ಸಂಸ್ಕಾರಯುತ ವ್ಯಕ್ತಿತ್ವ ರೂಪಿಸುತ್ತಿರುವ ಜನತಾ ಶಿಕ್ಷಣ ಸಂಸ್ಥೆ: ಅಕ್ಕಿವಳ್ಳಿ

| Published : Jan 14 2024, 01:34 AM IST

ಸಂಸ್ಕಾರಯುತ ವ್ಯಕ್ತಿತ್ವ ರೂಪಿಸುತ್ತಿರುವ ಜನತಾ ಶಿಕ್ಷಣ ಸಂಸ್ಥೆ: ಅಕ್ಕಿವಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಹಾನಗಲ್ಲಿನ ಜನತಾ ಬಾಲಕಿಯರ ಪ್ರೌಢಶಾಲೆಯಲ್ಲಿ ನಡೆದ ಪ್ರತಿಭಾ ಪುರಸ್ಕಾರ ಹಾಗೂ ವಾರ್ಷಿಕೋತ್ಸದಲ್ಲಿ ಸಂಸ್ಥೆಯ ಅಧ್ಯಕ್ಷ ಬಿ.ಎಸ್. ಅಕ್ಕಿವಳ್ಳಿ ಅವರು ಸಂಸ್ಥೆಯ ಬೆಳವಣಿಗೆ, ಹಿನ್ನೋಟದ ಮೆಲಕು ಹಾಕಿದರು.

ಹಾನಗಲ್ಲ: ಜನತಾ ಶಿಕ್ಷಣ ಸೌಹಾರ್ದ ಸಂಘದ ಶಿಕ್ಷಣ ಸಂಸ್ಥೆಗಳು ಸುದೀರ್ಘ ಕಾಲದಿಂದ ಉತ್ತಮ ಶಿಕ್ಷಣ ನೀಡುತ್ತ ಬಂದಿದೆ ಎಂದು ಸಂಸ್ಥೆಯ ಅಧ್ಯಕ್ಷ ಬಿ.ಎಸ್. ಅಕ್ಕಿವಳ್ಳಿ ಹೇಳಿದರು.

ಇಲ್ಲಿನ ಜನತಾ ಬಾಲಕಿಯರ ಪ್ರೌಢಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ವಾರ್ಷಿಕೋತ್ಸದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಬಾಲಕಿಯರ ಶಿಕ್ಷಣಕ್ಕೆ ವಿಶೇಷ ಗಮನ ಹರಿಸಿ, ೧೯೬೨ರಲ್ಲಿ ಜನತಾ ಬಾಲಿಕೆಯರ ಪ್ರೌಢಶಾಲೆಯನ್ನು ಪ್ರಾರಂಭಿಸಿದೆ. ಅಂದಿನಿಂದ ಉತ್ತಮ ಗುಣಮಟ್ಟದ ಶಿಕ್ಷಣದೊಂದಿಗೆ, ಸಂಸ್ಕಾರಯುತ ವ್ಯಕ್ತಿತ್ವ ರೂಪಿಸುತ್ತ ಬಂದಿದೆ ಎಂದು ಹೇಳಿದರು.

ಶಾಲೆಯ ಪರಿಣತ ಅನುಭವಿ ಶಿಕ್ಷಕರ ಪ್ರಯತ್ನ ಉತ್ತಮ ಫಲಿತಾಂಶ ನೀಡಲು ಕಾರಣವಾಗಿದೆ. ಇಂದು ಸ್ಪರ್ಧಾತ್ಮಕ ಯುಗದಲ್ಲಿ ನಿರಂತರ ಶ್ರಮಪಟ್ಟು ಸಿದ್ಧರಾಗುವವರು ಮಾತ್ರ ಯಶಸ್ಸನ್ನು ಗಳಿಸಲು ಸಾಧ್ಯ ಎಂದರು.ಉಪಾಧ್ಯಕ್ಷ ಪಿ.ವೈ. ಗುಡಗುಡಿ ಬಹುಮಾನ ವಿತರಿಸಿ ಮಾತನಾಡಿ, ಇಷ್ಟಪಟ್ಟು ಮಾಡುವ ಕಾರ‍್ಯದಿಂದ ಮಾತ್ರ ನಿರೀಕ್ಷಿತ ಫಲಿತಾಂಶ ಸಿಗುವುದು. ಗುರಿ ಗುರುವಿನ ಬಲ ಯಶಸ್ಸಿನ ಮೆಟ್ಟಿಲುಗಳು. ಮಹಿಳೆಯ ಮೃದು ಮನಸ್ಸು ಅವರು ಸ್ಪರ್ಧಾತ್ಮಕ ಯುಗದಲ್ಲಿ ಮೇಲುಗೈ ಸಾಧಿಸಲು ಉಪಯೋಗಿಕಾರಿಯಾಗಿದೆ. ೧೦ನೇ ತರಗತಿಯ ವಿದ್ಯಾರ್ಥಿನಿಯರು ಆರೋಗ್ಯ ಕಾಳಜಿಯೊಂದಿಗೆ ಓದಿನ ಹಾದಿಯನ್ನು ರೂಪಿಸಿಕೊಳ್ಳಬೇಕು. ನಕಲು ರಹಿತ ಮತ್ತು ನಿರ್ಭೀತಿಯಿಂದ ಪರೀಕ್ಷೆಗಳು ನಡೆಯಬೇಕಾದುದು ಇಂದಿನ ದಿನಗಳಲ್ಲಿ ಅಗತ್ಯವಾಗಿದೆ. ಓದಿಗೆ ಧೈರ್ಯ ಅವಶ್ಯಕ. ಓದಿನೊಂದಿಗೆ ಪೂರಕ ಚಟುವಟಿಕೆ ಅಗತ್ಯ. ಮಾನಸಿಕವಾಗಿ, ದೈಹಿಕವಾಗಿ ಬೆಳೆಯುವ ವಿದ್ಯಾರ್ಥಿಗಳು ಸಂಸ್ಕಾರ ರೂಢಿಸಿಕೊಳ್ಳುವುದು ಅಗತ್ಯವಾಗಿದೆ ಎಂದರು. ಸಂಸ್ಥೆಯ ನಿರ್ದೇಶಕಿ ರೇಖಾ ಕಲ್ಯಾಣಕುಮಾರ ಶೆಟ್ಟರ ಅವರು ಸಂಸ್ಕಾರ, ಇಚ್ಛಾಶಕ್ತಿ, ಕ್ರಿಯಾಶಕ್ತಿ ವಿದ್ಯಾರ್ಥಿಗಳಿಗೆ ಅತಿ ಅವಶ್ಯಕವಾಗಿದೆ. ಅರ್ಜುನನ ನಿರ್ದಿಷ್ಟ ಗುರಿಯಂತೆ ವಿದ್ಯಾರ್ಥಿಗಳಿಗೆ ನಿರ್ದಿಷ್ಟ ಗುರಿ ಇರಬೇಕು. ತಂದೆ ತಾಯಿ ಕಷ್ಟಪಟ್ಟು ಬೆಳೆಸಿದ್ದು ನೀವು ಒಳ್ಳೆಯ ಸುಸಂಸ್ಕೃತ ವ್ಯಕ್ತಿಗಳಾಗಲೆಂದು. ಅದರ ಅರಿವು ಸದಾ ಇರಬೇಕು. ಸಾಧನೆ ಗುರುತಿಸಿ ನಮ್ಮನ್ನು ಸಂತೋಷಗೊಳಿಸಬೇಕು ಎಂದರು.ಕಾರ‍್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಲೆಯ ಹಳೆಯ ವಿದ್ಯಾರ್ಥಿನಿಯರ ಸಂಘದ ಅಧ್ಯಕ್ಷೆ ಶಿವಗಂಗಾ, ಪಟ್ಟಣದ ಈ ಶಾಲೆಯಲ್ಲಿ ಉತ್ತಮ ಶಿಕ್ಷಕರಿದ್ದಾರೆ. ಅವರ ನಿರಂತರ ಒಡನಾಟ ಹಾಗೂ ಮಾರ್ಗದರ್ಶನ ನಿಮ್ಮ ಯಶಸ್ಸಿಗೆ ಅನುಕೂಲಕರವಾಗಲಿದೆ ಎಂದರು. ನಿರ್ದೇಶಕರಾದ ಅಶೋಕ ಹಂಗರಗಿ, ಹನುಮಂತಪ್ಪ ಮಲಗುಂದ, ಕಾರ್ಯದರ್ಶಿ ಮನೋಹರ ಬಳಿಗಾರ, ಶಿಕ್ಷಕರಾದ ನಿರಂಜನ ಗುಡಿ, ರಾಕೇಶ ಜಿಗಳಿ, ಪ್ರಕಾಶ ಚವ್ಹಾಣ, ರೇಣುಕಾ ಕೆ. ಭಾಗವಹಿಸಿದ್ದರು.ಶಾಲೆಯ ಶಿಕ್ಷಕ ಶಿವಾನಂದ ಗಿರಿಯಣ್ಣನವರ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಮಹಾಲಕ್ಷ್ಮೀ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕರಾದ ರೂಪಶ್ರೀ ಕೆ.ಕೆ., ಗೌರಿ ಕೊಂಡೋಜಿ, ಹರೀಶ ಹಕ್ಕಲವರ ಬಹುಮಾನ ವಿತರಣಾ ಕಾರ‍್ಯಕ್ರಮ ನಿರ್ವಹಿಸಿದರು. ಪ್ರದೀಪ ಪೂಜಾರ ವಂದಿಸಿದರು. ವಿದ್ಯಾರ್ಥಿನಿಯರಾದ ಸಂಜನಾ ಬನ್ನೂರ, ತ್ರಿಶಾ ಮಲ್ಲಾಡದ ಕಾರ‍್ಯಕ್ರಮ ನಿರೂಪಿಸಿದರು.