ಸಾರಾಂಶ
ಯಾವುದೇ ಸಂಘರ್ಷ, ಗಲಭೆಗೆ ಅವಕಾಶ ನೀಡದೆ ಕಾನೂನಾತ್ಮಕವಾಗಿ ಮತ್ತು ಶಾಂತಿಯುತವಾಗಿ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಮಾಡುವ ಮೂಲಕ ಪ್ರಧಾನಿ ಮೋದಿ ದೊಡ್ಡ ಇತಿಹಾಸವನ್ನು ನಿರ್ಮಿಸಿದ್ದಾರೆ. ಇದರಿಂದ ರಾಷ್ಟ್ರದ ಘನತೆ ಹೆಚ್ಚಿಸಿ ವಿದೇಶದಲ್ಲೂ ಕೂಡ ಭಾರತದ ಭವ್ಯ ಪರಂಪರೆಯನ್ನು ಗುರುತಿಸುವ ಕೆಲಸ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ಶ್ರೀರಾಮಮಂದಿರ ಉದ್ಘಾಟನೆ ಪ್ರಯುಕ್ತ ಪಟ್ಟಣದ ಡಾ.ರಾಜಕುಮಾರ ವೃತ್ತದಲ್ಲಿ ಶ್ರೀರಾಮನ ಬೃಹತ್ ಕಟೌಟ್‌ಗೆ ಭಾರೀ ಗಾತ್ರದ ಹೂವಿನಹಾರ ಹಾಕಿ ಪುಷ್ಪಾರ್ಚನೆ ನೆರವೇರಿಸಲಾಯಿತು.ಬಿಜೆಪಿ ಮುಖಂಡ ಎಚ್.ಎನ್.ಮಂಜುನಾಥ್ ನೇತೃತ್ವದಲ್ಲಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್‌ಕುಮಾರ್ ಸಮ್ಮುಖದಲ್ಲಿ ಶ್ರೀರಾಮನ ಪೂಜೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಸಿ.ಎಸ್.ಪುಟ್ಟರಾಜು ಹಾಗೂ ಇಂದ್ರೇಶ್‌ಕುಮಾರ್ ರಾಮ ಜನ್ನ ಭೂಮಿಯಲ್ಲಿ ರಾಮ ಮಂದಿರ ಕಟ್ಟಲು ಹೋರಾಟ ನಡೆಸಿದ ಪಟ್ಟಣದ ಆರ್‌ಎಸ್‌ಎಸ್ ಸಂಘಟಕರಾದ ಶಿವಣ್ಣ ಕೆನ್ನಾಳು, ಚಿಕ್ಕಣ್ಣ ಆಟೋರಾಜಣ್ಣ ಅವರನ್ನು ಸನ್ನಾನಿಸಿ ಗೌರವಿಸಲಾಯಿತುಸಿ.ಎಸ್.ಪುಟ್ಟರಾಜು ಮಾತನಾಡಿ, ಯಾವುದೇ ಸಂಘರ್ಷ, ಗಲಭೆಗೆ ಅವಕಾಶ ನೀಡದೆ ಕಾನೂನಾತ್ಮಕವಾಗಿ ಮತ್ತು ಶಾಂತಿಯುತವಾಗಿ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಮಾಡುವ ಮೂಲಕ ಪ್ರಧಾನಿ ಮೋದಿ ದೊಡ್ಡ ಇತಿಹಾಸವನ್ನು ನಿರ್ಮಿಸಿದ್ದಾರೆ. ಇದರಿಂದ ರಾಷ್ಟ್ರದ ಘನತೆ ಹೆಚ್ಚಿಸಿ ವಿದೇಶದಲ್ಲೂ ಕೂಡ ಭಾರತದ ಭವ್ಯ ಪರಂಪರೆಯನ್ನು ಗುರುತಿಸುವ ಕೆಲಸ ಮಾಡಿದ್ದಾರೆ ಎಂದು ಪ್ರಶಂಸಿಸಿದರು.
ಇದೇ ಸಂದರ್ಭದಲ್ಲಿ ಶ್ರೀರಾಮನ ಭಕ್ತರು ಪುಷಾರ್ಚನೆ ಮಾಡಿ ಭಕ್ತಿಗೆ ಪಾತ್ರರಾದರು. ದೇವರಾಜು, ಕೆನ್ನಾಳು ಶ್ರೀಕಂಠೇಗೌಡ, ಸುಬ್ರಹ್ಮಣಿ, ಶಾಂತಿ ಪ್ರಸಾದ್ ಇದ್ದರು.ವೈಭವದ ದ್ವಾದಶಿ ಉತ್ಸವ, ದೀಪೋತ್ಸವಕ್ಕೆ ಮಾಜಿ ಸಚಿವ ಸಿ.ಎಸ್ .ಪುಟ್ಟರಾಜು ಚಾಲನೆ
ಮೇಲುಕೋಟೆ:ರಾಮಪ್ರಿಯ ಚೆಲುವನಾರಾಯಣಸ್ವಾಮಿಗೆ ದ್ವಾದಶಿ ಮತ್ತು ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ ನಡೆದ ಹಿನ್ನೆಲೆಯಲ್ಲಿ ವಿಶೇಷ ಮಂಗಳವಾದ್ಯದೊಂದಿಗೆ ಸೋಮವಾರ ಸಂಜೆ ವೈಭವದ ಉತ್ಸವ ನೆರವೇರಿತು.ದ್ವಾದಶಿ ಮಹಾವಿಷ್ಣುವಿನ ಆರಾಧನೆ ಹಾಗೂ ಕೃಪಾಕಟಾಕ್ಷಕ್ಕೆ ಪ್ರಶಸ್ತದಿನವಾಗಿದ್ದು ಮೇಲುಕೋಟೆ ದೇವಾಲಯದಲ್ಲಿ ದ್ವಾದಶಿ ಉತ್ಸವ ನಡೆಯುತ್ತಿದೆ. ಆಯೋಧ್ಯೆಯಲ್ಲಿ ಮಹಾವಿಷ್ಣುವಿಗೆ ಪ್ರಿಯವಾದ ದಿನವೇ ಬಾಲರಾಮನ ಪ್ರತಿಷ್ಠಾಪನೆ ನಡೆದಿರುವುದು ಹೆಚ್ಚು ಸಮಂಜಸ ಎಂದು ಪಾರುಪತ್ತೇಗಾರರಾದ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ ಮತ್ತು ಎಂ.ಎನ್ ಪಾರ್ಥಸಾರಥಿ ಮಾಹಿತಿ ನೀಡಿದ್ದಾರೆಮೇಲುಕೋಟೆ ಪಟ್ಟಾಭಿರಾಮನ ಸನ್ನಿಧಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಆಗಮಿಸಿ ಶ್ರೀರಾಮಚಂದ್ರನ ದರ್ಶನ ಪಡೆದಿದ್ದಾರೆ.