*ಚೇಳೂರು ಗ್ರಾಪಂ ಅಧ್ಯಕ್ಷರಾಗಿ ಜಯಮ್ಮ ಆಯ್ಕೆ

| Published : Jul 10 2024, 12:32 AM IST

ಸಾರಾಂಶ

ತಾಲೂಕಿನ ಚೇಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಜಯಮ್ಮ ರಮೇಶ್, ಉಪಾಧ್ಯಕ್ಷರಾಗಿ ಧನಂಜಯ್ ಅವಿರೋಧವಾಗಿ ಆಯ್ಕೆಯಾದರು.

ಚೇಳೂರು ಗ್ರಾಪಂ ಅಧ್ಯಕ್ಷರಾಗಿ ಜಯಮ್ಮ ಆಯ್ಕೆ

ಉಪಾಧ್ಯಕ್ಷರಾಗಿ ಧನಂಜಯ್ ಅವಿರೋಧವಾಗಿ ಆಯ್ಕೆ

ಗುಬ್ಬಿ ತಾಲೂಕಿನ ಚೇಳೂರು ಗ್ರಾಮ

ನರೇಗಾ ಯೋಜನೆಗೆ ಹೆಚ್ಚು ಹೋತ್ತು ನೀಡಿ ಅಭಿವೃದ್ದಿ‌ - ಜಯಮ್ಮ

ಕನ್ನಡ ಪ್ರಭ ವಾರ್ತೆ ಗುಬ್ಬಿ

ತಾಲೂಕಿನ ಚೇಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಜಯಮ್ಮ ರಮೇಶ್, ಉಪಾಧ್ಯಕ್ಷರಾಗಿ ಧನಂಜಯ್ ಅವಿರೋಧವಾಗಿ ಆಯ್ಕೆಯಾದರು.

ಈ ಹಿಂದೆ ಅಧ್ಯಕ್ಷೆಯಾಗಿದ್ದ ರಂಗಮ್ಮ, ಉಪಾಧ್ಯಕ್ಷ ದಯಾನಂದ್ ನೀಡಿದ ರಾಜೀನಾಮೆ ಹಿನ್ನೆಲೆ ತೆರೆವಾದ ಅಧ್ಯಕ್ಷ ಸ್ಥಾನಕ್ಕೆ ಜಯಮ್ಮ, ಉಪಾಧ್ಯಕ್ಷ ಸ್ಥಾನಕ್ಕೆ ಧನಂಜಯ್ ಇಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯಾದರು.

ಅಧ್ಯಕ್ಷೆ ಜಯಮ್ಮ ಮಾತನಾಡಿ, ಗ್ರಾಪಂ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಅಗತ್ಯ ಮೂಲಭೂತ ಸೌಕರ್ಯ ಒದಗಿಸಿ ಸರ್ಕಾರದ ಸವಲತ್ತು ತರಲು ಎಲ್ಲಾ ಸದಸ್ಯರ ವಿಶ್ವಾಸ ಗಳಿಸಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಉಪಾಧ್ಯಕ್ಷ ಧನಂಜಯ್‌ ಮಾತನಾಡಿ, ನರೇಗಾ ಯೋಜನೆಗೆ ಹೆಚ್ಚು ಹೋತ್ತು ನೀಡಿ ಅಭಿವೃದ್ದಿ‌ ಸೇರಿದಂತೆ ರಸ್ತೆ ಚರಂಡಿ, ನೀರು ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಶ್ರಮಿಸಲಾಗುವುದು ಎಂದರು.

ಚುನಾವಣಾಧಿಕಾರಿ ಗುರು ಪ್ರಸಾದ್‌, ಪಿಡಿಒ ವಸಂತ್, ಗ್ರಾಮ ಪಂಚಾಯಿತಿ ಸದಸ್ಯರಾದ ಸತೀಶ್, ಯತೀಶ್, ರಂಗಮ್ಮ, ದಯಾನಂದ್, ಮುಖಂಡರಾದ ಜಿ.ಎನ್‌.ಬೆಟ್ಟಸ್ವಾಮಿ, ಹಿತೇಶ್, ಶಿವಕುಮಾರ್, ಕೆಂಪರಾಜು ಇದ್ದರು.ಫೋಟೋ: 9 ಜಿ ತಯ ಬ 1

ಗುಬ್ಬಿ ತಾಲೂಕಿನ ಚೇಳೂರು ಗ್ರಾಪಂ ಅಧ್ಯಕ್ಷರಾಗಿ ಜಯಮ್ಮ, ಉಪಾಧ್ಯಕ್ಷರಾಗಿ ಧ‌ನಂಜಯ್ ಅವಿರೋಧವಾಗಿ ಆಯ್ಕೆಯಾದರು.