ಬಿಜೆಪಿ ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್‌ಗೆ ಅನುಕೂಲವೇ ಆಯ್ತು

| Published : Nov 14 2023, 01:16 AM IST

ಬಿಜೆಪಿ ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್‌ಗೆ ಅನುಕೂಲವೇ ಆಯ್ತು
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲವೇ ಆಗಿದೆ ಎಂದು ಮಾಗಡಿ ಶಾಸಕ ಬಾಲಕೃಷ್ಣ ಹಾಸನದಲ್ಲಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹಾಸನ

ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲವೇ ಆಗಿದೆ ಎಂದು ಮಾಗಡಿ ಶಾಸಕ ಬಾಲಕೃಷ್ಣ ಹೇಳಿದರು.

ನಗರದಲ್ಲಿ ಭಾನುವಾರ ಹಾಸನಾಂಬೆ ದೇವಿ ದರ್ಶನ ಮಾಡಿದ ಬಳಿಕ ಜಿಲ್ಲಾಡಳಿತದಿಂದ ಗೌರವ ಸ್ವೀಕರಿಸಿ ಮಾಧ್ಯಮದೊಂದಿಗೆ ಮಾತನಾಡಿ, ಸಿಎಂ ಬದಲಾವಣೆ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಈ ಎಲ್ಲಾ ವಿಚಾರವನ್ನ ನಮ್ಮ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನಮ್ಮ ಶಾಸಕರು ತೀರ್ಮಾನ ಮಾಡೋದಕ್ಕೆ ಆಗೊಲ್ಲ. ಬಿಜೆಪಿ ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್‌ಗೆ ಅನುಕೂಲ ಆಯ್ತು. ಜೆಡಿಎಸ್‌ನಿಂದ ನಮ್ಮ ಮತಗಳು ವಿಭಜನೆ ಆಗ್ತಾ ಇತ್ತು. ಜಾತ್ಯಾತೀತ ಮತಗಳು ಜೆಡಿಎಸ್ ನಿಂದ ವಿಭಜನೆ ಆಗ್ತಾ ಇತ್ತು. ಆ ಮತಗಳು ಸಂಪೂರ್ಣವಾಗಿ ನಮಗೆ ಬರುವುದರಿಂದ ನಮಗೆ ಅನುಕೂಲ ಆಗುತ್ತೆ. ಹಾಸನಾಂಬೆ ಆಶೀರ್ವಾದ ಮಾಡಿದ್ರೆ ನಾನು ಮಂತ್ರಿ ಆಗುತ್ತೇನೆ. ಆ ತಾಯಿಯ ಆಶೀರ್ವಾದ ಬೇಕಲ್ಲ. ಅದಕ್ಕಾಗೆ ಹಾಸನಾಂಬೆ ತಾಯೀನ ಕೇಳೋದಕ್ಕೆ ಬಂದಿದ್ದೇನೆ. ಮಂತ್ರಿಗಿರಿ ಬಗ್ಗೆ ಪಕ್ಷ ಯಾವುದೇ ಆಶ್ವಾಸನೆ ನೀಡಿಲ್ಲ. ಆಶ್ವಾಸನೆ ಮೇಲೆ ರಾಜಕೀಯ ಮಾಡೋದಕ್ಕೆ ಆಗೋದಿಲ್ಲ ಎಂದರು. ಆವತ್ತಿನ ರಾಜಕೀಯ ಸಮಯ ಸಂದರ್ಭಕ್ಕೆ ರಾಜಕೀಯ ಮಾಡಬಹುದು. ಅನೇಕ ಜನರಿಗೆ ಪಕ್ಷಕ್ಕೆ ಬರೋ ಸಂದರ್ಭ ಆಶ್ವಾಸನೆ ಕೊಡಬಹುದು. ಆ ಆಶ್ವಾಸನೆಗಳನ್ನ ಎಲ್ಲಾ ಸಂದರ್ಭಗಳಲ್ಲೂ ಈಡೇರಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಜೆಡಿಎಸ್ ಬಿಜೆಪಿ ಹೊಂದಾಣಿಕೆ ಆಗೋದು ಸರಿ ಇಲ್ಲ ಎಂಬುದು ನಮ್ಮ ಭಾವನೆ. ನಾವು ಒಟ್ಟಿಗಿದ್ದಾಗ ಕುಮಾರಸ್ವಾಮಿಗೆ ದೇವೇಗೌಡರಿಗೆ ಬಿಜೆಪಿ ಜೊತೆ ಹೊಂದಾಣಿಕೆ ಬಗ್ಗೆ ಹೇಳಿದ್ದು, ನಾವು ಜಾತ್ಯತೀತ ನಿಲುವು ಇರುವವರು. ಅವರ ಜೊತೆ ಹೊಂದಾಣಿಕೆ ಬೇಡ ಎಂದಿದ್ರು. ಇಂದು ಬಿಜೆಪಿ ಜೊತೆ ಹೋಗಿದ್ದಾರೆ. ಅದು ಅವರಿಗೆ ಬಿಟ್ಟ ವಿಚಾರ. ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಇದೆ ಎಂಬ ವಿಚಾರವಾಗಿ ಉತ್ತರಿಸಿದ ಶಾಸಕರು, ಯಾವ ಪಕ್ಷದಲ್ಲಿ ಬಣ ಇಲ್ಲ, ಎಲ್ಲಾ ಪಕ್ಷದಲ್ಲೂ ಇದೆ ಎಂದು ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ಬಣ ರಾಜಕೀಯವನ್ನು ಪರೋಕ್ಷವಾಗಿ ಶಾಸಕರು ಒಪ್ಪಿಕೊಂಡಂತಿತ್ತು. ಬಣ ರಾಜಕೀಯ ಇದ್ದ ಕೂಡಲೆ ಪಕ್ಷಕ್ಕೆ, ಸರ್ಕಾರಕ್ಕೆ ತೊಂದರೆ ಆಗುತ್ತೆ ಅಂತಾ ಅಲ್ಲಾ. ಒಬ್ಬೊಬ್ರು ಮುಖ್ಯಮಂತ್ರಿ ಮತ್ತೊಬ್ಬರು ಉಪಮುಖ್ಯಮಂತ್ರಿ ಅನುಯಾಯಿ ಆಗಿರ್ತಾರೆ. ಅದನ್ನೇ ಬಣ ರಾಜಕೀಯ ಎಂದು ಭಾವಿಸುವುದು ಸೂಕ್ತವಲ್ಲ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ನೇಮಕ ವಿಚಾರವಾಗಿ ಮಾಧ್ಯಮದೊಂದಿಗೆ ಮಾತನಾಡಿ, ಅವರ ಪಕ್ಷದ ಅಧ್ಯಕ್ಷರಾಗಿದ್ದಾರೆ ಅಷ್ಟೆ. ಅದಕ್ಕೂ ನಮಗೂ ಸಂಬಂಧವಿಲ್ಲ. ಮೊದಲನೆಯದಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಪಾಪ ಅಲ್ಲೂ ಕೂಡ ಅನೇಕ ಜನ ಆಕಾಂಕ್ಷಿಗಳಿದ್ದರು. ಇದು ಯಾವ ರೀತಿ ಪರಿಣಾಮ ಇವರ ಮೇಲೆ ಬೀಳುತ್ತೆ ಕಾದು ನೋಡಬೇಕು ಎಂದು ಹೇಳಿದರು.