ಜನಸಾಮಾನ್ಯರು ಖಾಸಗಿ ಆಸ್ಪತ್ರೆಗಳಿಗೆ ಅಲೆಯುವುದನ್ನು ತಪ್ಪಿಸಲು, ಜಯದೇವದಂತಹ ವಿಶ್ವಪ್ರಸಿದ್ಧ ಸಂಸ್ಥೆ ಮೂಡುಬಿದಿರೆ ಕ್ಷೇತ್ರದ ಮೂಡು ಶೆಡ್ಡೆ ಗೆ ಬರುತ್ತಿರುವುದು ಈ ಭಾಗದ ಜನರಿಗೆ ಬಹುದೊಡ್ಡ ಭಾಗ್ಯವಾಗಿದೆ. ಜಯದೇವ ಆಸ್ಪತ್ರೆಯನ್ನು ಮೂಡುಬಿದಿರೆಗೆ ತರಲು ರಾಜ್ಯ ಕ್ಯಾಬಿನೆಟ್ ವಿಶೇಷ ಅನುಮೋದನೆ ನೀಡಿರುವುದು ಸ್ಥಳೀಯರು ಹಾಗೂ ನೆರೆ ಜಿಲ್ಲೆಯ ಜನರಿಗೆ ಮಹತ್ವದ ವಿಚಾರವಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದ್ದಾರೆ.
ಮೂಡುಬಿದಿರೆ : ಜನಸಾಮಾನ್ಯರು ಖಾಸಗಿ ಆಸ್ಪತ್ರೆಗಳಿಗೆ ಅಲೆಯುವುದನ್ನು ತಪ್ಪಿಸಲು, ಜಯದೇವದಂತಹ ವಿಶ್ವಪ್ರಸಿದ್ಧ ಸಂಸ್ಥೆ ಮೂಡುಬಿದಿರೆ ಕ್ಷೇತ್ರದ ಮೂಡು ಶೆಡ್ಡೆ ಗೆ ಬರುತ್ತಿರುವುದು ಈ ಭಾಗದ ಜನರಿಗೆ ಬಹುದೊಡ್ಡ ಭಾಗ್ಯವಾಗಿದೆ. ಜಯದೇವ ಆಸ್ಪತ್ರೆಯನ್ನು ಮೂಡುಬಿದಿರೆಗೆ ತರಲು ರಾಜ್ಯ ಕ್ಯಾಬಿನೆಟ್ ವಿಶೇಷ ಅನುಮೋದನೆ ನೀಡಿರುವುದು ಸ್ಥಳೀಯರು ಹಾಗೂ ನೆರೆ ಜಿಲ್ಲೆಯ ಜನರಿಗೆ ಮಹತ್ವದ ವಿಚಾರವಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದ್ದಾರೆ.
ಹೃದಯ ಆಸ್ಪತ್ರೆಯ ಜೊತೆಗೆ ಕಿದ್ವಾಯಿ ಕ್ಯಾನ್ಸರ್ ಸಂಶೋಧನಾ ಕೇಂದ್ರವೂ ಮೂಡುಬಿದಿರೆ ಕ್ಷೇತ್ರಕ್ಕೆ ಬರಲಿದೆ. ಕ್ಯಾನ್ಸರ್ ರೋಗವು ಜನರ ಜೀವನವನ್ನು ಹೇಗೆ ನಷ್ಟಕ್ಕೀಡು ಮಾಡುತ್ತದೆ ಹಾಗೂ ಸಕಾಲದಲ್ಲಿ ಚಿಕಿತ್ಸೆ ಸಿಗದೆ ನಾಲ್ಕನೇ ಹಂತಕ್ಕೆ ತಲುಪಿ ಪ್ರಾಣ ಕಳೆದುಕೊಳ್ಳುವ ಅನೇಕ ಘಟನೆಗಳು ನಮ್ಮ ಕಣ್ಣ ಮುಂದೆಯೇ ಇವೆ. ಕರಾವಳಿ ಭಾಗದ ಜನರಿಗೆ ಇಂತಹ ಪರಿಸ್ಥಿತಿ ಬಾರದಿರಲು ಹಾಗೂ ರೋಗವನ್ನು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಒದಗಿಸಲು ಕಿದ್ವಾಯಿ ಸಂಶೋಧನಾ ಕೇಂದ್ರವು ಮಹತ್ವದ ಪಾತ್ರ ವಹಿಸಲಿದೆ. ಕ್ಷೇತ್ರಕ್ಕೆ ಜಯದೇವ ಸೂಪರ್ ಸ್ಪೆಷಾಲಿಟಿ ಹೃದಯ ಆಸ್ಪತ್ರೆಯನ್ನು ತರುವ ಕುರಿತು 2023ರ ಚುನಾವಣಾ ಪ್ರಚಾರದ ವೇಳೆ ಸ್ವರಾಜ್ಯ ಮೈದಾನದಲ್ಲಿ ನೀಡಿದ್ದ ಭರವಸೆಯ ದಾಖಲೆಗಳು ಇಂದಿಗೂ ಇವೆ ಎಂದು ಮಿಥುನ್ ರೈ ತಿಳಿಸಿ, ಘೋಷಣೆ ಮಾಡಿದ ಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಅವರನ್ನು ಅಭಿನಂದಿಸಿದ್ದಾರೆ.ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಘೋಷಿಸಿರುವ ಹಿನ್ನೆಲೆಯಲ್ಲಿ ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮೂಡುಬಿದಿರೆಯ ಬಸ್ಸು ನಿಲ್ದಾಣದಲ್ಲಿ ತುಳು ಧ್ವಜ ಹಿಡಿದು ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.
ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಕುಮಾರ್, ಕಾರ್ಯದರ್ಶಿ ಪುರಂದರ ದೇವಾಡಿಗ, ಪ್ರಮುಖರಾದ ಸುರೇಶ್ ಪ್ರಭು, ಸುರೇಶ್ ಕೋಟ್ಯಾನ್, ಕೊರಗಪ್ಪ, ರಾಜೇಶ್ ಕಡಲಕೆರೆ,ಮಿತ್ತಬೈಲು ವಾಸದೇವ ನಾಯಕ್, ಇಕ್ಬಾಲ್ ಕರೀಮ್, ಪ್ರವೀಣ್ ಪೂಜಾರಿ ಇರುವೈಲು, ಅನಿಶ್ ಡಿಸೋಜ, ಜೊಸ್ಸಿ ಮಿನೇಜಸ್, ಸಂತೋಷ್ ಶೆಟ್ಟಿ, ಸತೀಶ್ ಕೋಟ್ಯಾನ್, ಪ್ರವೀಣ್ ಮೆಂಡೊನ್ಸ ,ರುಕ್ಕಯ್ಯ ಪೂಜಾರಿ, ಕ್ಲಾರಿಯೋ, ಸತೀಶ್ ಭಂಡಾರಿ ಮತ್ತಿತರರು ಇದ್ದರು.