ಸಾರಾಂಶ
ದ್ವಾಪರ ಹಾಡಿನ ಮೂಲಕ ಖ್ಯಾತಿ ಪಡೆದ ಗಾಯಕ ಜಸ್ಕರನ್ ಸಿಂಗ್ ಹೇಳಿದ್ದಾರೆ. ತೊಕ್ಕೊಟ್ಟು ಕಲ್ಲಾಪುವಿನ ಬುರ್ದುಗೋಳಿಯ ಗುಳಿಗ-ಕೊರಗಜ್ಜ ಉದ್ಭವ ಶಿಲೆಯ ಆದಿಸ್ಥಳಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಉಳ್ಳಾಲ
ಮಲಯಾಳಂ, ತಮಿಳು, ಕನ್ನಡ, ಪಂಜಾಬ್ ಚಲನಚಿತ್ರಗಳ ತಂಡದಿಂದ ಹಾಡು ಹಾಡಲು ಸಾಲು ಸಾಲಾಗಿ ಆಫರ್‌ಗಳು ಬಂದಿವೆ. ಪ್ರಮುಖವಾಗಿ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಜೊತೆಗೆ ಮತ್ತೊಂದು ಹಾಡು ರೆಕಾರ್ಡಿಂಗ್ ಪೂರ್ಣಗೊಂಡಿದೆ. ಎಲ್ಲರ ಆಶೀರ್ವಾದವಿದ್ದಲ್ಲಿ ಮತ್ತೊಮ್ಮೆ ಜನಮನ ಗೆಲ್ಲುವ ವಿಶ್ವಾಸ ನನ್ನಲ್ಲಿದೆ ಎಂದು ದ್ವಾಪರ ಹಾಡಿನ ಮೂಲಕ ಖ್ಯಾತಿ ಪಡೆದ ಗಾಯಕ ಜಸ್ಕರನ್ ಸಿಂಗ್ ಹೇಳಿದ್ದಾರೆ. ತೊಕ್ಕೊಟ್ಟು ಕಲ್ಲಾಪುವಿನ ಬುರ್ದುಗೋಳಿಯ ಗುಳಿಗ-ಕೊರಗಜ್ಜ ಉದ್ಭವ ಶಿಲೆಯ ಆದಿಸ್ಥಳಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.ಮಂಗಳೂರಿನ ಕದ್ರಿ ಮತ್ತು ಬುರ್ದುಗೋಳಿಯ ಗುಳಿಗ-ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿದ ಬಳಿಕ ವಿಭಿನ್ನವಾದ ದೈವಿಕ ಭಾವನೆ ಜಾಗೃತಗೊಂಡಿದೆ ಎಂದು ಹೇಳಿದರು.
ಬುರ್ದುಗೋಳಿ ಕ್ಷೇತ್ರದ ವತಿಯಿಂದ ಜಸ್ಕರನ್ ಸಿಂಗ್ ಅವರನ್ನು ಗೌರವಿಸಲಾಯಿತು. ಝೀ ಕನ್ನಡ ಸರೆಗಮಪ ಖ್ಯಾತಿಯ ಹಾಡುಗಾರ ಅಮಿಷ್ ಕುಮಾರ್ ಕೆ., ಕದ್ರಿ ಈವೆಂಟ್ಸ್ ಪ್ರಮುಖರಾದ ಜಗದೀಶ್ ಕದ್ರಿ ಜತೆಯಲ್ಲಿದ್ದರು.ಬುರ್ದುಗೋಳಿ ಗುಳಿಗ-ಕೊರಗಜ್ಜ ಉದ್ಭವ ಶಿಲೆಯ ಆದಿಸ್ಥಳ ಕ್ಷೇತ್ರದ ಆಡಳಿತ ಕಮಿಟಿಯ ಗೌರವ ಸಲಹೆಗಾರರಾದ ಚಂದ್ರಹಾಸ್ ಪಂಡಿತ್ ಹೌಸ್, ಕೋಶಾಧಿಕಾರಿ ನವೀನ್ ಕಾಯಂಗಳ, ಕಾರ್ಯದರ್ಶಿ ಜಯಶ್ರೀ ಕೊಟ್ಟಾರಿ, ಸದಸ್ಯರಾದ ಪ್ರಶಾಂತ್ ಕಾಯಂಗಲ, ಪುರುಷೋತ್ತಮ ಮೇಲಾಂಟ, ಪುರಷೋತ್ತಮ ಕಲ್ಲಾಪು, ಸಂಜಯ್, ಅಮಿತ ಕೊಟ್ಟಾರಿ, ವನಿತ ಗಂಡಿ, ದೀಕ್ಷ, ಹರೀಶ್ ಕೊಟ್ಟಾರಿ ಮತ್ತಿತರರಿದ್ದರು.