ಮಂಡ್ಯ ಗ್ರಾಮಾಂತರ ಗ್ರಾಪಂಗೆ ಜಯಮ್ಮ ಉಪಾಧ್ಯಕ್ಷೆ

| Published : Jul 09 2025, 12:25 AM IST

ಸಾರಾಂಶ

೨೨ ಸದಸ್ಯ ಬಲವಿರುವ ಮಂಡ್ಯ ಗ್ರಾಮಾಂತರ ಗ್ರಾಮ ಪಂಚಾಯ್ತಿಯಲ್ಲಿ ೧೪ ಮಂದಿ ಚುನಾವಣೆಯಲ್ಲಿ ಪಾಲ್ಗೊಂಡಿದ್ದರು. ಜಯಮ್ಮ ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾದ ತಾಪಂ ಇಒ ಲೋಕೇಶ್ ಮೂರ್ತಿ ಅವಿರೋಧ ಆಯ್ಕೆ ಘೋಷಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಮಂಡ್ಯ ಗ್ರಾಮಾಂತರ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರಾಗಿ ಜಯಮ್ಮ ಅವರು ಅವಿರೋಧವಾಗಿ ಆಯ್ಕೆಯಾದರು. ಈ ಹಿಂದಿನ ಉಪಾಧ್ಯಕ್ಷೆ ಗೀತಾಸ್ವಾಮಿ ಅವರ ಅವಿಶ್ವಾಸದಿಂದ ತೆರವಾಗಿದ್ದ ಸ್ಥಾನಕ್ಕೆ ಮಂಗಳವಾರ ಗ್ರಾಪಂ ಕಚೇರಿಯಲ್ಲಿ ಚುನಾವಣೆ ನಡೆಯಿತು.

೨೨ ಸದಸ್ಯ ಬಲವಿರುವ ಮಂಡ್ಯ ಗ್ರಾಮಾಂತರ ಗ್ರಾಮ ಪಂಚಾಯ್ತಿಯಲ್ಲಿ ೧೪ ಮಂದಿ ಚುನಾವಣೆಯಲ್ಲಿ ಪಾಲ್ಗೊಂಡಿದ್ದರು. ಜಯಮ್ಮ ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾದ ತಾಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಲೋಕೇಶ್ ಮೂರ್ತಿ ಅವರು ಅವಿರೋಧವಾಗಿ ಜಯಮ್ಮ ಆಯ್ಕೆಯನ್ನು ಘೋಷಿಸಿದರು.

ನೂತನ ಉಪಾಧ್ಯಕ್ಷೆ ಜಯಮ್ಮ ಮಾತನಾಡಿ, ನನ್ನನ್ನು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಧ್ಯಕ್ಷರ ಜೊತೆ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು ಎಂದು ಭರವಸೆ ನೀಡಿದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷ ಆನಂದ, ಸದಸ್ಯರಾದ ಲೋಕೇಶ್, ಕುಮಾರ್, ಪಿ.ಎಸ್.ಮಧುಕರ್, ನಂದಿನಿ, ಕಲಾವತಿ, ಪ್ರೇಮ, ನಂದಿನಿ, ಮಮತಾ, ಶಿವಮ್ಮ, ಪ್ರಶೀಲ, ನಿರ್ಮಲ, ವಿಶ್ವ, ಮುಖಂಡರಾದ ಟಿ.ಸಿ.ಶಂಕರೇಗೌಡ, ರೇವಣ್ಣ, ಮಹೇಶ್, ಪಿಡಿಒ ಸುನೀಲ್ ಕುಮಾರ್, ಕಾರ್ಯದರ್ಶಿ ಚೌಡಪ್ಪ, ಗ್ರಾಪಂ ಸಿಬ್ಬಂದಿ ಹಾಜರಿದ್ದರು.