ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿಧರ್ಮಸ್ಥಳದಲ್ಲಿ ಸಮಾವೇಶ ಮಾಡಲಿಕ್ಕೆ ಹೊರಟಿರುವ ಜೆಡಿಎಸ್, ಬಿಜೆಪಿಯವರಿಗೆ ಮಾಡುವುದಕ್ಕೆ ಬೇರೆ ಕೆಲಸ ಇಲ್ಲ ಎಂದು ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಆ ಎರಡೂ ಪಕ್ಷಗಳು ಜನರ ಬದುಕಿನ ಬಗ್ಗೆ ಮಾತನಾಡುವುದಿಲ್ಲ, ಕೇವಲ ಜನರ ಭಾವನೆ ಮೇಲೆ, ಧರ್ಮದ ಮೇಲೆ ರಾಜಕಾರಣ ಮಾಡುತ್ತಾರೆ ಎಂದು ಆರೋಪಿಸಿದರು.ತಾವು ಪ್ರಥಮ ಬಾರಿಗೆ ಕೃಷ್ಣಮಠಕ್ಕೆ ಭೇಟಿ ನೀಡಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೃಷ್ಣ, ಗಣಪತಿ ಮತ್ತು ನಿಮ್ಮ ಮಾಧ್ಯಮದವರ ಆಶೀರ್ವಾದ ಬೇಕು. ಎಲ್ಲರ ಆಶೀರ್ವಾದವೂ ಬೇಕಲ್ವಾ? ಎಂದರು.ಸೆಪ್ಟೆಂಬರ್ ಕ್ರಾಂತಿಯ ಹಿನ್ನೆಲೆಯಲ್ಲಿ ದೇವಾಲಯಗಳಿಗೆ ಭೇಟಿ ಅಂತ, ಅದೆಲ್ಲ ಏನಿಲ್ಲ. ದೇವಾಲಯಗಳಿಗೆ ಭೇಟಿ ನನ್ನ ರುಟೀನ್ ಪದ್ಧತಿ. ಈ ಹಿಂದೆಯೇ ಕೃಷ್ಣಮಠದಿಂದ ಬನ್ನಿ ಎಂದು ಆಹ್ವಾನ ಇತ್ತು, ಬರಲಿಕ್ಕೆ ಸಾಧ್ಯವಾಗಿರಲಿಲ್ಲ. ಈಗ ನಮ್ಮ ಸರ್ಕಾರ ಬಂದ ಮೇಲೆ ಮತ್ತೆ ಆಹ್ವಾನ ನೀಡಿದ್ದಾರೆ, ಅದಕ್ಕೆ ಬಂದಿದ್ದೇನೆ ಎಂದು ಹೇಳಿದರು.ಮೈಸೂರು ದಸರಾ ಉದ್ಘಾಟನೆಯ ಬಗ್ಗೆ ರಾಜಮಾತೆ ಅವರ ಹೇಳಿಕೆಯ ಬಗ್ಗೆ ಉಪಮುಖ್ಯಮಂತ್ರಿ ಅವರು ಯಾವುದೇ ಪ್ರತಿಕ್ರಿಯೆ ನೀಡಲೊಪ್ಪದೆ ತೆರಳಿದರು.