ಅಂತಾರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆಯಾದ ಜೆಸಿಐ ಸಂಸ್ಥೆಯು ಭಾರತ ದೇಶದಲ್ಲಿ ಉತ್ತಮ ತರಬೇತಿಗಳನ್ನು ನೀಡುತ್ತಾ ಯುವ ನೇತಾರರ ಸುಭದ್ರ ಭವಿಷ್ಯ ರೂಪಿಸುವ ದಿಸೆಯಲ್ಲಿ ವಿಶ್ವಮಟ್ಟದಲ್ಲಿ ಮೊದಲನೇ ಸ್ಥಾನವನ್ನು ಗಳಿಸಿದೆ ಎಂದು ಜೆಸಿಐ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ಆರ್.ಪಿ.ಪಿ.ಭರತ್ ಎನ್.ಆಚಾರ್ಯ ಹೇಳಿದರು.
ಸುಂಟಿಕೊಪ್ಪ : ಅಂತಾರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆಯಾದ ಜೆಸಿಐ ಸಂಸ್ಥೆಯು ಭಾರತ ದೇಶದಲ್ಲಿ ಉತ್ತಮ ತರಬೇತಿಗಳನ್ನು ನೀಡುತ್ತಾ ಯುವ ನೇತಾರರ ಸುಭದ್ರ ಭವಿಷ್ಯ ರೂಪಿಸುವ ದಿಸೆಯಲ್ಲಿ ವಿಶ್ವಮಟ್ಟದಲ್ಲಿ ಮೊದಲನೇ ಸ್ಥಾನವನ್ನು ಗಳಿಸಿದೆ ಎಂದು ಜೆಸಿಐ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ಆರ್.ಪಿ.ಪಿ.ಭರತ್ ಎನ್.ಆಚಾರ್ಯ ಹೇಳಿದರು.
ಜೆ.ಸಿ.ಐ.ವಲಯ 14 ರ ವತಿಯಿಂದ ಕೊಡಗಿನ ಸುಂಟಿಕೊಪ್ಪ ಜೆಸಿಐ ಸಂಸ್ಥೆಯ ಆತಿಥ್ಯದಲ್ಲಿ ಸುಂಟಿಕೊಪ್ಪ ಹೋಬಳಿಯ ಏಳನೇ ಹೊಸಕೋಟೆ ಗ್ರಾಮದ ಸಬಾಸ್ಟಿನ್ ಸಮುದಾಯ ಸಭಾಂಗಣದಲ್ಲಿ ಭಾನುವಾರ ಅಭಿವೃದ್ಧಿ ಮತ್ತು ಬೆಳವಣಿಗೆ ಕುರಿತಂತೆ ಏರ್ಪಡಿಸಿದ್ದ ಪ್ರಭಾತಾ ಅಭಿವೃದ್ಧಿಯ ಸಮ್ಮೇಳನ ಸಂಭ್ರಮ 2026ವನ್ನು ಉದ್ಘಾಟಿಸಿ ಮಾತನಾಡಿದರು.ಜೆಸಿಐ ವಲಯ 14 ರ ವಲಯಾಧ್ಯಕ್ಷ ಪ್ರಜ್ವಲ್ ಎಸ್.ಜೈನ್ ಮಾತನಾಡಿ, ಜೆಸಿಐ ಸಂಸ್ಥೆಯು ಯುವ ಮನಸ್ಸುಗಳ ಕನಸನ್ನು ನನಸು ಮಾಡುವುದು ಮತ್ತು ಅವರಲ್ಲಿ ತಮ್ಮ ಬದುಕಿನ ಭವಿಷ್ಯ ರೂಪಿಸಲು ಆತ್ಮವಿಶ್ವಾಸ ಬೆಳೆಸುವ ಕಾರ್ಯದಲ್ಲಿ ತೊಡಗಿದೆ ಎಂದರು.
ಜೆಸಿಐ ಸಂಸ್ಥೆಯ ರಾಷ್ಟ್ರೀಯ ಉಪಾಧ್ಯಕ್ಷೆ ಯಶಸ್ವಿನಿ ಮಾತನಾಡಿ, ಯುವಕರಲ್ಲಿ ಉತ್ತಮ ಜ್ಞಾನ, ಅಪ್ರತಿಮ ಜ್ಞಾಣ್ಮೆ, ಛಲ ಮತ್ತು ಗುರಿ ಇದ್ದರೆ ಏನಾನ್ನದಾರೂ ಸಾಧಿಸಬಹುದು ಎಂದರು.ಅಧ್ಯಕ್ಷತೆ ವಹಿಸಿದ್ದ ಸಮ್ಮೇಳನದ ನಿರ್ದೇಶಕ ಎಚ್.ಆರ್.ಪ್ರಶಾಂತ್ ಮಾತನಾಡಿ, ಯುವಕರು ತಮ್ಮ ತಮ್ಮ ಕ್ಷೇತ್ರದಲ್ಲಿ ಸಾಧನೆಯ ಮೈಲಿಗಲ್ಲು ಸಾಧಿಸಲು ಇಂತಹ ಸಮ್ಮೇಳನಗಳು ಉತ್ತಮ ವೇದಿಕೆ ಒದಗಿಸುತ್ತವೆ ಎಂದರು.
ಜೆಸಿಐ ಸಂಸ್ಥೆಯ ವಲಯ ಉಪಾಧ್ಯಕ್ಷ ಜಗತ್, ಕಾರ್ಯದರ್ಶಿ ಶೃತಿ ರೋಹಿತ್, ಅತಿಥೇಯ ಸುಂಟಿಕೊಪ್ಪ ಜೆಸಿಐ ಸಂಸ್ಥೆಯ ಅಧ್ಯಕ್ಷ ಜಯಪ್ರಕಾಶ್, ಕಾರ್ಯದರ್ಶಿ ಎಚ್.ಮಂಜುನಾಥ್, ಕಾರ್ಯಕ್ರಮ ನಿರ್ದೇಶಕಿ ಫೆಲ್ಸಿ ಡೆನಿಸ್, ವಲಯ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಕಾಯರ್ ಮಾರ್ ದೇವಿಪ್ರಸಾದ್, ಮಧೋಸ್ ಪೂವಯ್ಯ, ಸಂಸ್ಥೆಯ ವಲಯ 14 ರ ವಿವಿಧ ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಇದ್ದರು.ವಿದ್ಯಾರ್ಥಿನಿ ಸಾತ್ವಿಕ ಸತೀಶ್ರಿಂದ ಭರತ ನಾಟ್ಯ ನಡೆಯಿತು. ಜೆಸಿಐ ನ ಮಾಜಿ ಅಧ್ಯಕ್ಷ ಝಾಯ್ದ್ ಅಹ್ಮದ್ ನಿರ್ವಹಿಸಿದರು. ಜೇಸೀಗಳಾದ ಡೆನಿಸ್ ಡಿ''''''''''''''''''''''''''''''''ಸೋಜ, ಬಿ.ಕೆ.ಸತೀಶ್, ಮನು ಅಚ್ಚಮ್ಮಯ್ಯ, ಅತಿಥಿಗಳ ಪರಿಚಯಿಸಿದರು. ಮೊನಾಲಿ ಡಿ.ಪ್ರಸಾದ್ ಜೇಸಿ ವಾಣಿ ವಾಚಿಸಿದರು.
ಮೆರವಣಿಗೆ : ಜೆಸಿಐ ಸಮ್ಮೇಳನಕ್ಕೂ ಮುನ್ನ ಏಳನೇ ಹೊಸಕೋಟೆ ಗ್ರಾಮದಲ್ಲಿ ಜೆಸಿಐ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ಭರತ್ ಎನ್.ಆಚಾರ್ಯ ಅವರನ್ನು ಅಲಂಕೃತ ವಾಹನದಲ್ಲಿ ಮೆರವಣಿಗೆಯ ಮೂಲಕ ಸಮ್ಮೇಳನದ ಸಭಾಂಗಣಕ್ಕೆ ಕರೆ ತರಲಾಯಿತು. ಇವರೊಂದಿಗೆ ಸಂಸ್ಥೆಯ ರಾಷ್ಟ್ರೀಯ ಉಪಾಧ್ಯಕ್ಷ ಯಶಸ್ವಿನಿ, ವಲಯ ಅಧ್ಯಕ್ಷ ಪ್ರಜ್ವಲ್ ಎಸ್ ಜೈನ್, ಸಮ್ಮೇಳನದ ನಿರ್ದೇಶಕ ಎಚ್.ಆರ್. ಪ್ರಶಾಂತ್, ಅತಿಥೇಯ ಸುಂಟಿಕೊಪ್ಪ ಜೆಸಿಐ ಘಟಕದ ಅಧ್ಯಕ್ಷ ಜಯಪ್ರಕಾಶ್ ಮೆರವಣಿಗೆಯ ವಾಹನದಲ್ಲಿ ತೆರಳಿದರು.