ಐಪಿಎಸ್ ಅಧಿಕಾರಿ ಎಮ.ಚಂದ್ರಶೇಖರ್‌ ಅಮಾನತಿಗೆ ಜೆಡಿಎಸ್‌ ಆಗ್ರಹ

| Published : Oct 02 2024, 01:12 AM IST

ಐಪಿಎಸ್ ಅಧಿಕಾರಿ ಎಮ.ಚಂದ್ರಶೇಖರ್‌ ಅಮಾನತಿಗೆ ಜೆಡಿಎಸ್‌ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಚಿಂಚೋಳಿಯಲ್ಲಿ ಅಧಿಕಾರಿ ಎಮ.ಚಂದ್ರಶೇಖರರನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿ ತಾಲೂಕು ಜೆಡಿಎಸ್ ಮುಖಂಡರು ಮನವಿ ಸಲ್ಲಿಸಿದರು.

ಚಿಂಚೋಳಿ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ರವರ ಬಗ್ಗೆ ಐಪಿಎಸ್ ಅಧಿಕಾರಿ ಎಮ.ಚಂದ್ರಶೇಖರ ಅವಹೇಳನಕಾರಿ ಪದ ಬಳಕೆ ಮಾಡಿದ್ದು ಕೂಡಲೇ ಅವರನ್ನು ಸೇವೆಯಿಂದ ಅಮಾನತು ಗೊಳಿಸಬೇಕೆಂದು ಆಗ್ರಹಿಸಿ ಪಟ್ಟಣದಲ್ಲಿ ಜೆಡಿಎಸ್ ಕಾರ್ಯಕರ್ತರು ಭಾರಿ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ ಮಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ತಾಲೂಕ ಜೆಡಿಎಸ್ ಅಧ್ಯಕ್ಷ ರವಿಶಂಕರರೆಡ್ಡಿ ಮುತ್ತಂಗಿ ನೇತೃತ್ವದಲ್ಲಿ ನಡೆದ ಬೃಹತ್‌ ಪ್ರತಿಭಟನೆಯು ಪಟ್ಟಣದ ಕನಕದಾಸ ಸರ್ಕಲ್‌ನಿಂದ ಚಂದಾಪೂರ ತಾಲೂಕು ಆಡಳಿತಸೌಧವರೆಗೆ ಅಧಿಕಾರಿ ಚಂದ್ರಶೇಖರ ವಿರುದ್ಧ ಘೋಷಣೆ ಕೂಗಿದರು. ಮುತ್ತಂಗಿ ಮಾತನಾಡಿ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಅವಹೇಳನಕಾರಿ ಪದಬಳಕೆ ವ್ಯಕ್ತಿತ್ವಕ್ಕೆ ಧಕ್ಕೆ ತಂದಿರುವ ಕಾರಣ ಅವರನ್ನು ಕರ್ತವ್ಯದಿಂದ ತಕ್ಷಣ ಅಮಾನತು ಗೊಳಿಸಬೇಕು. ಅಲ್ಲದೇ ಉನ್ನತ ಮಟ್ಟದ ತನಿಖೆ ನಡೆಸಿ ಶಿಸ್ತು ಕ್ರಮ ಕೈಕೊಳ್ಳಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜೆಡಿಎಸ್ ಹಿರಿಯ ಮುಖಂಡ ಸೈಯದ ನಿಯಾಜಲಿ, ಪುರಸಭೆ ಸದಸ್ಯ ನಾಗೇಂದ್ರಪ್ಪ ಗುರಂಪಳ್ಳಿ, ಹಣಮಂತ ಪೂಜಾರಿ, ಹಣಮಂತರೆಡ್ಡಿ ದೋಳಿಕೋಳ, ಸಿದ್ದಯ್ಯ ಸ್ವಾಮಿ ಸುಲೇಪೇಟ ಮಾತನಾಡಿದರು. ಕಾರ್ಯಕರ್ತರಾದ ಮಂಜೂರು ಅಹೆಮದ, ಎಸ್.ಕೆ.ಮುಕ್ತಾರ, ಶೆಖರರೆಡ್ಡಿ ತಾಜಲಾಪೂರ, ಅವಿನಾಶರೆಡ್ಡಿ ಪೋಲಿಸಪಾಟೀಲ, ತಾಹೇರ ಪಟೇಲ ಚಿಮ್ಮನಚೋಡ, ತಾಹೇಬಅಲಿ, ಬಸವರಾಜ ಶಿರಸಿ, ರವಿ ಮಾಳಗಿಗಾರಂಪಳ್ಳಿ ಇನ್ನಿತರಿದ್ದರು. ವಿವಿಧ ಬೇಡಿಕೆಗಳ ಮನವಿಪತ್ರವನ್ನು ತಹಸೀಲ್ದಾರ್‌ ಸುಬ್ಬಣ್ಣ ಜಮಖಂಡಿಗೆ ಸಲ್ಲಿಸಲಾಯಿತು.