ಜಾತ್ರಾ ಮಹೋತ್ಸವ ಜಾಗೃತಿ ರಥಕ್ಕೆ ಪಟ್ಟಣದಲ್ಲಿ ಸ್ವಾಗತ

| Published : Jan 09 2025, 12:47 AM IST

ಸಾರಾಂಶ

ಜ.26ರಿಂದ 31ರವರೆಗೆ ನಡೆಯುವ ಸುತ್ತೂರು ಜಾತ್ರೆಯಲ್ಲಿ ಸಾಮೂಹಿಕ ವಿವಾಹ, ಭಜನಾ ಮೇಳ, ವಸ್ತುಪ್ರದರ್ಶನ, ಕೃಷಿ ಮೇಳ, ದನಗಳ ಜಾತ್ರೆ, ಸಾಂಸ್ಕೃತಿಕ ಮೇಳ, ದೇಸಿ ಆಟಗಳು, ದೋಣಿ ವಿಹಾರ, ಚಿತ್ರಕಲೆ, ರಂಗೋಲಿ, ಗಾಳಿಪಟ, ಸೋಬಾನೆ ಪದ, ಛಾಯಾಚಿತ್ರ ಸ್ಪರ್ಧೆ ನಡೆಯುತ್ತವೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಮೈಸೂರಿನ ಸುತ್ತೂರು ಕ್ಷೇತ್ರದ ಶ್ರೀಶಿವರಾತ್ರೇಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಜಾಗೃತಿ ರಥ ಪಟ್ಟಣಕ್ಕೆ ಆಗಮಿಸಿದಾಗ ಸ್ವಾಗತ ಕೋರಲಾಯಿತು.

ಪಟ್ಟಣದ ಬಸ್ ನಿಲ್ದಾಣದ ವೃತ್ತದ ಪುರಸಭೆ ಕಚೇರಿಗೆ ಆಮಿಸಿದ ರಥವನ್ನು ತಾಲೂಕು ಆಡಳಿತ ಅಧಿಕಾರಿಗಳು, ಪುರಸಭಾ ಸದಸ್ಯರು ಹಾಗೂ ವೀರಶೈವ ಮುಖಂಡರು ಬರ ಮಾಡಿಕೊಂಡು ವಿಶೇಷ ಪೂಜೆ ಸಲ್ಲಿಸಲಾಯಿತು.

ಅಖಿಲ ಕರ್ನಾಟಕ ವೀರಶೈವ ತಾಲೂಕು ಅಧ್ಯಕ್ಷ ನಾಗರಾಜು ಮಾತನಾಡಿ, ಜ.26ರಿಂದ 31ರವರೆಗೆ ನಡೆಯುವ ಸುತ್ತೂರು ಜಾತ್ರೆಯಲ್ಲಿ ಸಾಮೂಹಿಕ ವಿವಾಹ, ಭಜನಾ ಮೇಳ, ವಸ್ತುಪ್ರದರ್ಶನ, ಕೃಷಿ ಮೇಳ, ದನಗಳ ಜಾತ್ರೆ, ಸಾಂಸ್ಕೃತಿಕ ಮೇಳ, ದೇಸಿ ಆಟಗಳು, ದೋಣಿ ವಿಹಾರ, ಚಿತ್ರಕಲೆ, ರಂಗೋಲಿ, ಗಾಳಿಪಟ, ಸೋಬಾನೆ ಪದ, ಛಾಯಾಚಿತ್ರ ಸ್ಪರ್ಧೆ ನಡೆಯುತ್ತವೆ ಎಂದರು.

ತಾಲೂಕಿನಿಂದ ಹೆಚ್ಚಿನ ಭಕ್ತರು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಕೃಷಿ ಮೇಳಗಳಲ್ಲಿ ಹಾಗೂ ರಥೋತ್ಸವ ತೆಪ್ಪೋತ್ಸವದಲ್ಲಿ ಭಾಗವಹಿಸಬೇಕು ಎಂದರು.

ಈ ವೇಳೆ ಪುರಸಭಾ ಸದಸ್ಯ ಎಂ.ಎಲ್.ದಿನೇಶ್, ವಸಂತಕುಮಾರಿ, ಉಪ ತಹಸೀಲ್ದಾರ್ ಚೈತ್ರ, ಮುಖ್ಯಾಧಿಕಾರಿ ರಾಜಣ್ಣ, ಗ್ಯಾರೆಂಟಿ ಯೋಜನೆ ಅಧಿಕಾರಿ ತ್ರಿವೇಣಿ, ಜಗಜ್ಯೋತಿ ಬಸವೇಶ್ವರ ಸಂಘದ ಅಧ್ಯಕ್ಷ ಜಗದೀಶ್, ಉಪಾಧ್ಯಕ್ಷರಾದ ಮಲ್ಲು ಸ್ವಾಮಿ, ಶಿವಕುಮಾರ್, ಕಾರ್ಯದರ್ಶಿ ಪ್ರದೀಪ್ ಕುಮಾರ್, ಲೋಕೇಶ್, ತಾಲೂಕು ಪತ್ರಕರ್ತ ಸಂಘದ ಅಧ್ಯಕ್ಷ ಎಸ್. ಕುಮಾರ್, ದೀಪಕ್‌ಕುಮಾರ್, ಪರಶಿವಮೂರ್ತಿ, ಫೋಟೋ ನಂಜುಂಡ, ನಿಂಗಪ್ಪ, ವಿಶ್ವನಾಥ ಮಾಸ್ಟರ್, ಶ್ರೀಕಂಠ, ಚೆನ್ನಪ್ಪ, ಮಹೇಶಣ್ಣ, ನಾರಾಯಣ್ ಸೇರಿದಂತೆ ಇತರರು ಇದ್ದರು.

ಸುತ್ತೂರು ಪಾರಂಪರಿಕ ಉತ್ಸವ ಇನ್ನಷ್ಟು ಮೆರುಗು ಪಡೆಯಲಿ: ರವಿಕುಮಾರ್

ಮಂಡ್ಯ:

ಕಪಿಲಾ ನದಿ ತೀರದ ಸುತ್ತೂರು ಶ್ರೀ ಕ್ಷೇತ್ರದಲ್ಲಿ ಜ.26 ರಿಂದ ನಡೆಯಲಿರುವ ಜಾತ್ರಾ ಮಹೋತ್ಸವದ ಅಂಗವಾಗಿ ನಗರಕ್ಕೆ ಆಗಮಿಸಿದ ಪ್ರಚಾರ ರಥವನ್ನು ಶಾಸಕ ಪಿ.ರವಿಕುಮಾರ್ , ಜಿಲ್ಲಾಧಿಕಾರಿ ಡಾ.ಕುಮಾರ ಹಾಗೂ ನಗರದ ಜನತೆ ಅದ್ಧೂರಿಯಾಗಿ ಸ್ವಾಗತಿಸಿ ಪೂಜೆ ಸಲ್ಲಿಸಿದರು.

ರಥವು ಮಂಡ್ಯ ನಗರ ಸೇರಿದಂತೆ ಹಲವು ಸ್ಥಳಗಳಲ್ಲಿ ಸಂಚರಿಸಿ ಶ್ರೀರಂಗಪಟ್ಟಣಕ್ಕೆ ತೆರಳಿತು. ಶಾಸಕ ರವಿಕುಮಾರ್ ಮಾತನಾಡಿ, ಸುತ್ತೂರು ಜಾತ್ರೆ ಉತ್ಸವವು ಅದ್ಧಾರಿಯಾಗಿ ಆಚರಿಸಲಾಗುತ್ತದೆ. ಎಲ್ಲಾ ಜಾತಿ ಧರ್ಮಗಳನ್ನು ಕೂಡ ಸರಿಸಮಾನವಾಗಿ ನೋಡಿಕೊಳ್ಳುವುದು ಈ ಜಾತ್ರೆಯ ವೈಶಿಷ್ಟ್ಯ ಎಂದರು.

ಎಲ್ಲರನ್ನು ಬಹಳ ಪ್ರೀತಿಯಿಂದ ಕರೆದು ಸತ್ಕರಿಸಿ ಕಳುಹಿಸುವ ಪಾರಂಪರಿಕವಾಗಿ ನಡೆದು ಬಂದ ಉತ್ಸವವಾಗಿದೆ. ಈ ವರ್ಷ ಈ ಉತ್ಸವ ಇನ್ನಷ್ಟು ಮೆರಗು ಪಡೆಯಲಿ ಎಂದು ಹೇಳಿದರು.

ಈ ವೇಳೆ ಜಿಲ್ಲಾಧಿಕಾರಿ ಡಾ.ಕುಮಾರ, ವೀರಶೈವ ಮುಖಂಡರಾದ ಎಂ.ಬಿ. ರಾಜಶೇಖರ್, ಎಂ.ಎಸ್.ಶಿವಪ್ರಕಾಶ್, ಷಡಕ್ಷರಿ, ಮಂಜು, ಸೋಮಶೇಖರ್, ಆನಂದ್ ಸೇರಿದಂತೆ ಇತರರು ಹಾಜರಿದ್ದರು