ಸಾರಾಂಶ
ಶಿರಹಟ್ಟಿ ತಾಲೂಕು ಕಾರ್ಯದರ್ಶಿ ಡಾ.ಶರಣಪ್ಪ ಹೂಗಾರ ಹಾಗೂ ಲಕ್ಷ್ಮೇಶ್ವರ ತಾಲೂಕಾಧ್ಯಕ್ಷ ಪ್ರವೀಣ ಬಾಳಿಕಾಯಿ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಕಳೆದ ಒಂದು ವರ್ಷದಿಂದ ಗ್ಯಾರಂಟಿಯ ನೆಪ ಮಾಡಿಕೊಂಡು ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದೆ
ಶಿರಹಟ್ಟಿ: ಭ್ರಷ್ಟಾಚಾರ ಹಾಗೂ ಜನವಿರೋಧಿ ಕಾಂಗ್ರೆಸ್ ಸರ್ಕಾರವನ್ನು ವಜಾಗೊಳಿಸಬೇಕೆಂದು ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರಿಂದ ಮಂಗಳವಾರ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವೈ. ಮುಧೋಳ, ಶಿರಹಟ್ಟಿ ತಾಲೂಕು ಕಾರ್ಯದರ್ಶಿ ಡಾ.ಶರಣಪ್ಪ ಹೂಗಾರ ಹಾಗೂ ಲಕ್ಷ್ಮೇಶ್ವರ ತಾಲೂಕಾಧ್ಯಕ್ಷ ಪ್ರವೀಣ ಬಾಳಿಕಾಯಿ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಕಳೆದ ಒಂದು ವರ್ಷದಿಂದ ಗ್ಯಾರಂಟಿಯ ನೆಪ ಮಾಡಿಕೊಂಡು ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದೆ, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ನಿತ್ಯ ಕೊಲೆ-ಸುಲಿಗೆ ನಡೆಯುತ್ತಿವೆ, ದಲಿತರ ಏಳಿಗೆಗಾಗಿ ಮೀಸಲಿಟ್ಟ ಅನುದಾನ ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಿಕೊಂಡಿದೆ. ವಾಲ್ಮೀಕಿ ನಿಗಮದಲ್ಲಿ ₹187 ಕೋಟಿಗಳ ಹರಗಣ, ಮುಡಾ ನಿವೇಶನ ಹಗರಣ ನೋಡಿದರೆ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳಗಿರುವುದು ಎದ್ದು ಕಾಣುತ್ತಿದೆ. ಹೀಗಾಗಿ ಜನ ವಿರೋಧಿ ಕಾಂಗ್ರೆಸ್ ಸರ್ಕಾರ ವಜಾಗೊಳಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದರು.ಇದಕ್ಕೂ ಮೊದಲು ಪಟ್ಟಣದ ಶ್ರೀಆಂಜನೇಯ ದೇವಸ್ಥಾನದಿಂದ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ, ಬಸವೇಶ್ವರ ವೃತ್ತ, ನೆಹರು ವೃತ್ತದ ಮೂಲಕ ತಹಸೀಲ್ದಾರ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.
ಸಿದ್ದಲಿಂಗಯ್ಯ ಹೊಂಬಾಳಿಮಠ, ಶಿವಯ್ಯ ಬಾಳಿಹಳ್ಳಿಮಠ, ಎಂ.ಕೆ.ಕೊಟ್ಟಿಮಠ, ದೇವಪ್ಪ ಮಲಸಮುದ್ರ, ಮೌಲಾಹುಸೇನ್ ತಂಬೂಲಿ, ರಾಯಸಾಬ್ ಢಾಲಾಯತ, ಹನುಮಂತಪ್ಪ ಮರಿಗೌಡ್ರ, ಜೋಗೆಪ್ಪ ಆದಿ, ಲಲಿತಾ ಕಲ್ಲಪ್ಪನವರ, ಬಾದಶಾ ಭಗವಾನ, ರಾಜೇಸಾಬ್ ಢಾಲಾಯತ, ವಿನಾಯಕ ಪರಬತ, ವೈ.ಡಿ. ಹೂಗಾರ, ಎಂ.ಎ.ಪಾಟೀಲ, ವೀರೇಶ ಬಣಗಾರ, ಬಸಪ್ಪ ಬಳ್ಳಾರಿ, ಮಮ್ಮದ ಇಸಾಕ್, ಮಾಬುಸಾಬ್ ಮಜ್ಜೂರ, ಫಕ್ಕೀರಪ್ಪ ತುಳಿ, ಅಭಿಷೇಕ ಕಂಬಳಿ, ಮರಿಯಪ್ಪ ಬಳ್ಳಾರಿ, ರೇಖಾ ಬೆಂತೂರ, ಮಲ್ಲು ಮಲ್ಲಸಮುದ್ರ, ರೇಖಾ ಬೆಂತೂರ, ಮಮ್ಮದಲಿ ಮುಳಗುಂದ, ಅಲ್ಲಾಭಕ್ಷಿ ಮುಳಗುಂದ, ಸಾಗರ ಮುಂಡರಗಿ, ಜಯರಾಜ ವಾಲಿ, ಅಭಿಷೇಕ ಕಂಬಳಿ ಮುಂತಾದವರು ಉಪಸ್ಥಿತರಿದ್ದರು.