ಜೆಡಿಎಸ್ ನೆಲೆ ಇನ್ನಷ್ಟು ವಿಸ್ತರಿಸಿ

| Published : Aug 29 2025, 01:00 AM IST

ಸಾರಾಂಶ

ಜೆಡಿಎಸ್‌ ಪಕ್ಷವನ್ನು ಇನ್ನೂ ಬಲಿಷ್ಠವಾಗಿ ಸಂಘಟಿಸುವ ಅಗತ್ಯವಿದೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಪಕ್ಷ ಹೆಚ್ಚಿನ ಸ್ಥಾನ ಪಡೆಯಲು ಇದು ಅಗತ್ಯ. ಸದಸ್ಯತ್ವ ಹೆಚ್ಚಳ ಹಾಗೂ ನಿರಂತರ ಜನ ಸಂಪರ್ಕದಿಂದ ಪಕ್ಷದ ನೆಲೆಯನ್ನು ವಿಸ್ತರಿಸುವುದು ಕಾರ್ಯಕರ್ತರ ಜವಾಬ್ದಾರಿಯಾಗಿದೆ.

ಕೊಪ್ಪಳ:

ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ತನ್ನದೇ ನೆಲೆ ಇದ್ದರೂ ಸಹ ಪಕ್ಷವನ್ನು ಇನ್ನಷ್ಟು ಬಲಪಡಿಸುವ ಅಗತ್ಯ ಇದೆ ಎಂದು ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ ಹೇಳಿದರು.

ಗುರುವಾರ ಪಕ್ಷದ ಜಿಲ್ಲಾ ಕಚೇರಿಯಲ್ಲಿ ನಡೆದ ಸದಸ್ಯತ್ವ ನೋಂದಣಿ ಅಭಿಯಾನ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷವನ್ನು ಇನ್ನೂ ಬಲಿಷ್ಠವಾಗಿ ಸಂಘಟಿಸುವ ಅಗತ್ಯವಿದೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಪಕ್ಷ ಹೆಚ್ಚಿನ ಸ್ಥಾನ ಪಡೆಯಲು ಇದು ಅಗತ್ಯ. ಸದಸ್ಯತ್ವ ಹೆಚ್ಚಳ ಹಾಗೂ ನಿರಂತರ ಜನ ಸಂಪರ್ಕದಿಂದ ಪಕ್ಷದ ನೆಲೆಯನ್ನು ವಿಸ್ತರಿಸುವುದು ಕಾರ್ಯಕರ್ತರ ಜವಾಬ್ದಾರಿಯಾಗಿದೆ ಎಂದರು.ಸೆಪ್ಟೆಂಬರ್ ಮೊದಲ ವಾರ ನಿಖಿಲ್ ಕುಮಾರಸ್ವಾಮಿ ಅವರ ಕಾರ್ಯಕ್ರಮ ಕೊಪ್ಪಳದಲ್ಲಿ ನಿಗದಿಯಾಗಿತ್ತು. ಆದರೆ, ಸರಣಿ ಹಬ್ಬಗಳ ಹಿನ್ನೆಲೆಯಲ್ಲಿ ದಸರಾ ಹಬ್ಬದ ನಂತರ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಜಿಲ್ಲಾಧ್ಯಕ್ಷ ಸುರೇಶ ಭೂಮರಡ್ಡಿ ಮಾತನಾಡಿ, ಮೈತ್ರಿ ಪಕ್ಷವಾದ ಬಿಜೆಪಿ ಮುಖಂಡರ ಹಾಗೂ ಕಾರ್ಯಕರ್ತರ ಜತೆ ಸ್ನೇಹ-ಸಮನ್ವಯ ಸರಿಯಾಗಿ ಸಾಧಿಸಬೇಕು. ಪ್ರತಿ ಹಂತದಲ್ಲಿಯೂ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಬೇಕು. ಆಡಳಿತ ಪಕ್ಷದ ದುರಾಡಳಿತದ ಬಗ್ಗೆ ಜನರಲ್ಲಿ ಮನವರಿಕೆ ಮಾಡಿಕೊಡಬೇಕು. ಕಡಿಮೆ ಮಾತು ಹೆಚ್ಚು ಕೃತಿ ಕಾರ್ಯಕರ್ತರ ಮೂಲ ಮಂತ್ರವಾಗಬೇಕು ಎಂದು ಕರೆ ನೀಡಿದರು.

ಸಂಸ್ಕೃತಿ ವಿಭಾಗದ ಜಿಲ್ಲಾಧ್ಯಕ್ಷ ಮಂಜುನಾಥ್ ಸೊರಟೂರ ಮಾತನಾಡಿ, ಎಚ್‌.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ರೈತರ ಸಾಲ ಮನ್ನಾ ಮಾಡಿದರು. ಆ ಯೋಜನೆಯ ಅತಿ ಹೆಚ್ಚು ಫಲಾನುಭವಿಗಳು ಜಿಲ್ಲೆಯಲ್ಲಿದ್ದಾರೆ. ಪ್ರತಿಯೊಬ್ಬ ಫಲಾನುಭವಿಯನ್ನು ಸಂಪರ್ಕಿಸಿ ಪಕ್ಷದ ಕುರಿತು ತಿಳಿ ಹೇಳಬೇಕು.‌ ಆ ಮೂಲಕ ಹೆಚ್ಚಿನ ಸದಸ್ಯತ್ವ ನೋಂದಣಿ ಆಗುವಂತೆ ನೋಡಿಕೊಳ್ಳಬೇಕೆಂದು ತಿಳಿಸಿದರು.

ಒಬಿಸಿ ಘಟಕದ ಜಿಲ್ಲಾಧ್ಯಕ್ಷ ಕರಿಯಪ್ಪ ಹಾಲವರ್ತಿ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆ ನಂತರ ನಮ್ಮ ವಿರೋಧಿಗಳು ನಮ್ಮ ಕಾರ್ಯಕರ್ತರಿಗೆ ಇನ್ನಿಲ್ಲದ ತೊಂದರೆ ಕೊಟ್ಟರು. ಆದರೂ ಸಹ ನಾವು ಪಕ್ಷದಲ್ಲಿ ಉಳಿದು ಪಕ್ಷವನ್ನು ಅಧಿಕಾರಕ್ಕೆ ತರಲು ಪಣ ತೊಟ್ಟಿದ್ದೇವೆ ಎಂದರು.

ಪಕ್ಷದ ಹಿರಿಯ ಮುಖಂಡ ಸಂಗಮೇಶ ಡಂಬಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಜಡಿ ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷ ಮೂರ್ತ್ಯಪ್ಪ ಹಿಟ್ನಾಳ, ಜಿಲ್ಲಾ ಚುನಾವಣೆ ಅಧಿಕಾರಿ ಶಿವಕುಮಾರ ಏಣಗಿ, ಜಿಲ್ಲಾ ಕ್ರೀಡಾ ವಿಭಾಗದ ಅಧ್ಯಕ್ಷ ಸೈಯದ್ ಮೊಹಮ್ಮದ್ ಹುಸೇನಿ ಬಲ್ಲೆ, ತಾಲೂಕು ಅಧ್ಯಕ್ಷ ವೀರೇಶಗೌಡ ದಳಪತಿ, ನೇಕಾರ ವಿಭಾಗ ಜಿಲ್ಲಾಧ್ಯಕ್ಷ ಮಾರುತಿ, ಒಬಿಸಿ ತಾಲೂಕು ಅಧ್ಯಕ್ಷ ಬಸವರಾಜ್, ಗಂಗಾವತಿ ತಾಲೂಕ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಕನಕಗಿರಿ ತಾಲೂಕಾಧ್ಯಕ್ಷ ನೀಲಪ್ಪ, ಯುವ ಘಟಕದ ಜಿಲ್ಲಾಧ್ಯಕ್ಷ ರವಿಕುಮಾರ ನೀರಲಗಿ, ಸಂಗಮೇಶ ಡಂಬಳ, ದೇವರಾಜ್ ಮಡ್ಡಿ, ಶಿವರಾಜ್ ಶೆಟ್ಟಿ, ಕೃಷ್ಣ, ವಿಶ್ವನಾಥ್, ಭೀಮಪ್ಪ ಗುದಗಿ, ಕಾರ್ತಿಕ್, ಮಾರುತಿ ಬನ್ನಿಕೊಪ್ಪ, ವಿನೋದ, ಬಸವರಾಜ್ ಕಲಿಕೇರಿ, ಸಿದ್ದಪ್ಪ ಕವಲೂರು, ಮಾರುತಿ ಹರಿಜನ, ರವಿ ಮೇದಾರ, ಪ್ರಜ್ವಲ್ ರೆಡ್ಡಿ, ರಾಮು ಕಲಕೇರಿ, ಚಂದ್ರಶೇಖರ ಅನುಕುಂಟೆ, ಬಸಲಿಂಗಪ್ಪಗೌಡ ನಿಲೋಗಲ್, ಹೇಮಂತ ಕಲಕೇರಿ, ಸುರೇಶ ಪೂಜಾರಿ ದದೇಗಲ್ ಹಾಜರಿದ್ದರು.

ಕೊಪ್ಪಳ ನಗರ ಘಟಕ ಅಧ್ಯಕ್ಷ ಸೋಮನಗೌಡ ಹೊಗರನಾಳ ವಂದಿಸಿದರು.