ವಿವಿಧೆಡೆ ಶ್ರೀ ಭಗೀರಥ ಮಹರ್ಷಿಗಳ ಜಯಂತಿ

| Published : May 15 2024, 01:38 AM IST

ಸಾರಾಂಶ

ಮಾನ್ವಿ ಪಟ್ಟಣದ ಬಸವ ವೃತ್ತದಲ್ಲಿ ತಾಲೂಕು ಆಡಳಿತ ಹಾಗೂ ಉಪ್ಪಾರ ಸಮಾಜದವರಿಂದ ಶ್ರೀ ಭಗೀರಥ ಮಹರ್ಷಿಗಳ ಜಯಂತಿ ಆಚರಿಸಲಾಯಿತು.

ಮಾನ್ವಿ: ಪಟ್ಟಣದ ಬಸವ ವೃತ್ತದಲ್ಲಿ ತಾಲೂಕು ಆಡಳಿತ ಹಾಗೂ ಉಪ್ಪಾರ ಸಮಾಜದವರಿಂದ ಶ್ರೀ ಭಗೀರಥ ಮಹರ್ಷಿಗಳ ಜಯಂತ್ಯೋತ್ಸವ ಅಂಗವಾಗಿ ಶ್ರೀ ಭಗೀರಥ ಮಹರ್ಷಿಗಳ ಭಾವಚಿತ್ರಕ್ಕೆ ಮುಖಂಡರಾದ ಶಿವರಾಜನಾಯಕ ಪುಷ್ಪ ಸಮರ್ಪಿಸಿ ಮಾತನಾಡಿ, ಭಗೀರಥ ಮಹರ್ಷಿಗಳು ಪುರಾಣ ಕಾಲದಲ್ಲಿ ಕಠೋರವಾದ ತಪ್ಪಸನ್ನು ಆಚರಿಸಿ ದೇವಲೋಕದಿಂದ ಗಂಗೆಯನ್ನು ಭೂಮಿಗೆ ತರುವ ಮೂಲಕ ಜಗತ್ತನ್ನು ಉದ್ದಾರ ಮಾಡಿದ್ದಾರೆ. ಇಂದು ಉಪ್ಪಾರ ಸಮಾಜದವರು ಶೈಕ್ಷಣಿಕವಾಗಿ, ಅರ್ಥಿಕವಾಗಿ, ಅಭಿವೃದ್ಧಿ ಹೊಂದುವಂತೆ ಕರೆನೀಡಿದರು.

ಉಪಾರ ಸಮಾಜದ ಮುಖಂಡರಾದ ಭೀಮಣ್ಣ ಮಾಸ್ಟರ್, ವೀರೇಶ,ವೀರಣ್ಣ ಅರೋಲಿ, ಕೃಷ್ಣಮೂರ್ತಿ, ಶ್ರೀನಿವಾಸ ಮಾಸ್ಟರ್, ರಾಘವೇಂದ್ರ, ಶಾಂತಪ್ಪ, ಕೃಷ್ಣ, ಗ್ರಾಪಂ ಸದಸ್ಯರಾದ ಯಂಕೋಬ, ಹನುಮಂತ, ರಮೇಶ ಉಪ್ಪಾರ, ವೆಂಕಟೇಶ, ಕೀರಣ, ನರಸಿಂಹ, ನಾಗರಾಜ, ಗುಂಡಪ್ಪ, ತಾಯಪ್ಪ, ಶೀನು, ವೆಂಕಟೇಶ ಸೇರಿ ಇತರರಿದ್ದರು.

ಮಾನ್ವಿ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಭಗೀರಥ ಮಹರ್ಷಿಗಳ ಭಾವಚಿತ್ರಕ್ಕೆ ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹಿದ್ ಪುಷ್ಪ ಸಮರ್ಪಿಸುವ ಮೂಲಕ ಜಯಂತಿ ಆಚರಣೆ ಮಾಡಲಾಯಿತು. ಮುಖಂಡರಾದ ಶಿವರಾಜನಾಯಕ, ಉಪಾರ ಸಮಾಜದವರು ಇದ್ದರು.