ಸಾರಾಂಶ
ಗುಡೇನಕಟ್ಟಿ- ಮುಳ್ಳೋಳ್ಳಿ, ಚಾಕಲಬ್ಬಿ- ಭರದ್ವಾಡ, ಚಾಕಲಬ್ಬಿ-ಸಂಶಿ ರಸ್ತೆ ಸರಿಪಡಿಸಲು ಲೋಕೋಪಯೋಗಿ ಸಚಿವರು ಮನವಿ ಸಲ್ಲಿಸಿದ್ದು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಕುಂದಗೋಳ:
ತಾಲೂಕಿನ ಸಂಶಿ-ಅತ್ತಿಗೇರಿ ಮಾರ್ಗ ಮಧ್ಯದಲ್ಲಿ ಕೊಚ್ಚಿಹೊದ ರಸ್ತೆಯನ್ನು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಕಾಂಗ್ರೆಸ್ ಮುಖಂಡರು ವೀಕ್ಷಿಸಿದರು.ಈ ವೇಳೆ ಸಚಿವರು, ಸದ್ಯ ಕಾಮಗಾರಿ ಪ್ರಾರಂಭಿಸಲು ₹1 ಕೋಟಿ ಅನುದಾನ ನೀಡಲಾಗಿದೆ. ಇನ್ನುಳಿದ ₹ 1 ಕೋಟಿ ಅನುದಾನ ಮಂಜೂರು ಮಾಡಲು ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದರು. ನಂತರ ಸಚಿವರು ಪ್ರವಾಸಿ ಮಂದಿರಕ್ಕೆ ಆಗಮಿಸಿದ ವೇಳೆ ಗ್ಯಾರಂಟಿ ಯೋಜನೆಗಳ ತಾಲೂಕು ಸಮಿತಿ ಅಧ್ಯಕ್ಷ ಶಿವಾನಂದ ಬೆಂತೂರ ಮಾತನಾಡಿ, ಗುಡೇನಕಟ್ಟಿ- ಮುಳ್ಳೋಳ್ಳಿ, ಚಾಕಲಬ್ಬಿ- ಭರದ್ವಾಡ, ಚಾಕಲಬ್ಬಿ-ಸಂಶಿ ರಸ್ತೆ ಸರಿಪಡಿಸಲು ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಸಚಿವರು, ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ಭರವಸೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ ಪಾಟೀಲ, ಕಾರ್ಯಾಧ್ಯಕ್ಷ ಜಗದೀಶ ಉಪ್ಪಿನ, ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದ ಜಿಲ್ಲಾ ಅಧ್ಯಕ್ಷ ರಮೇಶ ಕೊಪ್ಪದ, ಮುಖಂಡರಾದ ನಿಂಗಪ್ಪ ಹಳ್ಳಿಕೇರಿ, ಬಸವರಾಜ ನಾಯ್ಕರ, ಯಲ್ಲಪ್ಪಗೌಡ ಪಾಟೀಲ, ಲೋಕೇಶ್ ಸರಾವರಿ ಬಸವರಾಜ ಹೊಸಮನಿ ಸೇರಿದಂತೆ ಸ್ಥಳೀಯರಿದ್ದರು.