ಸಾರಾಂಶ
ಚನ್ನಪಟ್ಟಣ: ನಗರದ ಜಟಗಿರಿ ಬೀದಿಯಲ್ಲಿರುವ ಬ್ರಾಹ್ಮಣ ಮಹಾಸಭಾ ಕಚೇರಿಯಲ್ಲಿ ಶ್ರೀ ಶಂಕರಾಚಾರ್ಯರು, ಶ್ರೀ ರಾಮಾನುಜಾಚಾರ್ಯ ಮತ್ತು ಶ್ರೀ ಪರಶುರಾಮನ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಶ್ರೀ ಶಂಕರಾಚಾರ್ಯರು, ಶ್ರೀ ರಾಮಾನುಜಾಚಾರ್ಯ ಹಾಗೂ ಶ್ರೀ ಪರಶುರಾಮನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಮಾಲಾರ್ಪಣೆ ಮಾಡಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.ಕಾರ್ಯಕ್ರಮದಲ್ಲಿ ಮಾತನಾಡಿದ ಬ್ರಾಹ್ಮಣ ಮಹಾಸಭಾ ತಾಲೂಕು ಅಧ್ಯಕ್ಷ ರಾಘವೇಂದ್ರ ಮಯ್ಯ, ವೇದಾಂತ ಕ್ಷೇತ್ರಕ್ಕೆ ಆದಿಗುರು ಶ್ರೀ ಶಂಕರಾಚಾರ್ಯರ ಕೊಡುಗೆ ಅಪಾರವಾಗಿದೆ. ಅವರ ಅಧ್ವೈತ ತತ್ವ ಸಿದ್ಧಾಂತ ಜಗತ್ತಿಗೆ ಬೆಳಕು ನೀಡಿದೆ. ಶ್ರೀ ರಾಮಾನುಜಾಚಾರ್ಯರು ಮಹಾನ್ ತತ್ವಜ್ಞಾನಿ ಹಾಗೂ ಚಿಂತಕರಾಗಿದ್ದರು. ಇನ್ನು ಪರಶುರಾಮರು ಭಗವಾನ್ ವಿಷ್ಣುವಿನ ಆರನೇ ಅವತಾರವೆಂಬ ಪ್ರತೀತಿ ಇದೆ. ಇಂಥ ಪೂಜನೀಯರು ಜನ್ಮತಾಳಿದ ಭೂಮಿಯಲ್ಲಿ ಹುಟ್ಟಿದ ನಾವೇ ಧನ್ಯರು ಎಂದರು.ನಿರ್ದೇಶಕ ಹೊಯ್ಸಳ ಮಾತನಾಡಿ, ಅವರು ಈ ಮೂರು ಜನ ಆಚಾರ್ಯರು ಈ ನೆಲದ ಅಸ್ತಿತ್ವಕ್ಕೆ ನಮ್ಮ ಸಂಸ್ಕೃತಿಯ ಉಳಿವಿಗೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ಇಂದಿನ ಯುವ ಸಮುದಾಯ ಪಾಶ್ಚಾತ್ಯ ಸಂಸ್ಕೃತಿಯತ್ತ ಆಕರ್ಷಿತವಾಗುವುದನ್ನು ಶ್ರೇಷ್ಠವಾದ ನಮ್ಮ ಸಂಸ್ಕೃತಿಯತ್ತ ಆಸಕ್ತಿ ಬೆಳೆಸಿಕೊಳ್ಳಬೇಕು. ಆಚಾರ್ಯತ್ರಯರು ಹಾಕಿಕೊಟ್ಟ ಮೇಲ್ಪಂಕ್ತಿಯಂತೆ ನಡೆಯುವುದನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಬ್ರಾಹ್ಮಣ ಸಭಾಧ್ಯಕ್ಷ ಉಪಾಧ್ಯಕ್ಷ ಜಯಪ್ರಕಾಶ್, ರಾಘವೇಂದ್ರ, ವಿನಯ್, ಶ್ರೀ ಮಠದ ಖಜಾಂಚಿ ಮೋಹನ್, ಹಿರಿಯರಾದ ಅನಂತರಾಮು, ನಾಗೇಂದ್ರ ತಿವಾರಿ, ರಮೇಶ್ ಉಪಸ್ಥಿತರಿದ್ದರು.ಪೊಟೋ೧೩ಸಿಪಿಟ೧:ಚನ್ನಪಟ್ಟಣದ ಜಟಗಿರಿ ಬೀದಿಯಲ್ಲಿರುವ ಬ್ರಾಹ್ಮಣ ಮಹಾಸಭಾ ಕಚೇರಿಯಲ್ಲಿ ಶ್ರೀ ಶಂಕರಾಚಾರ್ಯರು, ಶ್ರೀ ರಾಮಾನುಜಾಚಾರ್ಯ ಮತ್ತು ಶ್ರೀ ಪರಶುರಾಮನ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.