ಸಾರಾಂಶ
ವಿಶೇಷವಾಗಿ ಉತ್ತರ ಕನ್ನಡ ಜಿಲ್ಲೆಗೆ ಇದರಿಂದ ರಿಯಾಯತಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಕಾರವಾರ: ಬಡವರಿಗೆ ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ಉಚಿತವಾಗಿ ಎಲ್ಲ ವೈದ್ಯಕೀಯ ಸೌಲಭ್ಯಗಳನ್ನು ನೀಡುವಂತೆ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಿಗೆ ಮನವಿ ರವಾನಿಸಿದ್ದಾರೆ.
ಕ್ರಿಮ್ಸ್ ನಲ್ಲಿ ಈಚೆಗೆ ಬಿಪಿಎಲ್ ಕಾರ್ಡನವರಿಗೂ ಒಪಿಡಿಗಳಲ್ಲಿ ಎಲ್ಲ ರೀತಿಯ ತಪಾಸಣೆ ಹಾಗೂ ಪರೀಕ್ಷೆಗೆ ಶೇ.50ರಷ್ಟು ಶುಲ್ಕ ಪಾವತಿಸಿಕೊಳ್ಳುತ್ತಿದ್ದು, ಇದರಿಂದ ಬಡವರಿಗೆ ತೊಂದರೆ ಆಗುತ್ತಿದೆ. ವಿಶೇಷವಾಗಿ ಉತ್ತರ ಕನ್ನಡ ಜಿಲ್ಲೆಗೆ ಇದರಿಂದ ರಿಯಾಯತಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.ಜನರ ಅನುಕೂಲಕ್ಕಾಗಿ ಸರ್ಕಾರ ಈಗಾಗಲೇ ಗ್ಯಾರಂಟಿ ಯೋಜನೆಗಳನ್ನು ನೀಡಿದೆ. ಆದರೆ ಇವೆಲ್ಲಕ್ಕಿಂತ ಮಿಗಿಲಾಗಿ ಉನ್ನತ ಶಿಕ್ಷಣ, ಉದ್ಯೋಗ ಹಾಗೂ ಆರೋಗ್ಯ ಭಾಗ್ಯ ಕಲ್ಪಿಸಿದರೆ ಇನ್ನಷ್ಟು ಪುಣ್ಯ ಈ ಸರ್ಕಾರಕ್ಕೆ ಬರಲಿದೆ. ಬಿಪಿಎಲ್ ಪಡಿತರ ಹೊಂದಿದವರಿಗೆ ಒಪಿಡಿಯಲ್ಲಿಯೂ ವಿವಿಧ ಆರೋಗ್ಯ ಪರೀಕ್ಷೆಗಳಿಗೆ ಉಚಿತವಾಗಿ ಎಲ್ಲ ಸವಲತ್ತುಗಳನ್ನು ಉಚಿತವಾಗಿ ನೀಡಬೇಕಾಗಿ ಅವರು ಮನವಿ ಮಾಡಿದ್ದಾರೆ.ವೇದಿಕೆಯ ಕಾರ್ಯದರ್ಶಿ ರಾಮಾ ನಾಯ್ಕ, ಉಪಾಧ್ಯಕ್ಷ ಬಾಬು ಶೇಖ್, ಸದಸ್ಯರಾದ ಸೂರಜ್ ಕುರುಮಕರ್, ಚಂದ್ರಕಾಂತ ಎನ್.ನಾಯ್ಕ, ಫಕೀರಪ್ಪಾ ಭಂಡಾರಿ, ಖೈರುನ್ನೀಸಾ ಶೇಖ್, ದೇವಿದಾಸ ವಿ. ನಾಯ್ಕ, ಸಂಘಟನಾ ಕಾರ್ಯದರ್ಶಿ ನಿತ್ಯಾನಂದ ನಾಯ್ಕ ಇದ್ದರು.