ಸಾರಾಂಶ
- ಜ್ವಾಲಾಮಾಲಿನಿ ಜೇಸಿ ಸಂಸ್ಥೆಯ 36 ನೇ ಜೇಸಿ ಸಪ್ತಾಹ- ಸ್ನೇಹ ಮಿಲನ ಉದ್ಘಾಟನಾ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಜೇಸಿ ಸಂಸ್ಥೆ ಯವ ಜನರಿಗೆ ನಾಯಕತ್ವ ಗುಣ ಕಲಿಸಿ ಆತ್ಮವಿಶ್ವಾಸ ಬೆಳೆಸುತ್ತದೆ ಎಂದು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯ ನಂಜುಂಡಸ್ವಾಮಿ ತಿಳಿಸಿದರು.
ಸೋಮವಾರ ಬಸ್ತಿಮಠದ ಮಹಾ ವೀರಭವನದಲ್ಲಿ ಜ್ವಾಲಾಮಾಲಿನಿ ಜೇಸಿ ಸಂಸ್ಥೆ 36 ನೇ ಜೇಸಿ ಸಪ್ತಾಹದಲ್ಲಿ ಮುಖ್ಯ ಭಾಷಣಕಾರರಾಗಿ ಜೇಸಿ ಹಾಗೂ ಮಹಿಳಾ ನಾಯಕತ್ವ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಅಧ್ಯಕ್ಷ ಎಸ್.ಎಸ್.ಜಗದೀಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜೇಸಿ ಸಂಸ್ಥೆಯು ಚಂಚಲ ಮನಸ್ಸನ್ನು ಒಗ್ಗೂಡಿಸುವ ವ್ಯಕ್ತಿ ವಿಕಸನ ಸಂಸ್ಥೆಯಾಗಿದೆ ಎಂದರು.ಮುಖ್ಯ ಅತಿಥಿಯಾಗಿದ್ದ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದ ಮಾತನಾಡಿ, ಜೇಸಿ ಸಂಸ್ಥೆ ಸದಸ್ಯರು ತಾವೂ ಬೆಳೆದು ಸಂಸ್ಥೆಯನ್ನು ಬೆಳೆಸುತ್ತಾರೆ. ಸಮಾಜದ ಕಟ್ಟ ಕಡೆ ವ್ಯಕ್ತಿಗಳನ್ನು ಗುರುತಿಸುತ್ತಾರೆ ಎಂದರು.
ಅತಿಥಿಯಾಗಿದ್ದ ಲೇಖಕಿ ಮೀನಾಕ್ಷಿ ಕಾಂತರಾಜ್ ಮಾತನಾಡಿ, ಅಮೆರಿಕ ದೇಶದಲ್ಲಿ 1910ರಲ್ಲಿ 32 ಮಿತ್ರರು ಸೇರಿ ಕಟ್ಟಿದ ಜೇಸಿ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದು ಪ್ರಂಪಚದ 126 ದೇಶಗಳಲ್ಲಿ ವ್ಯಾಪಿಸಿದೆ. ಜೇಸಿ ಸಂಸ್ಥೆಯಲ್ಲಿ ಗುಣಮಟ್ಟದ ನಾಯಕತ್ವದ ಗುಣ ಕಲಿಸುತ್ತದೆ ಎಂದರು. ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಕೊಪ್ಪ.ನ.ರಾ.ಪುರ ಯೋಜನಾಧಿಕಾರಿ ರಾಜೇಶ್ ಮಾತನಾಡಿದರು.ಇದೇ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆ ಮಕ್ಕಳ ತಜ್ಞ ಡಾ. ಪ್ರಭು ಅವರನ್ನು ಸನ್ಮಾನಿಸಲಾಯಿತು. ಜೇಸಿ ಸಂಸ್ಥೆ ಸೆಲ್ಯೂಟ್ ದ ಸೈಲೆಂಟ್ ವರ್ಕರ್ ಕಾರ್ಯಕ್ರಮದಡಿ ಧ.ಗ್ರಾ.ಯೋಜನೆ ಯೋಜನಾಧಿಕಾರಿ ರಾಜೇಶ್, ಪಪಂ ಅಧ್ಯಕ್ಷೆ ಜುಬೇದ, ಸಾಹಿತಿ ಮೀನಾಕ್ಷಿ ಕಾಂತರಾಜ್, ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಶ್ರೀನಿವಾಸ್, ಸಿಡಿಪಿಒ ಇಲಾಖೆ ಮೇಲ್ವೀಚಾರಕಿ ಸಾವಿತ್ರಿ, ಲೇಖಕಿ ಭಾಗ್ಯನಂಜುಂಡಸ್ವಾಮಿ ಅವರನ್ನು ಗೌರವಿಸಲಾಯಿತು.
ನಂತರ ಮಹಿಳೆಯರಿಗಾಗಿ ವಿವಿಧ ಆಟೋಟ ಸ್ಪರ್ಧೆ ಏರ್ಪಡಿಸಲಾಗಿತ್ತು. ಸಭೆ ಅಧ್ಯಕ್ಷತೆಯನ್ನು ಜೇಸಿ ಸಂಸ್ಥೆ ಅಧ್ಯಕ್ಷ ಸಾರ್ಥಕ್ ಗೌಡ ವಹಿಸಿದ್ದರು. ಜೇಸಿ ಸಂಸ್ಥೆ ನಿಕಟಪೂರ್ವ ಅಧ್ಯಕ್ಷ ಎಂ.ಪಿ.ಮನು, ಜೇಸಿ ಕಾರ್ಯದರ್ಶಿ ಮಿಥುನ್ ಗೌಡ, ಸಪ್ತಾಪದ ನಿರ್ದೇಶಕ ಜೋಯಿ ಬ್ರೋ, ಜೇಸಿ ರೆಟ್ ಅಧ್ಯಕ್ಷೆ ದಿಶಾ ಗೌಡ, ಜೇಸಿ ಕಾರ್ಯದರ್ಶಿ ಮಿಥುನ್ ಗೌಡ, ಸುವಾಸ್ , ದರ್ಶನ್ ಇದ್ದರು.