ಸಾರಾಂಶ
ಬಾಳೆಹೊನ್ನೂರುಜೇಸಿಐ ಸಂಸ್ಥೆ ವಿಶ್ವದಲ್ಲಿ ಯುವಜನರ ವ್ಯಕ್ತಿತ್ವ ವಿಕಸನ ಮೂಡಿಸುತ್ತಿರುವ ಮುಂಚೂಣಿ ಸಂಸ್ಥೆ ಎಂದು ಜೇಸಿಐ ಭಾರತದ ರಾಷ್ಟ್ರಾಧ್ಯಕ್ಷ ಅಂಕುರ್ ಜುಂಜುನ್‌ವಾಲಾ ಹೇಳಿದರು.
ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆ ಕಾರ್ಯ ಚಟುವಟಿಕೆ ವೀಕ್ಷಣೆ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುಜೇಸಿಐ ಸಂಸ್ಥೆ ವಿಶ್ವದಲ್ಲಿ ಯುವಜನರ ವ್ಯಕ್ತಿತ್ವ ವಿಕಸನ ಮೂಡಿಸುತ್ತಿರುವ ಮುಂಚೂಣಿ ಸಂಸ್ಥೆ ಎಂದು ಜೇಸಿಐ ಭಾರತದ ರಾಷ್ಟ್ರಾಧ್ಯಕ್ಷ ಅಂಕುರ್ ಜುಂಜುನ್‌ವಾಲಾ ಹೇಳಿದರು.ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆ ಕಾರ್ಯ ಚಟುವಟಿಕೆ ವೀಕ್ಷಣೆಗೆ ನಡೆದ ಅಧಿಕೃತ ಭೇಟಿ ನೀಡಿ ಮಾತನಾಡಿದರು. ಜೇಸಿ ಸಂಸ್ಥೆ ಯುವಜನರಲ್ಲಿ ವ್ಯಕ್ತಿತ್ವ ವಿಕಸನ, ನಾಯಕತ್ವದ ಗುಣ ಬೆಳೆಸುವ ಕೆಲಸ ಮಾಡುತ್ತಿದೆ. ಭಾರತ ಮಾತ್ರವಲ್ಲದೇ ವಿಶ್ವದ ಅನೇಕ ರಾಜಕೀಯ ನಾಯಕರು, ಪ್ರತಿಷ್ಠಿತ ಉದ್ಯಮಿಗಳು, ಗಣ್ಯರು, ಸಚಿವರು ಜೇಸಿಐ ಸಂಸ್ಥೆ ಸದಸ್ಯರಾಗಿ ಕಾರ್ಯ ನಿರ್ವಹಿಸಿ ತರಬೇತಿ ಪಡೆದು ಯಶಸ್ವಿಯಾಗಿ ಸಮಾಜದಲ್ಲಿ ಅಗ್ರಗಣ್ಯ ಸ್ಥಾನ ಪಡೆದುಕೊಂಡಿರುವುದು ಗಮನಾರ್ಹ.
ಜೇಸಿಐ ಸಂಸ್ಥೆ ಕೇವಲ ವ್ಯಕ್ತಿತ್ವ ವಿಕಸನ ಮಾತ್ರವಲ್ಲದೇ ಸಮಾಜ ಸೇವೆಯಲ್ಲೂ ಸಕ್ರಿಯವಾಗಿದ್ದು, ಸಮಾಜದ ವಿವಿಧ ಸ್ತರಗಳಲ್ಲಿ ತನ್ನದೇ ಆದ ರೀತಿಯಲ್ಲಿ ಕಾರ್ಯನಿರ್ವಹಿಸುವ ಮೂಲಕ ತನ್ನ ಕೊಡುಗೆ ವಿಶೇಷವಾಗಿ ಪ್ರಸ್ತುತಪಡಿಸುತ್ತಿದೆ ಎಂದರು.ಸಂಸ್ಥೆ ವಿಶೇಷ ಶಾಶ್ವತ ಕಾರ್ಯಕ್ರಮವನ್ನು ಸಮಾಜಕ್ಕೆ ಮಾದರಿಯಾಗಿ ನೀಡುತ್ತಿದೆ. ಯುವಜನರನ್ನು ಹೆಚ್ಚು ಸಂಖ್ಯೆ ಯಲ್ಲಿ ಜೇಸಿಐಗೆ ಸೇರಿಸುವುದರೊಂದಿಗೆ ಅವರನ್ನು ಸಮಾಜದ ಮುಂಚೂಣಿಗೆ ತರುವ ಕೆಲಸ ಮಾಡುತ್ತಿದೆ ಎಂದರು.ಜೇಸಿಐ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಡಾ.ನವೀನ್ ಲಾಯ್ಡ್ ಮಿಸ್ಕಿತ್, ವಲಯಾಧ್ಯಕ್ಷ ವಿಜಯಕುಮಾರ್, ಸ್ಥಳೀಯ ಘಟಕದ ಅಧ್ಯಕ್ಷ ಇಬ್ರಾಹಿಂ ಶಾಫಿ, ಪೂರ್ವ ವಲಯಾಧ್ಯಕ್ಷೆ ಯಶಸ್ವಿನಿ, ವಲಯ ಕಾರ್ಯದರ್ಶಿ ಸುಪ್ರಿತ್, ವಲಯಾಧಿಕಾರಿ ಎನ್.ಶಶಿಧರ್, ಪ್ರಮುಖರಾದ ಸೈಯದ್ ಫಾಜಿಲ್ ಹುಸೇನ್, ಚೈತನ್ಯ ವೆಂಕಿ, ವಿ.ಅಶೋಕ್, ಸಿ.ವಿ.ಸುನೀಲ್, ಪ್ರಕಾಶ್ ಕೂಳೂರು, ರಂಜಿತ್ ಮತ್ತಿತರರು ಹಾಜರಿದ್ದರು.೧೨ಬಿಹೆಚ್‌ಆರ್ ೨: ಬಾಳೆಹೊನ್ನೂರಿನ ಜೇಸಿಐ ಸಂಸ್ಥೆಗೆ ಭೇಟಿ ನೀಡಿದ ಜೇಸಿಐ ಭಾರತದ ರಾಷ್ಟಾçಧ್ಯಕ್ಷ ಅಂಕುರ್ ಜುಂಜುನ್‌ವಾಲಾ ಅವರನ್ನು ಸಂಸ್ಥೆಯ ಅಧ್ಯಕ್ಷ ಇಬ್ರಾಹಿಂ ಶಾಫಿ ಸ್ವಾಗತಿಸಿದರು. ಡಾ.ನವೀನ್, ವಿಜಯಕುಮಾರ್, ಯಶಸ್ವಿನಿ, ಸುಪ್ರಿತ್, ಶಶಿಧರ್, ಸೈಯ್ಯದ್ ಫಾಜಿಲ್, ಚೈತನ್ಯ ವೆಂಕಿ ಇದ್ದರು.