ಸಾರಾಂಶ
ಹಲವು ವರ್ಷಗಳಿಂದ ಪಕ್ಷಕ್ಕಾಗಿ ದುಡಿದು ಪ್ರಮಾಣಿಕವಾಗಿ ಸೇವೆ ಸಲ್ಲಿಸಿದ್ದೀರಿ. ಪಕ್ಷ ಹಳೆಯದಾದರೂ ಸಹ ಪಕ್ಷದಲ್ಲಿ ಹಲವು ಸ್ಥಾನ ಮಾನಗಳನ್ನು ಅಧಿಕೃತವಾಗಿ ಕುಮಾರಣ್ಣ ಅವರ ಮಾರ್ಗದರ್ಶನದಲ್ಲಿ ಆಯ್ಕೆ ಮಾಡಲಾಗಿದೆ. ತಮಗೆ ನೀಡಲಾದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಬಲವರ್ಧನೆಗೆ ಜೊತೆಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಕ್ಷದಲ್ಲಿನ ನಿಷ್ಠಾವಂತರನ್ನು ಗುರುತಿಸಿ ಬೆಳಸಲು ಜೆಡಿಎಸ್ ಪಕ್ಷ ತೀರ್ಮಾನಿಸಿದೆ. ಪಕ್ಷದ ಸಂಘಟನೆಗೆ ತಮ್ಮೆಲ್ಲರ ಸಹಕಾರದ ಅಗತ್ಯವಿದೆ ಎಂದು ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದರು.ತಮ್ಮ ನಿವಾಸದಲ್ಲಿ ನೂತನವಾಗಿ ಆಯ್ಕೆಯಾದ ಜೆಡಿಎಸ್ ತಾಲೂಕು ಅಧ್ಯಕ್ಷ ಹಾಗೂ ಪದಾಧಿಕಾರಿಗಳನ್ನು ಅಭಿನಂದಿಸಿ ಮಾತನಾಡಿ, ಅನೇಕ ಕಾರಣಗಳಿಂದ ನಾವು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಬೇಕಾಯಿತು. ಮತ್ತೆ ಅಂತಹ ತಪ್ಪುಗಳು ಆಗದ ರೀತಿ ನೋಡಿಕೊಂಡು ಪಕ್ಷದ ಬಲವರ್ದನೆಗೆ ಎಲ್ಲರೂ ಮುಂದಾಗಬೇಕು ಎಂದರು.
ಹಲವು ವರ್ಷಗಳಿಂದ ಪಕ್ಷಕ್ಕಾಗಿ ದುಡಿದು ಪ್ರಮಾಣಿಕವಾಗಿ ಸೇವೆ ಸಲ್ಲಿಸಿದ್ದೀರಿ. ಪಕ್ಷ ಹಳೆಯದಾದರೂ ಸಹ ಪಕ್ಷದಲ್ಲಿ ಹಲವು ಸ್ಥಾನ ಮಾನಗಳನ್ನು ಅಧಿಕೃತವಾಗಿ ಕುಮಾರಣ್ಣ ಅವರ ಮಾರ್ಗದರ್ಶನದಲ್ಲಿ ಆಯ್ಕೆ ಮಾಡಲಾಗಿದೆ. ತಮಗೆ ನೀಡಲಾದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಬಲವರ್ಧನೆಗೆ ಜೊತೆಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ 3ರಿಂದ 4 ಸ್ಥಾನ ನೀಡುವುದಾಗಿ ಮಾತುಕತೆ ನಡೆಸಲಾಗಿದೆ. ಮಂಡ್ಯ, ಹಾಸನ, ಕೋಲಾರ, ತುಮಕೂರು ಅಥವಾ ದೊಡ್ಡಬಳ್ಳಾಪುರ ನೀಡುವುದಾಗಿ ಚರ್ಚಿಸಲಾಗಿದೆ. ಬಹುತೇಕ ಮಂಡ್ಯ ಜಿಲ್ಲೆಯನ್ನು ಜಿಡಿಎಸ್ ಪಕ್ಷಕ್ಕೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಈ ವೇಳೆ ಜೆಡಿಎಸ್ ನೂತನ ತಾಲೂಕು ಅಧ್ಯಕ್ಷ ಜಿಪಂ ಮಾಜಿ ಸದಸ್ಯ ಮಹದೇವಪುರ ದಶರಥ, ಕಾರ್ಯಾಧ್ಯಕ್ಷರಾದ ತಡಗವಾಡಿ ಟಿ.ಎಂ ದೇವೇಗೌಡ, ಬಾಬುರಾಯನಕೊಪ್ಪಲು ಬಿ.ಎಸ್ ತಿಲಕ್‌ಕುಮಾರ್, ತಗ್ಗಹಳ್ಳಿ ಟಿ.ಎಂ. ಪ್ರಸನ್ನ, ಶ್ರೀನಿವಾಸ ಅಗ್ರಹಾರ ರಾಮಕೃಷ್ಣ, ಕಾರ್ಯದರ್ಶಿ ಸಬ್ಬನಕುಪ್ಪೆ ಶಂಕರೇಗೌಡ, ನಗರ ಘಟಕ ಅಧ್ಯಕ್ಷ ಎಸ್.ಪ್ರಕಾಶ್, ಕಾರ್ಯಾಧ್ಯಕ್ಷ ಕೆ.ನಾರಾಯಣ ಅವರನ್ನು ಅಭಿನಂದಿಸಿದರು.