ಭಾರತೀಯ ಸಂಸ್ಕೃತಿ ಪರಂಪರೆ ಹಾಗೂ ಧಾರ್ಮಿಕವಾಗಿ ಶ್ರೀಕೃಷ್ಣನಿಗೆ ವಿಶಿಷ್ಠ ಸ್ಥಾನವಿದೆ ಎಂದು ತಹಸೀಲ್ದಾರ್ ಮಂಜುನಾಥ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕೊರಟಗೆರೆ ಭಾರತೀಯ ಸಂಸ್ಕೃತಿ ಪರಂಪರೆ ಹಾಗೂ ಧಾರ್ಮಿಕವಾಗಿ ಶ್ರೀಕೃಷ್ಣನಿಗೆ ವಿಶಿಷ್ಠ ಸ್ಥಾನವಿದೆ ಎಂದು ತಹಸೀಲ್ದಾರ್ ಮಂಜುನಾಥ್ ತಿಳಿಸಿದರು.

ಪಟ್ಟಣದ ತಾಲೂಕು ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ಯಾದವ ಸಂಘದ ವತಿಯಿಂದ ಶ್ರೀ ಕೃಷ್ಣನ ಭಾವಚಿತ್ರಕ್ಕೆ ಪುಪ್ಪ ನಮನ ಮಾಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದುಷ್ಟಶಕ್ತಿಗಳ ಸಂಹಾರ, ಧರ್ಮದ ರಕ್ಷಣೆ ಹಾಗೂ ಮಾನವಕುಲಕ್ಕೆ ಸತ್ಯದ ಮಾರ್ಗವನ್ನು ತೋರಿಸುವ ಉದ್ದೇಶದಿಂದ ಶ್ರೀಕೃಷ್ಣ ಅವತರಿಸಿದನೆಂಬ ನಂಬಿಕೆ. ಇದು ಶ್ರೀಕೃಷ್ಣ ಜನ್ಮಾಷ್ಟಮಿ ಕೇವಲ ಧಾರ್ಮಿಕ ಆಚರಣೆಯಲ್ಲ ಅದು ಭಾರತೀಯ ಜೀವನ ಮೌಲ್ಯಗಳು ಪ್ರೀತಿ, ಸ್ನೇಹ, ಕರ್ತವ್ಯ, ಧರ್ಮ ಮತ್ತು ಮಾನವೀಯತೆಯನ್ನು ನೆನಪಿಸುವ ಮಹತ್ವದ ಹಬ್ಬವಾಗಿದ್ದು, ಅನ್ಯಾಯ, ಅಧರ್ಮದ ವಿರುದ್ಧ ಸತ್ಯ ಹಾಗೂ ಧರ್ಮದ ಹಾದಿಯನ್ನು ತೋರಿದ ಶ್ರೀ ಕೃಷ್ಣನ ಆದರ್ಶ ಹಾಗೂ ಸಂದೇಶಗಳು ಮಾನವರ ಬದುಕಿನಲ್ಲಿ ಆಳವಿಡಿಸಿಕೊಂಡಲಿ ಸಖ, ಶಾಂತಿ ನೆಮ್ಮದಿ ಕಾಣುವ ದಾರಿದೀಪವಾಗಲಿದೆ ಎಂದು ತಿಳಿಸಿದರು.

ತಾಲೂಕು ಯಾದವ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಕೆ.ಮಹಾಲಿಂಗಪ್ಪ ಮಾತನಾಡಿ, ಶ್ರೀಕೃಷ್ಣನ ಜೀವನವು ನಮಗೆ ಒಂದು ಪ್ರಮುಖ ಸತ್ಯವನ್ನು ನೆನಪಿಸುತ್ತದೆ, ಧರ್ಮದ ಹಾದಿ ಯಾವಾಗಲು ಸುಲಭವಲ್ಲ, ಆದರೆ ಅದು ಶಾಶ್ವತವಾದದು. ಅನ್ಯಾಯ, ಅಧರ್ಮ ಮತ್ತು ದೌರ್ಜನ್ಯ ಎಷ್ಟೇ ಬಲಿಷ್ಠವಾಗಿದ್ದರೂ ಸತ್ಯದ ಶಕ್ತಿ ಅಂತಿಮವಾಗಿ ಗೆಲ್ಲುತ್ತದೆ ಎಂಬ ವಿಶ್ವಾಸವನ್ನು ಜನ್ಮಾಷ್ಟಮಿ ಸೂಚಿಸುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬೆಸ್ಕಾಂ ಪುಟ್ಟಣ್ಣ, ತಾಲೂಕು ಕ.ಸಾ.ಪ ಅಧ್ಯಕ್ಷ ಕೆ.ಎಸ್. ಈರಣ್ಣ, ದೇವರಾಜು, ಆನಂದ್, ನವೀನ್, ಪತ್ರಕರ್ತ ಮುತ್ತರಾಜು, ಕಾಂತರಾಜು, ನರಸಿಂಹಮೂರ್ತಿ, ನಾಗರಾಜು, ತಾಲೂಕು ವೈದ್ಯಾಧಿಕಾರಿ ಡಾ.ಜ್ಯೋಸ್ನಾ ರೆಡ್ಡಿ, ಸಮಾಜ ಕಲ್ಯಾಣಾಧಿಕಾರಿ ಯಮುನಾ, ಕಂದಾಯ ಇಲಾಖೆಯ ಬಸವರಾಜು, ನಕುಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.