ಜೆಡಿಎಸ್‌ಗೆ 25 ವರ್ಷ, ರಾಜ್ಯಕ್ಕೆ ಹಲವು ಕೊಡುಗೆ: ಎಂ.ಬಿ. ಸದಾಶಿವ

| Published : Nov 21 2025, 02:45 AM IST

ಸಾರಾಂಶ

ಪ್ರಾದೇಶಿಕ ಪಕ್ಷವಾಗಿ ಜೆಡಿಎಸ್‌ ಸ್ಥಾಪನೆಯಾಗಿ 25 ವರ್ಷಗಳಾಗಿದ್ದು, ರಾಜ್ಯಕ್ಕೆ ತನ್ನದೇ ಆದ ಕೊಡುಗೆ ನೀಡಿದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಬಿ. ಸದಾಶಿವ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಪ್ರಾದೇಶಿಕ ಪಕ್ಷವಾಗಿ ಜೆಡಿಎಸ್‌ ಸ್ಥಾಪನೆಯಾಗಿ 25 ವರ್ಷಗಳಾಗಿದ್ದು, ರಾಜ್ಯಕ್ಕೆ ತನ್ನದೇ ಆದ ಕೊಡುಗೆ ನೀಡಿದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಬಿ. ಸದಾಶಿವ ಹೇಳಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಪ್ರಾದೇಶಿಕ ಪಕ್ಷವಾಗಿ ರಾಜಕೀಯಕ್ಕೆ ಬಂದರೂ, ಸಾಕಷ್ಟು ಏಳು ಬೀಳುಗಳನ್ನು ಕಂಡು, ಬೇರೆ ಬೇರೆ ಚಿಹ್ನೆಗಳಿಂದ ಗುರುತಿಸಿಕೊಂಡು ಅಂತಿಮವಾಗಿ ತೆನೆಹೊತ್ತ ಮಹಿಳೆಯ ಚಿಹ್ನೆಯಿಂದ ಸ್ಪರ್ಧಿಸುತ್ತಾ, ಕಳೆದ 25 ವರ್ಷದಲ್ಲಿ ಸಮಾಜದಲ್ಲಿ ಗುರುತಿಸಿಕೊಂಡಿದೆ ಎಂದರು.ಇಷ್ಟೂ ವರ್ಷಗಳಲ್ಲಿ ಬೇರೆ ಪಕ್ಷಗಳೊಂದಿಗೆ ಸಮಿಶ್ರ ಸರ್ಕಾರವನ್ನು ರಚಿಸಿದರೂ, ತಾನು ಹಾಕಿಕೊಂಡ ಲಕ್ಷ್ಮಣ ರೇಖೆಯನ್ನು ದಾಟದೇ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಹೇಳಿದರು.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಗ್ರಾಮ ವಾಸ್ತವ್ಯದ ಮೂಲಕ ಸರ್ಕಾರವನ್ನು ಗ್ರಾಮಗಳಿಗೆ ಕೊಂಡೊಯ್ಯುವ ಕೆಲಸ ಮಾಡಿದರು. ಗುಡಿಸಲಿನ ಬಳಿಗೆ ಸರ್ಕಾರ ಎಂಬ ಯೋಜನೆ ಮೂಲಕ ಹೊಸ ಅಧ್ಯಾಯ ಆರಂಭಿಸಿದರು. ರೈತರ ಸಾಲ ಮನ್ನಾ, ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡವರಿಗೆ ಉತ್ತಮ ಮನೆ, ಕೆಪಿಎಲ್ ಶಾಲೆಗಳನ್ನು ಪ್ರಾರಂಭಿಸಿ, ಒಂದೇ ಸೂರಿನಡಿಯಲ್ಲಿ ಕೆ.ಜಿ.ಯಿಂದ ಪಿಯುಸಿವರೆಗೆ ಕಲಿಯಲು ಅವಕಾಶ, ಪ್ರತಿ ಹೋಬಳಿಗೆ ಒಂದೊಂದು ಶಾಲೆ ಪ್ರಾರಂಭಿಸಿದರು. ಆದರೆ ಈಗಿನ ಸರ್ಕಾರಕ್ಕೆ ಅಲ್ಲಿ ಕೆಲಸ ಮಾಡುವವರಿಗೆ ಸಂಬಳ ಕೊಡಲೂ ಆಗುತ್ತಿಲ್ಲ ಎಂದು ಆರೋಪಿಸಿದರು.ಪ್ರಮುಖರಾದ ಮೊಹಮದ್ ಕುಂಞಿ, ಪವನ್‌ಚಂದ್ರ, ವಸಂತ ಪೂಜಾರಿ, ಇಕ್ಬಾಲ್ ಮೂಲ್ಕಿ, ಅಕ್ಷಿತ್ ಸುವರ್ಣ, ಹೈದರ್ ಪರ್ತಿಪಾಡಿ, ವಿನ್ಸೆಂಟ್ ಪಿರೇರಾ, ಯತೀಶ್ ಸುವರ್ಣ, ಕನಕದಾಸ ಮತ್ತಿತರರು ಇದ್ದರು.