ಬಿಕೋ ಎನ್ನುತ್ತಿರುವ ಜನಾರ್ದನ ರೆಡ್ಡಿ ನಿವಾಸ

| Published : May 07 2025, 12:48 AM IST

ಸಾರಾಂಶ

ಆತ್ಮೀಯರು ಹಾಗೂ ಕುಟುಂಬ ಸದಸ್ಯರು ನಿತ್ಯ ನೂರಾರು ಜನ ಬಂದು ಹೋಗುತ್ತಿದ್ದರು. ಇದರಿಂದ ರೆಡ್ಡಿ ನಿವಾಸ ನಿತ್ಯ ಜನ ಜಂಗುಳಿಯಿಂದ ಕೂಡಿರುತ್ತಿತ್ತು. ಕೋರ್ಟ್ ತೀರ್ಪು ಹಿನ್ನೆಲೆ ರೆಡ್ಡಿ ಕುಟುಂಬ ಸದಸ್ಯರು ಬೆಂಗಳೂರಿನ ನಿವಾಸಕ್ಕೆ ತೆರಳಿದರು.

ಬಳ್ಳಾರಿ: ಜನಾರ್ದನ ರೆಡ್ಡಿಗೆ ಜೈಲು ಶಿಕ್ಷೆ ಪ್ರಕಟಗೊಳ್ಳುತ್ತಿದ್ದಂತೆಯೇ ಇಲ್ಲಿನ ಹವಾಂಭಾವಿ ಪ್ರದೇಶದಲ್ಲಿರುವ ರೆಡ್ಡಿ ನಿವಾಸ ಭಣಗುಟ್ಟಲಾರಂಭಿಸಿತು. ಬಳ್ಳಾರಿಗೆ ಬರಲು ಸುಪ್ರೀಂಕೋರ್ಟ್ ಅನುಮತಿ ನೀಡಿದ ಬಳಿಕ ಜನಾರ್ದನ ರೆಡ್ಡಿ ಹೆಚ್ಚಾಗಿ ಬಳ್ಳಾರಿ ನಿವಾಸದಲ್ಲಿಯೇ ಇರುತ್ತಿದ್ದರು. ಆತ್ಮೀಯರು ಹಾಗೂ ಕುಟುಂಬ ಸದಸ್ಯರು ನಿತ್ಯ ನೂರಾರು ಜನ ಬಂದು ಹೋಗುತ್ತಿದ್ದರು. ಇದರಿಂದ ರೆಡ್ಡಿ ನಿವಾಸ ನಿತ್ಯ ಜನ ಜಂಗುಳಿಯಿಂದ ಕೂಡಿರುತ್ತಿತ್ತು. ಕೋರ್ಟ್ ತೀರ್ಪು ಹಿನ್ನೆಲೆ ರೆಡ್ಡಿ ಕುಟುಂಬ ಸದಸ್ಯರು ಬೆಂಗಳೂರಿನ ನಿವಾಸಕ್ಕೆ ತೆರಳಿದರು. ಹೀಗಾಗಿ ರೆಡ್ಡಿ ನಿವಾಸ ಬಿಕೋ ಎನ್ನುತ್ತಿತ್ತು.