ

| Published : Feb 23 2024, 01:48 AM IST

ಉಡುಪಿಯ ಕಾವಿ ಕಲಾವಿದ ಜನಾರ್ದನ ಹಾವಂಜೆಗೆ ರಾಷ್ಟ್ರೀಯ ಪುರಸ್ಕಾರ
Share this Article
  • FB
  • TW
  • Linkdin
  • Email

ಸಾರಾಂಶ

ಹಾವಂಜೆ ಅವರು ಇಂದಿಗೆ ಅಳಿದು ಹೋಗುತ್ತಿರುವ ಈ ದೇಶಿಯ ಕಾವಿ ಕಲೆಯ ಉಳಿವಿಗಾಗಿ ಜಾಗತಿಕ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿಭಾರತ ಸರ್ಕಾರದ ಮಾನ್ಯತೆ ಪಡೆದಿರುವ ತೆಲಂಗಾಣದ ಕ್ರಾಫ್ಟ್ ಕೌನ್ಸಿಲ್ ಸಂಸ್ಥೆಯು ಕೊಡ ಮಾಡುವ ಶ್ರೀಮತಿ ಪಿಂಗಳೆ ಕಮಲಾರೆಡ್ಡಿ ಎಕ್ಸಲೆನ್ಸ್ ಇನ್ ಕ್ರಾಪ್ಟ್ ರಾಷ್ಟ್ರೀಯ ಪುರಸ್ಕಾರವು ಕೊಂಕಣ ತೀರ ಪ್ರದೇಶದ ಕಾವಿ ಕಲೆಯ ಉಳಿವು ಮತ್ತು ಬೆಳೆಸುವಿಕೆಗೆ ಸುಮಾರು 20 ವರ್ಷಗಳಿಂದಲೂ ಸತತವಾಗಿ ಶ್ರಮಿಸುತ್ತಿರುವ ಡಾ. ಜನಾರ್ದನ ಹಾವಂಜೆ ಅವರಿಗೆ ನೀಡಿ ಗೌರವಿಸಲಾಗಿದೆ.ಮಂಗಳೂರಿನ ಶ್ರೀನಿವಾಸ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಹಾಗೂ ಮಣಿಪಾಲದ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಮತ್ತು ಸೈನ್ಸ್‌ನಲ್ಲಿ ಸಂದರ್ಶಕ ಸಹಾಯಕ ಪ್ರಾಧ್ಯಾಪಕರಾಗಿರುವ ಹಾವಂಜೆ ಅವರು ಇಂದಿಗೆ ಅಳಿದು ಹೋಗುತ್ತಿರುವ ಈ ದೇಶಿಯ ಕಾವಿ ಕಲೆಯ ಉಳಿವಿಗಾಗಿ ಜಾಗತಿಕ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾವಿ ಕಲೆಯ ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಿಸುವ ಕಾರ್ಯವನ್ನು ನಡೆಸುತ್ತಾ ಹಲವಾರು ಕಾರ್ಯಾಗಾರಗಳು, ಶಿಬಿರಗಳು ಕಲಾ ಪ್ರದರ್ಶನಗಳು ಮತ್ತು ಅಧ್ಯಯನ ಪ್ರಬಂಧಗಳನ್ನು ಮಂಡಿಸುತ್ತಿದ್ದಾರೆ.ಈ ಪುರಸ್ಕಾರ ಪ್ರದಾನ ಸಂದರ್ಭದಲ್ಲಿ ಹೈದರಾಬಾದಿನ ಸಿಸಿಟಿ ಕಮಲ ಸ್ಪೇಸ್‌ನಲ್ಲಿ ಇವರ ಕಾವಿ ಕಲಾ ಕೃತಿಗಳ ಪ್ರದರ್ಶನವೂ ನಡೆಯುತ್ತಿದೆ.