ಶಾಸಕ ಜನಾರ್ದನ ರೆಡ್ಡಿ ಮನೆಯೇ ಸುಳ್ಳಿನ ಕಾರ್ಖಾನೆ : ಸಚಿವ ಶಿವರಾಜ ತಂಗಡಗಿ ವ್ಯಂಗ್ಯ

| Published : Nov 09 2024, 01:17 AM IST / Updated: Nov 09 2024, 11:21 AM IST

ಶಾಸಕ ಜನಾರ್ದನ ರೆಡ್ಡಿ ಮನೆಯೇ ಸುಳ್ಳಿನ ಕಾರ್ಖಾನೆ : ಸಚಿವ ಶಿವರಾಜ ತಂಗಡಗಿ ವ್ಯಂಗ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಶಾಸಕ ಜನಾರ್ದನ ರೆಡ್ಡಿ ಮನೆಯೇ ಸುಳ್ಳಿನ ಕಾರ್ಖಾನೆ ಎಂದು ಸಚಿವ ಶಿವರಾಜ ತಂಗಡಗಿ ವ್ಯಂಗ್ಯವಾಡಿದರು.

ಕುರುಗೋಡು: ಶಾಸಕ ಜನಾರ್ದನ ರೆಡ್ಡಿ ಮನೆಯೇ ಸುಳ್ಳಿನ ಕಾರ್ಖಾನೆ ಎಂದು ಸಚಿವ ಶಿವರಾಜ ತಂಗಡಗಿ ವ್ಯಂಗ್ಯವಾಡಿದರು.

ತಾಲೂಕಿನ ಏಳುಬೆಂಚಿ ಗ್ರಾಮದಲ್ಲಿ ಕಾಂಗ್ರೆಸ್ ಬಹಿರಂಗ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣಾ ತುಕಾರಾಂ ಬಹಿರಂಗ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಬಳ್ಳಾರಿಯಲ್ಲಿ ಸುಳ್ಳು ಹೇಳಿ ಹೇಳಿ ಸಾಕಾಗಿ ನಮ್ಮ ಕೊಪ್ಪಳ ಜಿಲ್ಲೆಗೆ ಸುಳ್ಳು ಹೇಳಲು ಬಂದಿದ್ದಾರೆ ಎಂದರು.

ಪ್ರಧಾನಿ ಮೋದಿ ಕಪ್ಪು ಹಣ ತಂದು ಪ್ರತಿಯೊಬ್ಬರ ಬ್ಯಾಂಕ್‌ ಖಾತೆಗೆ ₹೧೫ ಲಕ್ಷ ಹಾಕುತ್ತೇನೆ ಎಂದು ಹೇಳಿದ್ದರು. ಅದಕ್ಕಾಗಿ ಎಲ್ಲ ಮಹಿಳೆಯರು ಬ್ಯಾಂಕ್‌ ಖಾತೆ ತೆರೆದಿರಿ. ಆದರೆ ನಿಮ್ಮ ಖಾತೆಗೆ ಬಿಜೆಪಿ ಹಣ ಹಾಕಲಿಲ್ಲ. ಹಣ ಹಾಕಿದ್ದು ಮಾತ್ರ ಕಾಂಗ್ರೆಸ್‌ ಗ್ಯಾರಂಟಿ ಯೋಜನೆಯ ₹2000. ಬಡವರ ಹಸಿವು ನೀಗಿಸಲು ಸಿದ್ದರಾಮಯ್ಯ ೫ ಕೆಜಿ ಅಕ್ಕಿ ಜತೆ ₹೧೭೦ ಹಾಕುತ್ತಿದ್ದಾರೆ. ಈ ಭಾಗದಲ್ಲಿ ಬೆಳೆಗಳು ಒಣಗುತ್ತಿದ್ದಾಗ ಟಿಬಿ ಡ್ಯಾಂನಲ್ಲಿ ೨೪ ಟಿಎಂಸಿ ನೀರು ಅಷ್ಟೇ ಇತ್ತು. ಆದರೂ ರೈತರ ಕಷ್ಟ ನೋಡದೇ ಶಾಸಕರಾಗಿದ್ದ ತುಕಾರಾಂ ಹಾಗೂ ಜೆ.ಎನ್. ಗಣೇಶ್ ನೀರು ಬಿಡಿಸಿಕೊಂಡು ಬಂದರು.

ಟಿ.ಬಿ. ಡ್ಯಾಂನ ೧೯ನೇ ಗೇಟ್ ಮುರಿದು ಬಿದ್ದಾಗ ಬಿಜೆಪಿಗರು ನಮ್ಮ ಮೇಲೆ ಮುಗಿಬಿದ್ದಿದ್ದರು. ಆದರೆ ಕೇವಲ ೫ ದಿನದಲ್ಲಿ ದುರಸ್ತಿ ಮಾಡಿದ್ದೇವೆ. ಟಿ.ಬಿ. ಡ್ಯಾಂ ಬೋರ್ಡ್‌ ಕೇಂದ್ರ ಸರ್ಕಾರದ ಅಧೀನದಲ್ಲಿದೆ. ಗೇಟ್ ದುರಸ್ತಿ ನಂತರ ಕೆಲಸಗಾರರಿಗೆ ಹಣ ನೀಡಲಿಲ್ಲ. ಆಗ ನಮ್ಮ ಕಾಂಗ್ರೆಸ್ ಸರ್ಕಾರ ತ್ವರಿತವಾಗಿ ಕಾರ್ಮಿಕರಿಗೆ ಹಣ ನೀಡಿದೆ. ಗ್ಯಾರಂಟಿ ಯೋಜನೆಗಳ ಋಣ ತೀರಿಸಲು ಮಹಿಳೆಯರಿಗೆ ಅವಕಾಶ ಸಿಕ್ಕಿದೆ. ನಿಮ್ಮ ಮತವನ್ನು ಕಾಂಗ್ರೆಸ್‌ಗೆ ಹಾಕಿ ಋಣ ತೀರಿಸಿ ಎಂದರು.

ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾತನಾಡಿ, ದೇಶದಲ್ಲಿ ಯಾವ ರಾಜ್ಯದಲ್ಲೂ ಇಲ್ಲದ ಗ್ಯಾರಂಟಿ ಯೋಜನೆ ನಮ್ಮ ಕರ್ನಾಟಕದಲ್ಲಿ ಮಾತ್ರ ಇದೆ. ಅದಕ್ಕೆ ಬಿಜೆಪಿಗರಿಗೆ ಹೊಟ್ಟೆಕಿಚ್ಚು. ತೆರಿಗೆ ವಿಚಾರದಲ್ಲಿ ನಮ್ಮ ಪಾಲು ಕೇಳಿದ ರೀತಿ ಸಹಿಸದ ಬಿಜೆಪಿಗರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಉರುಳಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಜನರಿಗೆ ತಲುಪುತ್ತಿರುವ ಎಲ್ಲ ಯೋಜನೆಗಳು ಪ್ರತಿಯೊಂದು ಕಾಂಗ್ರೆಸ್‌ ಕೊಡುಗೆ ಎಂದರು.

ಶಾಸಕರಾದ ಬಿ. ನಾಗೇಂದ್ರ, ಜೆ.ಎನ್. ಗಣೇಶ್ ಮಾತನಾಡಿದರು. ಕೆಎಂಎಫ್ ಅಧ್ಯಕ್ಷ ಭೀಮ ನಾಯ್ಕ್, ಶಾಸಕರಾದ ಶ್ರೀನಿವಾಸ, ಎಂ.ಪಿ. ಲತಾ ಮಲ್ಲಿಕಾರ್ಜುನ, ಮಾಜಿ ಸಚಿವರಾದ ಆಂಜನೇಯ, ರಾಘವೇಂದ್ರ ಹಿಟ್ನಾಳ್, ಪಿ.ಟಿ. ಪರಮೇಶ್ವರ್ ನಾಯ್ಕ್, ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣಾ ತುಕಾರಾಂ, ಡಿ.ಕೆ. ಅಮರೇಶ್ವರ ಶಾಸ್ತ್ರೀ, ಗಂಗಾಧರಗೌಡ, ಗಂಗಣ್ಣ, ಸದಾನಂದ, ಡಿ. ವಿನಾಯಕ, ಎನ್. ವಿನಯ, ಎಸ್. ತಮ್ಮನಗೌಡ, ಗೋಡೆರ್ರಿಸ್ವಾಮಿ, ಎಸ್. ಎರ್ರಿಸ್ವಾಮಿ, ಚಲವಾದಿ ಹನುಮಂತ, ಕೆ. ಅಮರೇಶ, ಬಿ. ಮುದಿಯಪ್ಪ, ಈ. ನಾಗಪ್ಪಇದ್ದರು.

ಏಳುಬೆಂಚಿ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಸಂಡೂರು ಉಪ ಚುನಾವಣೆ ಪ್ರಚಾರ ಸಭೆಯಲ್ಲಿ ಸಚಿವ ಶಿವರಾಜ ತಂಗಡಗಿ ಮಾತನಾಡಿದರು.