ಸಾರಾಂಶ
ತುರುವೇಕೆರೆತಾಲೂಕಿನ ಸೊರವನಹಳ್ಳಿಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಮಬಲ ಬಂದ ಕಾರಣ ನಡೆದ ಲಾಟರಿಯಲ್ಲಿ ಜಡೆಯ ಗ್ರಾಮದ ಸದಸ್ಯೆ ಜಯಲಕ್ಷ್ಮಮ್ಮಗೆ ಅಧ್ಯಕ್ಷರಾಗಿ ಆಯ್ಕೆಯಾದರು.
ಕನ್ನಡಪ್ರಭವಾರ್ತೆ ತುರುವೇಕೆರೆ
ತಾಲೂಕಿನ ಸೊರವನಹಳ್ಳಿಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಮಬಲ ಬಂದ ಕಾರಣ ನಡೆದ ಲಾಟರಿಯಲ್ಲಿ ಜಡೆಯ ಗ್ರಾಮದ ಸದಸ್ಯೆ ಜಯಲಕ್ಷ್ಮಮ್ಮಗೆ ಅಧ್ಯಕ್ಷರಾಗಿ ಆಯ್ಕೆಯಾದರು. ಸೊರವನಹಳ್ಳಿ ಗ್ರಾಮ ಪಂಚಾಯ್ತಿಯ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜಯಲಕ್ಷ್ಮಮ್ಮ ಮತ್ತು ಗೀತಾ ಅರುಣ್ ಸ್ಪರ್ಧಾಕಾಂಕ್ಷಿಗಳಾಗಿದ್ದರು. ಒಟ್ಟು ೧೬ ಸದಸ್ಯರ ಬಲವಿರುವ ಇಲ್ಲಿ ಚುನಾವಣೆ ಅನಿವಾರ್ಯವಾಯಿತು. ತಹಸೀಲ್ದಾರ್ ಎನ್.ಎ.ಕುಂಇ ಅಹಮದ್ ರವರು ಚುನಾವಣಾ ಪ್ರಕ್ರಿಯೆ ನಡೆಸಿದರು. ಮತ ಎಣಿಸಿದಾಗ ಜಯಲಕ್ಷ್ಮಮ್ಮ ಮತ್ತು ಗೀತಾ ಅರುಣ್ ರವರಿಗೆ ತಲಾ ೮ ಮತಗಳು ಲಭಿಸಿದವು. ಅಂತಿಮವಾಗಿ ಲಾಟರಿ ಮೂಲಕ ಅಧ್ಯಕ್ಷರ ಆಯ್ಕೆ ಮಾಡಲು ನಿರ್ಧರಿಸಲಾಯಿತು. ನಂತರ ಲಾಟರಿಯಲ್ಲಿ ಜಡೆಯ ಗ್ರಾಮದ ಸದಸ್ಯೆ ಜಯಲಕ್ಷ್ಮಮ್ಮ ಅಧ್ಯಕ್ಷರಾಗಿ ಆಯ್ಕೆಯಾದರು. ನೂತನ ಅಧ್ಯಕ್ಷೆ ಜಯಲಕ್ಷ್ಮಮ್ಮ ನವರನ್ನು ಉಪಾಧ್ಯಕ್ಷ ಮಂಜುನಾಥ್, ಸದಸ್ಯರಾದ ಇಂದಿರಾ ಕೃಷ್ಣಸ್ವಾಮಿ, ಮಹಲಿಂಗಯ್ಯ, ಗೋವಿಂದಯ್ಯ, ಮಹೇಶ್, ಸಿದ್ದಗಂಗಮ್ಮ, ಮುಖಂಡರಾದ ಹೊಣಕೆರೆ ಕೃಷ್ಣಸ್ವಾಮಿ, ನಂದೀಶ್, ಪ್ರೇಮ್ ಕುಮಾರ್, ಶೇಖರ್ ಸೇರಿದಂತೆ ಹಲವರು ಅಭಿನಂದಿಸಿದರು.