ಕನ್ನಡ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು

| Published : Jan 19 2025, 02:20 AM IST

ಸಾರಾಂಶ

ಯಾರು ಚೆನ್ನಾಗಿ ಮಾಡುತ್ತಾರೊ ಅವರನ್ನು ಗುರುತಿಸಿ, ಸನ್ಮಾನ ಮಾಡಲಾಗುವುದು

ಕನ್ನಡಪ್ರಭ ವಾರ್ತೆ ಸರಗೂರುಇತ್ತೀಚಿನ ದಿನಗಳಲ್ಲಿ ಕನ್ನಡ ಪುಸ್ತಕ ಓದುಗರ ಸಂಖ್ಯೆ ಕ್ಷೀಣಿಸುತ್ತಿದ್ದು, ಕನ್ನಡ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಕನ್ನಡ ಪುಸ್ತಕಪ್ರಾಧಿಕಾರದ ಅಧ್ಯಕ್ಷ ಮಾನಸ ಹೇಳಿದರು.ಪಟ್ಟಣದ ಶ್ರೀ ಜಯಚಾಮರಾಜೇಂದ್ರ ಕ್ರೀಡಾಂಗಣದಲ್ಲಿ ನಡೆದ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ, ಮನೆಗೊಂದು ಗ್ರಂಥಾಲಯ ನಿರ್ಮಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಯಾರು ಚೆನ್ನಾಗಿ ಮಾಡುತ್ತಾರೊ ಅವರನ್ನು ಗುರುತಿಸಿ, ಸನ್ಮಾನ ಮಾಡಲಾಗುವುದು ಎಂದು ಹೇಳಿದರು.ಸಮ್ಮೇಳನದ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ, ಡಾ. ಚಂದ್ರಕಲಾ, ವಚನ ಕುಮಾರಸ್ವಾಮಿ, ಅಂಜುಮ್ ಪಾಶ, ಮನುಗನಹಳ್ಳಿ ಎಂ.ಪಿ. ಮಂಜು, ಮುಳ್ಳೂರು ರವಿಕುಮಾರ್, ಚಿನ್ನಣ್ಣ, ಹೆಗ್ಗುಡಿಲು ಸೋಮಣ್ಣ, ರೈತ ಸಂಘದ ತಾಲೂಕು ಅಧ್ಯಕ್ಷ ಚನ್ನನಾಯಕ, ನಿಂಗರಾಜು, ಚೆನ್ನಿಪುರ ಮಲ್ಲೇಶ್, ಗ್ರಾಮೀಣ ಮಹೇಶ್, ಸುಧೀರ್, ನಿಲುವಾಗಿಲು ಗೋಪಾಲಸ್ವಾಮಿ ಇದ್ದರು.ನಂತರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮೈಸೂರಿನ ಎಸ್ಬಿ ಮ್ಯೂಜಿಕಲ್ ಇವೆಂಟ್ಸ್ ನ ಸತೀಶ್ ಅವರಿಂದ ಜೀ ಕನ್ನಡ ವಾಹಿನಿಯ ಕಾಮಿಡಿ ಕಿಂಗ್ ಗಿಲ್ಲಿ ನಟ ಮತ್ತು ಸುಮನಾ ಅವರಿಂದ ನಗೆಹಬ್ಬ ಹಾಗೂ ಜೂನಿಯರ್ ವಿಷ್ಣುವರ್ಧನ್, ಅಂಬರೀಶ್, ರವಿಚಂದ್ರನ್ ಇವರಿಂದ ಮನರಂಜನಾ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು.