ಸಾರಾಂಶ
ಸವಣೂರು: ಯುವ ಜನತೆಯನ್ನು ಸಾಮಾಜಿಕ ಚಿಂತನೆಗೆ ಒಳಪಡಿಸಿ ನಿರಂತರ ಶೈಕ್ಷಣಿಕ ಸೇರಿದಂತೆ ವಿವಿಧ ರಂಗದಲ್ಲಿ ಕಾರ್ಯ ಪ್ರವೃತ್ತರಾಗಿರುವ ಜೆಸಿಐ ಕುರಿತು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಉದ್ಯಮಿ ಜೆಸಿ ಪ್ರಕಾಶಸಿಂಗ್ ಜಮಾದಾರ ತಿಳಿಸಿದರು.ಪಟ್ಟಣದ ಆರ್ಥಿಕ ಸಲಹಾ ಕೇಂದ್ರ ಅಮೂಲ್ಯ ಸಭಾ ಭವನದಲ್ಲಿ ಜೆಸಿಐ ನಮ್ಮ ಸವಣೂರ ಘಟಕದ ವತಿಯಿಂದ ಏರ್ಪಡಿಸಿದ್ದ ಜೆಸಿ ಸಪ್ತಾಹ ಸಮಾರಂಭವನ್ನು ಉದ್ಘಾಟಿಸಿ, ಸನ್ಮಾನ ಸ್ವೀಕರಿಸಿ ಮಾತನಾಡಿದರು.ಜೆಸಿಐ ವತಿಯಿಂದ ಒಂದು ವಾರ ನಿತ್ಯ ಸಾಮಾಜಿಕ ಕಾರ್ಯಕ್ರಮ ಆಯೋಜಿಸಿ ಜಾಗೃತಿ ಕೈಗೊಳ್ಳುತ್ತಿರುವ ತಂಡವನ್ನು ಇತರರು ಪ್ರೋತ್ಸಾಹಿಸುವದು ಅವಶ್ಯವಾಗಿದೆ ಎಂದರು.ಜೆಸಿಐ ನಮ್ಮ ಸವಣೂರು ಘಟಕದ ಅಧ್ಯಕ್ಷ ಬಸವರಾಜ ಚಳ್ಳಾಳ ಮಾತನಾಡಿ, ಜೆಸಿ ಸಪ್ತಾಹದ ಅಂಗವಾಗಿ ಏಳುದಿನ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮೊದಲ ದಿನ ಸಪ್ತಾಹ ಉದ್ಘಾಟನೆಯೊಂದಿಗೆ ಕೃತಜ್ಞತಾ ದಿನ ಆಚರಿಸಲಾಗುತ್ತಿದೆ. ನಂತರ, ವೃದ್ಧಾಶ್ರಮದಲ್ಲಿನ ಹಿರಿಯರಿಗೆ ಯೋಗ ಕಾರ್ಯಕ್ರಮ, ಮಾದಕ ದ್ರವ್ಯಗಳ ಬಗ್ಗೆ ಜಾಗೃತಿ ಕಾರ್ಯಕ್ರಮ, ಪರಿಸರ ಸಂರಕ್ಷಣಾ ಜಾಗೃತಿ ಕಾರ್ಯಕ್ರಮ, ಯುವ ಜನತೆಗೆ ಕೌಶಲ್ಯ ಅಭಿವೃದ್ಧಿ ತರಬೇತಿ ಕುರಿತು ಕಾರ್ಯಾಗಾರ, ಭೂ ಪ್ರದೇಶಗಳ ಸಂರಕ್ಷಣೆ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ, ಹವಾಮಾನ ವೈಪರಿತ್ಯದ ಬಗ್ಗೆ ಜಾಗೃತಿ, ಯುವ ದನಿ ಸಮೀಕ್ಷೆ, ಉದ್ಯೋಗಗಳ ಮಾಹಿತಿ ಕಾರ್ಯಕ್ರಮ, ಮಹಿಳೆಯರಿಗೆ ವೃತ್ತಿಪರ ತರಬೇತಿ ಕಾರ್ಯಾಗಾರ ಸೇರಿದಂತೆ ವಿವಿಧ ಕಾರ್ಯಕ್ರಮಗಳೊಂದಿಗೆ ಜೆಸಿ ಸಪ್ತಾಹ ಆಚರಿಸಲಾಗುತ್ತಿದೆ ಎಂದರು.ಸಂಪನ್ಮೂಲ ವ್ಯಕ್ತಿ, ಶಿಕ್ಷಕ ವಿದ್ಯಾಧರ ಕುತನಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಜೆಸಿಐ ನಮ್ಮ ಸವಣೂರ ಪದಾಧಿಕಾರಿಗಳಾದ ಸುನಂದಾ ಚಿನ್ನಾಪೂರ, ಹರೀಶ ಹಿರಳ್ಳಿ, ಪುಷ್ಪಾ ಬತ್ತಿ, ಪ್ರೇಮಾ ಚಳ್ಳಾಳ, ರೂಪ ಹಿರಳ್ಳಿ ಪಾಲ್ಗೊಂಡಿದ್ದರು. ಆನಂದ ಮತ್ತಿಗಟ್ಟಿ ನಿರ್ವಹಿಸಿದರು.